ನಗರಾಭಿವೃದ್ಧಿಯ ದಿಟ್ಟ ಹೆಜ್ಜೆ – ನಮ್ಮ ಚಿತ್ತದ ಭವಿಷ್ಯ!:‌ ಡಿ. ಸುಧಾಕರ್

ನಗರಾಭಿವೃದ್ಧಿಯ ದಿಟ್ಟ ಹೆಜ್ಜೆ – ನಮ್ಮ ಚಿತ್ತದ ಭವಿಷ್ಯ!

ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿ, ಮೂರು ದೊಡ್ಡ ಯೋಜನೆಗಳಿಗೆ ಚಾಲನೆ.

📌 ಚಿತ್ರದುರ್ಗ ಪ್ರಮುಖ ರಸ್ತೆ ಅಗಲೀಕರಣ – ಪ್ರವಾಸಿ ಮಂದಿರ ವೃತ್ತದಿಂದ ಕನಕ ವೃತ್ತದವರೆಗೆ 25 ಮೀ ಅಗಲದ ರಸ್ತೆ ನಿರ್ಮಾಣ. ಸಂಚಾರ ದಟ್ಟಣೆ, ಪಾರ್ಕಿಂಗ್, ಫುಟ್‌ಪಾತ್ ಹಾಗೂ ಒಳಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.

📌 ಮೆಡಿಕಲ್ ಕಾಲೇಜು ಸ್ಥಳಾಂತರ – ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಡಿಸಿ ಆಫೀಸ್ ಕಟ್ಟಡವನ್ನು ಮೆಡಿಕಲ್ ಕಾಲೇಜಿನ ನರ್ಸಿಂಗ್, ಪ್ಯಾರಾ ಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸ್ ಮತ್ತು ಆಡಳಿತ ವಿಭಾಗಗಳಿಗೆ ಸ್ಥಳಾಂತರಿಸುವ ಯೋಜನೆ.

📌 ಹೊಸ ಡಿಸಿ ಆಫೀಸ್ ನಿರ್ಮಾಣ – ನಗರದ ಒಳಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಕಚೇರಿ ಕಟ್ಟಡ ನಿರ್ಮಾಣ.

ಈ ನಿರ್ಧಾರಗಳು ನಮ್ಮ ನಗರದ ಭವಿಷ್ಯವನ್ನು ರೂಪಿಸುವ ನವಚೇತನ ಆಗಿ ಕೆಲಸ ಮಾಡಲಿವೆ. ಎಲ್ಲರ ಸಹಕಾರದಿಂದ, ಕಾಲಮಿತಿಯೊಳಗೆ ಈ ಕನಸುಗಳನ್ನು ನಿಜಗೊಳಿಸುತ್ತೇವೆ.

ಇದು ನಮ್ಮ ನಗರ… ನಮ್ಮ ಹೊಣೆಗಾರಿಕೆ… ನಮ್ಮ ಅಭಿವೃದ್ಧಿ!

ಈ ಸಂದರ್ಭದಲ್ಲಿ ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ,ಟಿ. ರಘುಮೂರ್ತಿ, ಡಾ. ಎಂ. ಚಂದ್ರಪ್ಪ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಡಿ ಯು ಡಿ ಸಿ ಯೋಜನಾ ನಿರ್ದೇಶಕಿ, ವಿಶೇಷ ಭೂಸ್ವಾಧೀನಾಧಿಕಾರಿಗಳು, ನಗರಸಭೆ ಪೌರಾಯುಕ್ತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ನಗರಾಭಿವೃದ್ಧಿಯ ದಿಟ್ಟ ಹೆಜ್ಜೆ – ನಮ್ಮ ಚಿತ್ತದ ಭವಿಷ್ಯ!:‌ ಡಿ. ಸುಧಾಕರ್