ಹಿರಿಯೂರಿನ ಶಾಶ್ವತ ನೀರಾವರಿ ಕನಸಿಗೆ ಹೊಸ ಭರವಸೆ

ಜೆ.ಜಿ.ಹಳ್ಳಿ–ಐಮಂಗಲ ಹೋಬಳಿ ಕೆರೆಗಳಿಗೆ ನೀರು ಹರಿಸಲು ₹244 ಕೋಟಿ ಯೋಜನೆಗೆ ಸಚಿವ ಸಂಪುಟ ಅನುಮೋದನೆಗೆ ಸಿದ್ಧತೆ; ರೈತರ ಬೇಡಿಕೆಗೆ ಸರ್ಕಾರ ಸ್ಪಂದನೆ ಹಿರಿಯೂರು, ಜುಲೈ 2:ಹಿರಿಯೂರು ತಾಲೂಕಿನ ಜೆ.ಜಿ.ಹಳ್ಳಿ ಹೋಬಳಿ, ಗಾಯತ್ರಿ ಜಲಾಶಯ ವ್ಯಾಪ್ತಿ, ಕಲ್ವಳ್ಳಿ ಭಾಗ ಹಾಗೂ ಐಮಂಗಲ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಬಂಧ […]

ಬೆಸ್ಕಾಂ ಕಚೇರಿ ಮುಂದೆ ರೈತರ ಪ್ರತಿಭಟನೆ: ಸುಟ್ಟ ಪರಿವರ್ತಕಗಳನ್ನು ಸೋಮವಾರದೊಳಗೆ ವಿತರಿಸುವ ಭರವಸೆ

ಹಿರಿಯೂರು: ರೈತರ ಬೋರ್‌ವೆಲ್‌ಗಳಿಗೆ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌ಗಳು) ಸುಟ್ಟ ನಂತರ ಸರ್ಕಾರದ ಆದೇಶದಂತೆ 72 ಗಂಟೆಗಳೊಳಗೆ ದುರಸ್ತಿಪಡಿಸಿ ಮರು ಅಳವಡಿಸಬೇಕಾದರೂ, ಬೆಸ್ಕಾಂ ಅಧಿಕಾರಿಗಳು ತಿಂಗಳುಗಟ್ಟಲೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಗುರುವಾರ ಹಿರಿಯೂರಿನ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದಿದ್ದು, ಮುಂಗಾರು ಮಳೆಯ ಕೊರತೆಯಿಂದ ತೋಟಗಾರಿಕೆ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಇಂತಹ ಸಂಕಷ್ಟದ […]

ಜವನಗೊಂಡನಹಳ್ಳಿ ಹಾಗೂ ಐಮಂಗಲ ಹೋಬಳಿ ಕೆರೆಗಳಿಗೆ ನೀರು: ತಂದೆಯ ಕನಸು ನನಸಾಗಿಸಲು ಸುಹಾಸ್ ಸುಧಾಕರ್ ಪಣ

ಹಿರಿಯೂರು: ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಆರಂಭಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ತಾಲೂಕಿನ ರೈತರ ಜಮೀನುಗಳಿಗೆ ನೀರು ತಲುಪಿಸುವ ಸಂಕಲ್ಪದೊಂದಿಗೆ ಅವರ ಪುತ್ರ ಸುಹಾಸ್ ಸುಧಾಕರ್ ಮುಂದಾಗಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸುಹಾಸ್ ಸುಧಾಕರ್, ತಮ್ಮ ತಂದೆ ಡಿ. ಸುಧಾಕರ್ ಅವರು ಹಿರಿಯೂರು ತಾಲೂಕಿನ ರೈತರ ಹಿತದೃಷ್ಟಿಯಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ 64 ಕೆರೆಗಳಿಗೆ ನೀರು ತುಂಬಿಸುವ ಹಾಗೂ 37,131 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ […]

ಬಿ ಎಲ್ ಓ ಗಳು ಬೇಗ ಕೆಲಸ ಮುಗಿಯಲೆಂದು ಅನರ್ಹ ಮತದಾರರನ್ನು ಮತಪಟ್ಟಿಗೆ..ಆರ್ಹ ಮತದಾರನ್ನು ಪಟ್ಟಿಯಿಂದ ಕೈ ಬೀಡುವ ಕೆಲಸ ಮಾಡಿದರೆ ಅದನ್ನು ನಾವು ಮುನ್ನಲೆಗೆ ತರಲಿದ್ದೇವೆ:

ವಿಧಾನ ಪರಿಷತ್ ಸದಸ್ಯರು, ಬಿಜೆಪಿ ರಾಜ್ಯವಕ್ತಾರರಾದ ಕೆ.ಎಸ್.ನವೀನ್ ಆಗ್ರಹಿಸಿದ್ದಾರೆ. ಬಿಎಲ್‍ಓಗಳ ಮೇಲೆ ಅನವಶ್ಯಕ ಒತ್ತಡ ಏರಿ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಮತಪಟ್ಟಿಗೆ ಸೂಚಿಸಿದರೆ ಅಂತಹ ಬಿಎಲ್‍ಓಗಳನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.ಈಗ ನಡೆಯುತ್ತಿರುವುದು ಆಗಿರುವ ತಪ್ಪನ್ನು ತಿದ್ದಲು.ಮತ್ತೆ ತಪ್ಪು ಆಗಬಾರದು. ಬಿ ಎಲ್ ಓ ಗಳು ಬೇಗ ಕೆಲಸ ಮುಗಿಯಲೆಂದು ಅನರ್ಹ ಮತದಾರರನ್ನು ಮತಪಟ್ಟಿಗೆ..ಆರ್ಹ ಮತದಾರನ್ನು ಪಟ್ಟಿಯಿಂದ ಕೈ ಬೀಡುವ ಕೆಲಸ ಮಾಡಿದರೆ ಅದನ್ನು ನಾವು ಮುನ್ನಲೆಗೆ ತರಲಿದ್ದೇವೆ ಎಂದು […]

ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಆಕಾಶ್.ಎಸ್ ಘೋಷಣೆವಿಳಂಬ ಕಾಮಗಾರಿ : ಗುತ್ತಿಗೆದಾದರ ಮೇಲಿನ ದಂಡಕ್ಕೆ ವಿನಾಯತಿ, ಕೆಲಸ ಪೂರ್ಣಗೊಳಿಸಲು ತಾಕಿತು

ಚಿತ್ರದುರ್ಗ(ಕರ್ನಾಟಕ ವಾರ್ತೆ).ಜುಲೈ.02:ಜಲಜೀವನ್ ಮಿಷನ್ ಕಾಮಗಾರಿ ವಿಳಂಬಕ್ಕೆ ವಿಧಿಸಲಾಗುವ ಶೇ.10 ರಷ್ಟು ದಂಡಕ್ಕೆ ವಿನಾಯಿತಿ ನೀಡಲಾಗುವುದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರು ಮುಂದೆ ಬಂದು ಕೆಲಸ ಮುಗಿಸಿಕೊಟ್ಟರೆ, ಕಾಮಗಾರಿ ನಿಗದಿಪಡಿಸಿದ ಪೂರ್ಣ ಹಣವನ್ನು ಅವರಿಗೆ ಪಾವತಿ ಮಾಡಲಾಗುವುದು ಎಂದು ಜಿ.ಪಂ.ಸಿಇಓ ಡಾ.ಎಸ್.ಆಕಾಶ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದಂಡ ವಿನಾಯಿತಿ ನೀಡಿದರೆ ಶೇ.80 ರಷ್ಟು ಗುತ್ತಿಗೆದಾರು ಜಲಜೀವನ್ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಲು […]

ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಸದ್ಗುರು ಜಗ್ಗಿ ವಾಸುದೇವ್ ಭೇಟಿ

ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರೊಂದಿಗೆ ಸೌಹಾರ್ದಯುತ ಆಧ್ಯಾತ್ಮಿಕ ಸಂವಾದ ಚಿತ್ರದುರ್ಗ, ಜುಲೈ 1: ವಿಶ್ವದಾದ್ಯಂತ ಯೋಗ, ಆಧ್ಯಾತ್ಮಿಕತೆ, ಪರಿಸರ ಸಂರಕ್ಷಣೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರುತ್ತಿರುವ ಅಂತರರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು, ಈಶಾ ಫೌಂಡೇಶನ್ ಸಂಸ್ಥಾಪಕರಾದ ಪೂಜ್ಯ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಅವರು ಬುಧವಾರ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ, ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ […]

ಉತ್ತಮ ಸಂಸ್ಕಾರ ಮತ್ತು ಸದಾಚಾರವನ್ನು ಬೆಳೆಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ:- ಸಿದ್ದಯ್ಯನಕೋಟೆಯ ಚಿತ್ತರಗಿಮಠದ ಬಸವಲಿಂಗ ಮಹಾ ಸ್ವಾಮೀಜಿ ಹೇಳಿದರು

ವರದಿ:- ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ) ಚಳ್ಳಕೆರೆ :- ಪ್ರತಿಯೊಂದು ವಚನದಲ್ಲೂ ಆಳವಾದ ಸಾಮಾಜಿಕ ಚಿಂತನೆ ಅಡಗಿದೆ. ‘ಎಲ್ಲರೂ ಸಮಾನರು’ ಎಂಬ ಸಾರ್ವಕಾಲಿಕ ಸತ್ಯವನ್ನು ವಚನ ಸಿದ್ಧಾಂತಗಳ ಮೂಲಕ ಜಗತ್ತಿಗೆ ಸಾರಿದ ಕೀರ್ತಿ ಕ್ರಾಂತಿಕಾರಿ ಬಸವಣ್ಣನವರಿಗೆ ಸಲ್ಲುತ್ತದೆ,” ಎಂದು ಸಿದ್ದಯ್ಯನಕೋಟೆಯ ಚಿತ್ತರಗಿಮಠದ ಬಸವಲಿಂಗ ಮಹಾ ಸ್ವಾಮೀಜಿ ತಿಳಿಸಿದರು.ಚಳ್ಳಕೆರೆ ತಾಲ್ಲೂಕಿನ ನಗರಂಗೆರೆಯಲ್ಲಿ ಹಿತರಕ್ಷಣಾ ವೇದಿಕೆ ವತಿಯಿಂದ ಹಾಗೂ ಮೂರ್ತಿ ಡೆವಲಪರ್ಸ್ ಅಂಡ್ ಇಂಡಸ್ಟ್ರೀಸ್ ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಬಿ.ಸಿ. ಸಂಜೀವಮೂರ್ತಿ, ಶ್ರೀ ಬಿ.ಸಿ. ವೆಂಕಟೇಶ್ ಮೂರ್ತಿ ಹಾಗೂ […]

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಉಪ ವಿಭಾಗಾಧಿಕಾರಿ ಡಾ. ಕೆ. ಜೆ. ಕಾಂತರಾಜ್ ವಚನಗಳ ಒಗ್ಗೂಡಿಸಿದ ಡಾ.ಫ.ಗು.ಹಳಕಟ್ಟಿ ಕಾರ್ಯ ಅನನ್ಯ

ವಚನ ಸಾಹಿತ್ಯವು ಜನಸಾಮಾನ್ಯರ ಅನುಭವದಿಂದ ಮೂಡಿಬಂದ ಸಮಾಜ ಸುಧಾರಣೆಯ ಮಹಾಕಾವ್ಯ. ಅಂತಹ ವಚನಗಳನ್ನು ಮನೆಮನೆ ಅಲೆದು ಸಂಗ್ರಹಿಸಿ, ನಶಿಸಿಹೋಗದಂತೆ ಕಾಪಾಡಿದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ ಅನನ್ಯವಾದುದು ಎಂದು ಉಪ ವಿಭಾಗಾಧಿಕಾರಿ ಡಾ. ಕೆ. ಜೆ. ಕಾಂತರಾಜ್ ಶ್ಲಾಘಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ವತಿಯಿಂದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ “ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ”ಯಲ್ಲಿ ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ […]

ಹೆಲ್ತ್ ಇನ್ಸ್ಪೆಕ್ಟರ್ ಬರ್ಬರ ಹತ್ಯೆ; ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ

ಚಿತ್ರದುರ್ಗ ಜಿಲ್ಲೆಯ ಹೆಲ್ತ್ ಇನ್ಸ್ಪೆಕ್ಟರ್‌ರನ್ನು ದುಷ್ಕರ್ಮಿಗಳು ಕೊಲೆ ಮಾಡಿ, ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳೂರು ನಿವಾಸಿ, ಪಾವಗಡದ ಲಿಂಗದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ (PHC)ದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಮೂರ್ತಿ (47) ಕೊಲೆಯಾದವರು.ದುಷ್ಕರ್ಮಿಗಳು ಚನ್ನಗಿರಿ ಠಾಣೆ ವ್ಯಾಪ್ತಿಯಲ್ಲಿ ಅವರ ಕಾರನ್ನು ಅಡ್ಡಗಟ್ಟಿ ಹತ್ಯೆ ನಡೆಸಿ, ಬಳಿಕ ಮೃತದೇಹವನ್ನು ಇಂಗಳದಾಳ್ ಲಂಬಾಣಿಹಟ್ಟಿ ಸಮೀಪಕ್ಕೆ ಕೊಂಡೊಯ್ದು ಪೆಟ್ರೋಲ್ ಸುರಿದು ಸುಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.ಕೊಲೆ […]