ಚಿತ್ರದುರ್ಗ: ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದ ವತಿಯಿಂದ ಇದೇ ಆಗಸ್ಟ್ 31ರಂದು ಭಾನುವಾರ ಚಿತ್ರದುರ್ಗ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ 2024-25ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಪಡೆದ ಜಿಲ್ಲಾ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ.
ವಿದ್ಯಾರ್ಥಿಗಳು ತಮ್ಮ ಸ್ವ-ವಿವರದೊಂದಿಗೆ ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್, ಎರಡು ಪಾಸ್‍ಪೋರ್ಟ್ ಸೈಜ್ ಫೋಟೋದೊಂದಿಗೆ ಅರ್ಜಿಯನ್ನು ಚಿತ್ರದುರ್ಗ ನಗರದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಸಲ್ಲಿಸುವಂತೆ ಸೂಚಿಸಿದೆ.
ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ತಾಲ್ಲೂಕಿನ ಬಿ.ಹೆಚ್.ಶಿವಪ್ರಕಾಶ್-9535384938, ಕೆ.ರೇವಣ್ಣ-9844788755, ಹೆಚ್.ದೇವರಾಜ-9663159396, ಹಿರಿಯೂರು ತಾಲ್ಲೂಕಿನ ರಾಮಣ್ಣ-924843504, ಶ್ರೀನಿವಾಸ್-9663433957, ಮೊಳಕಾಲ್ಮುರು ತಾಲ್ಲೂಕಿನ ಮಹಾಲಿಂಗಪ್ಪ-9972997738, ಕೆ.ತಿಪ್ಪೇಸ್ವಾಮಿ-9916574799, ಚಳ್ಳಕೆರೆ ತಾಲ್ಲೂಕಿನ ನಾಗರಾಜ್-7899259382, ಹನುಮಂತಪ್ಪ-9980448871, ಹೊಳಲ್ಕೆರೆ ತಾಲ್ಲೂಕಿನ ಸಿದ್ದಲಿಂಗಮ್ಮ-9980764205, ಹನುಮಂತಪ್ಪ ಹೇಮಂತ್-9945765723, ಹೊಸದುರ್ಗ ತಾಲ್ಲೂಕಿನ ಮೂರ್ತಪ್ಪ-9448272972, ರಾಮಕೃಷ್ಣಪ್ಪ-9008680069 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
