ಹಿರಿಯ ಸಾಹಿತಿ, ಪತ್ರಕರ್ತ ಶ್ರೀ ಜಿ.ಎಸ್. ಉಜ್ಜಿನಪ್ಪ ಇನ್ನಿಲ್ಲ…

(ಜನನ : 30-10-1939, ಮರಣ : 20-06-2026.) ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಗೌನಹಳ್ಳಿಯ ತಂದೆ ಗೊಂಚಿಗಾರ ಸಿದ್ದಯ್ಯ, ತಾಯಿ ಲಿಂಗಮ್ಮ ದಂಪತಿಗಳ ಹಿರಿಯ ಮಗನಾಗಿ ದಿ: 30.10.1939 ರಲ್ಲಿ ಜನಿಸಿದರು.ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ (1962), ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ನಿಂದ ಡಿಎಸ್‌ಎಸ್‌ಎ ಸ್ನಾತಕೋತ್ತರ ಡಿಪ್ಲೋಮಾ (1965), ಅಲ್ಪಕಾಲ ಮಧುಗಿರಿ ತಾಲ್ಲೂಕಿನ ದಂಡಿನದಿಬ್ಬ ಗ್ರಾಮದಲ್ಲಿ ಶಿಕ್ಷಕರಾಗಿದ್ದರು (1962), ಬೆಂಗಳೂರಿನ ಗಾಂಧೀನಗರದಲ್ಲಿರುವ ಆರ್ಯ ವಿದ್ಯಾಶಾಲಾ ಪ್ರೌಢಶಾಲೆಯಲ್ಲಿ (1965), ಅಧ್ಯಾಪಕರಾಗಿ ಕೆಲಸ, ದೂರದ ಗುಲ್ಬರ್ಗಾದ ಎಂ.ಎಸ್.ಕೆ […]

ಹಿರಿಯೂರು–ಸಂಗೇನಹಳ್ಳಿ ಹೊಸ ಬಸ್ ಮಾರ್ಗ ಉದ್ಘಾಟನೆ: ಗ್ರಾಮಸ್ಥರಲ್ಲಿ ಹರ್ಷ

ಹಿರಿಯೂರು: ಹಿರಿಯೂರು ಪ್ರದೇಶದ ಜನತೆಗೆ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಹಿರಿಯೂರು–ಮಸ್ಕಲ್–ಕುಡಲಹಳ್ಳಿ–ಈಶ್ವರಗೇರಿ–ಕಂಬತ್ನಹಳ್ಳಿ–ಸಂಗೇನಹಳ್ಳಿ ಮಾರ್ಗದಲ್ಲಿ ಹೊಸ ಬಸ್ ಸೇವೆಯನ್ನು ಇಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಬಸ್‌ಗೆ ಪರಂಪರೆಯಂತೆ ಬಾಳೆ ಎಲೆ ಅಲಂಕರಿಸಿ, ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು. ಈ ಹೊಸ ಮಾರ್ಗದ ಮೂಲಕ ಗ್ರಾಮಗಳ ನಡುವೆ ಸಂಚಾರ ಸುಲಭವಾಗಲಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ದೈನಂದಿನ ಪ್ರಯಾಣಿಕರಿಗೆ ಇದು ದೊಡ್ಡ ಅನುಕೂಲವಾಗಲಿದೆ ಎಂದು ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಬಸ್ ಹಿರಿಯೂರಿನಿಂದ ಪ್ರಾರಂಭವಾಗಿ ಮಸ್ಕಲ್, ಕುಡಲಹಳ್ಳಿ, ಈಶ್ವರಗೇರಿ, ಕಂಬತ್ನಹಳ್ಳಿ, ಸಂಗೇನಹಳ್ಳಿ ಮಾರ್ಗವಾಗಿ ಸಂಚರಿಸಿ, ಮತ್ತೆ […]