ಮುಗಿಲ ಬೆಳಕಿಗೆ ತೆರೆದುಕೊಂಡ “ಕಾಲಡಿಯ ಕಣ್ಣು”

ದಲಿತ ಚಳವಳಿಯ ಕುದಿಕುಲುಮೆಯಲ್ಲಿ ಎದ್ದು ಬಂದ ಸಿ.ಎಂ.ಮುನಿಯಪ್ಪ ಆತ್ಮಚರಿತ್ರೆ* “ದಲಿತ ಚಳವಳಿ” ಎಂದರೆ ಮೈನವಿರೇಳುವ ಕಾಲವೊಂದಿತ್ತು. ಈ ಚಳವಳಿಯನ್ನು ರಕ್ತ ಕಣ್ಣೀರಿನಲ್ಲಿ ಕಟ್ಟಿದ್ದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಘನ ವಿವೇಕದ ಬೆಳಕಿನಲ್ಲಿ ಮುನ್ನಡೆಸಿದ್ದು, ಇದರ ಫಲವೇ ಇಂದು ದಲಿತ ಸಮುದಾಯ ತಲೆ ಎತ್ತಿ ಅನ್ಯಾಯ,ಅಸಮಾನತೆಯನ್ನು ಪ್ರಶ್ನಿಸುವಂತಾಗಿದೆ. ಮುಖ್ಯ ದಾರಿಯಲ್ಲಿ ಸ್ವಾಭಿಮಾನದಿಂದ ನಡೆಯುವಂತಾಗಿದೆ. ಈ ಹಾದಿಯಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿ ದುಡಿದು, ದಣಿದ ಜೀವಗಳು ಇಂದು ಹಣ್ಣಾಗಿವೆ. ದಲಿತ ಚಳವಳಿ ಎಂಬ ಕುದಿಕುಲುಮೆಯಲ್ಲಿ ಎದ್ದು ಬಂದವರಲ್ಲಿ “ಕೋಲಾರದ […]
ಎರಡ್ಮೂರು ತಿಂಗಳಲ್ಲಿ ಐಮಂಗಲ ಕೆರೆಗಳಿಗೆ ಪ್ರಯೋಗಿಕ ನೀರು

ಜೆಜಿ ಹಳ್ಳಿಯಲ್ಲಿ ವಿ.ಜೆ. ಎನ್.ಎಲ್ ಮಾಜಿ ಎಂಡಿ. ಸಣ್ಣ ಚಿತ್ತಯ್ಯ ಹೇಳಿಕೆ ಹಿರಿಯೂರು : ತಾಲೂಕಿನ ಐಮಂಗಲ ಹೋಬಳಿಯ ಕನಿಷ್ಠ 10 ಕೆರೆಗಳಿಗೆ ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಮುಖ್ಯಮಂತ್ರಿಗಳ ಪರವಾಗಿ ನಾನು ವಾಗ್ದಾನ ಮಾಡುತ್ತೇನೆಂದು ವಿಶ್ವೇಶ್ವರಯ್ಯ ಜಲ ನಿಗಮದ ಮಾಜಿ ವ್ಯವಸ್ಥಾಪಕು ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣ ಚಿತ್ತಯ್ಯ ಹೇಳಿದರು. ತಾಲೂಕಿನ ಜವನಗೊಂಡನಹಳ್ಳಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾನು ಕೃಷಿಕ ಕುಟುಂಬದಿಂದ […]
ಉಪ ಚುನಾವಣೆ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ

ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದೇನೆ: ಬೊಮ್ಮನಹಳ್ಳಿ ಬಾಬು ಸ್ಪಷ್ಟನೆ” “ಹಿರಿಯೂರು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭಿಸುವ ಸಂಕಲ್ಪ” “ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಕೊನೆಯವರೆಗೂ ಕಣದಲ್ಲಿ ಇರುತ್ತೇನೆ. ಕ್ಷೇತ್ರದ ಜನರ ಆಶೀರ್ವಾದವೇ ನನ್ನ ಶಕ್ತಿ,” ಎಂದು ಪಕ್ಷೇತರ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು ಘೋಷಿಸಿದರು. ನಗರದ ಬೈಪಾಸ್ ರಸ್ತೆಯಲ್ಲಿರುವ ವೈಟ್ ವಾಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದಲ್ಲಿ ವ್ಯಾಪಕ ಜನಸಂಪರ್ಕ ನಡೆಸುತ್ತಿದ್ದು, ಅಭ್ಯರ್ಥಿಯಾಗುವ ಉದ್ದೇಶದಿಂದ ಸಂಘಟನೆಯನ್ನು […]