ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ಜೀವನಕ್ಕೆ ಬುನಾದಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ದಲೈಲಾಮಾ ಅವರ 90ನೇ ಜನ್ಮ ದಿನದ ಲೋಗೋ ಬಿಡುಗಡೆ / ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿ ಚಿತ್ರದುರ್ಗ: ಬಸವಣ್ಣನವರ ಕ್ರಾಂತಿ, ಭಗವಾನ್ ಬುದ್ಧರ ಸಮಾನತೆಯ ಶಾಂತಿ, ಅಂಬೇಡ್ಕರ್ ಅವರ ಜ್ಞಾನ ಈ ಮೂರು ವಿಷಯಗಳು ಸಮ್ಮಿಲನ ಆದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೆಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು. ನಗರದ ಹೊರವಲಯದ ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್ ಹಾಗೂ […]
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೇಡಿಕೆಗೆ ಸಿಎಂ ಮಾಧ್ಯಮ ಸಲಹೆಗಾರರ ಸಕರಾತ್ಮಕ ಸ್ಪಂದನೆ

ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೇಡಿಕೆಗೆ ಸಿಎಂ ಮಾಧ್ಯಮ ಸಲಹೆಗಾರರ ಸಕರಾತ್ಮಕ ಸ್ಪಂದನೆ ಕೆಕೆಆರ್ ಡಿಬಿ ವ್ಯಾಪ್ತಿಯ ಪತ್ರಿಕೆಗಳ ಪ್ರೋತ್ಸಾಹಕ್ಕೆ ಚರ್ಚಿಸುವೆ: ಕೆ.ವಿ.ಪ್ರಭಾಕರ್ ಕೊಪ್ಪಳ :ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮಪಟ್ಟಿಯಲ್ಲಿ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡುವ ಸಂಬಂಧ ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ಸಹಕಾರ ಕೊಡಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು. […]
ಬೆಂಗಳೂರಿನ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ನಲ್ಲಿ ರಾಷ್ಟ್ರದ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ನಾಡಿಗೆ ಆತ್ಮೀಯವಾಗಿ ಬರಮಾಡಿಕೊಂಡು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು.

ಬೆಂಗಳೂರಿಗರ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಅವರ ಜೊತೆಗೂಡಿ ಇಂದು ಲೋಕಾರ್ಪಣೆಗೊಳಿಸಿದರು.7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್.ವಿ ರಸ್ತೆ – ಬೊಮ್ಮಸಂದ್ರ ನಡುವಿನ 19.15 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಕಾರ್ಯಾಚರಣೆ ಮಾಡಲಿವೆ.ಬೆಂಗಳೂರಿನ ಉದ್ದಗಲಕ್ಕೂ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡುವ ಮೂಲಕ ಸಂಚಾರ ದಟ್ಟಣೆ ತಗ್ಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಎಂದರು ಮುಖ್ಯ ಮಂತ್ರಿ ಸಿದ್ದರಾಮಯ್ಯ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2025 ಆಗಸ್ಟ್ 10 ರಂದು ಬೆಂಗಳೂರು (ನಮ್ಮ ಮೆಟ್ರೊ) ಹಳದಿ ಮಾರ್ಗವನ್ನು ಉದ್ಘಾಟಿಸಿದರು.

ಕಾರ್ಯಾಚರಣೆ ಪ್ರಾರಂಭ: ಸಾರ್ವಜನಿಕ ಪ್ರಯಾಣಾಚರಣೆ ಆಗಸ್ಟ್ 11 (ಸೊಮವಾರ) ಬೆಳಿಗ್ಗೆ 5 ಗಂಟೆಗೆ ಮೂರು ಟ್ರೇನ್‌ಸೆಟ್‌ಗಳೊಂದಿಗೆ ಪ್ರತಿ 25 ನಿಮಿಷಗಳಲ್ಲಿ ಆರಂಭವಾಗಲಿದೆ ಮಾರ್ಗ ಮತ್ತು ಒಟ್ಟು ಅಂತರ: RV ರಸ್ತೆ (ರಾಗಿ ಗುಡ್ಡ) ನಿಂದ ಬೊಮ್ಮಸಂದ್ರದವರೆಗಿನ ಸುಮಾರು 19 ಕಿಲೋಮೀಟರ್ ಉದ್ದವಿರುವ ಈ ಮೆಟ್ರೊ ಮಾರ್ಗದಲ್ಲಿ 16 ಹೊಸ ಸ್ಟೇಶನ್‌ಗಳು ಸಂಯೋಜಿಸಲಾಗಿ, ಬೆಂಗಳೂರು ಮೆಟ್ರೊ ಜಾಲದ ಒಟ್ಟು ಅಗಲವನ್ನು 96-ಗಿಂತ ಹೆಚ್ಚು ಕಿಲೋಮೀಟರ್‌ಗೆ ವಿಸ್ತಾರಗೊಳಿಸಿದೆ ಪ್ರಾಮುಖ್ಯ ಸ್ತರದ ಲಾಭಗಳು:
ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರುಹರಿಸುವ ಸಲುವಾಗಿ ನೀರನ್ನು ಪಂಪ್ ಮಾಡಲಾಗುತ್ತಿದೆ.
ವಾಣಿವಿಲಾಸ ಸಾಗರಕ್ಕೆ ಕುಡಿಯುವ ನೀರಿಗೆ ಹೆಚ್ಚುವರಿ ಹಂಚಿಕೆ ಮಾಡಲು ಸಚಿವ ಸುಧಾಕರ್ ಗೆ ಮನವಿ: ಹೆಚ್ ಆರ್ ತಿಮ್ಮಯ್ಯ.

ದಿನಾಂಕ 09-08-2025 ರಂದು ಹಿರಿಯೂರು ಪ್ರವಾಸಿ ಮಂದಿರದಲ್ಲಿ ಸಚಿವ ಸುಧಾಕರ್ ಗೆ ಮನವಿ ಕೊಟ್ಟು ಮಾತನಾಡಿದ ಅಧ್ಯಕ್ಷ ಕಸವನಹಳ್ಳಿ ರಮೇಶ್ ” ಈಗ ವಿವಿ ಸಾಗರಕ್ಕೆ ಹಂಚಿಕೆ ಮಾಡಿರುವ ಎರಡು ಟಿ.ಎಂ.ಸಿ.ನೀರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕುಡಿಯುವ ನೀರಿಗೆ ಸಾಲುವುದಿಲ್ಲ. ಅಲ್ಲದೆ ಕೃಷಿ ಚಟುವಟಿಕೆಗೆ ನೀರಿಲ್ಲದೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ಹಾಗೂ ಶೀಘ್ರದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಂಸದರು ಜನಪ್ರತಿನಿಧಿಗಳು ರೈತರನ್ನು ಸಭೆ ಸೇರಿಸಿ ನಿರ್ಣಯ […]