ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಿಸಿದ ಸಂಸದ ಗೋವಿಂದ ಎಂ ಕಾರಜೋಳಹಿರಿಯ ನಾಗರಿಕರ ಬದುಕು ಸುಗಮಗೊಳಿಸುವುದು ಸರ್ಕಾರದ ಆದ್ಯತೆ

ದೇಶದ ಹಿರಿಯ ನಾಗರಿಕರನ್ನು ದೇವರಿಗೆ ಸಮಾನವಾಗಿ ಕಾಣುವುದು ನಮ್ಮ ಸಂಸ್ಕøತಿಯಾಗಿದೆ. ವಯೋಸಹಜ ದೌರ್ಬಲ್ಯಗಳಿಂದ ಬಳಲುತ್ತಿರುವ ಹಿರಿಯರ ಬದುಕು ಸುಗಮ ಹಾಗೂ ಸ್ವಾಭಿಮಾನದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ನೆರವಾಗುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.ನಗರದ ಎಸ್‍ಎಸ್‍ಕೆಎಸ್ ಸಮುದಾಯ ಭವನದಲ್ಲಿ ಭಾನುವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಅಲಿಮ್ಕೊ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯಡಿ ಹಿರಿಯ ನಾಗರಿಕರಿಗೆ […]
ಜನ್ಮದಿನಾಚರಣೆ ಬೇಡ, ಮಠದ ವಾರ್ಷಿಕೋತ್ಸವವನ್ನೇ ಆಚರಿಸೋಣ: ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ, ಜು. 12: ಇನ್ನು ಮುಂದೆ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸದೇ, ಅದರ ಬದಲಿಗೆ ಮಠದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು. ನಗರದ ಲಿಡ್ಕರ್ ಭವನದಲ್ಲಿ ಭಾನುವಾರ ಮಾದಿಗ ನೌಕರರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಈವರೆಗೆ ತಮ್ಮ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಇನ್ನುಮುಂದೆ ಜನ್ಮದಿನದ ಆಚರಣೆ […]
ರೋಟರಿ ಕ್ಲಬ್ ಚಿತ್ರದುರ್ಗ ನೂತನ ಅಧ್ಯಕ್ಷರಾಗಿ ರೊ. ಯೋಗೀಶ್ ಸಹ್ಯಾದ್ರಿ, ಪದಗ್ರಹಣ ಸಮಾರಂಭ

ಚಿತ್ರದುರ್ಗ ಜು. 11 ನಗರದ ಪ್ರತಿಷ್ಠಿತ ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ನೂತನ ಅಧ್ಯಕ್ಷರಾಗಿ ಇಂಗ್ಲಿಷ್ ಉಪನ್ಯಾಸಕರಾದ ರೊ. ಯೋಗೀಶ್ ಸಹ್ಯಾದ್ರಿ ಅವರು ಜು.12ರ ಭಾನುವಾರ ಬೆಳಗ್ಗೆ 11.00 ಗಂಟೆಗೆ ನಗರದ ಡಿ.ಸಿ. ಸರ್ಕಲ್ ನಲ್ಲಿ ಇರುವ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ರೋಟರಿ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ್ಲ ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಎಲೆಕ್ಟ್ ರೊ. ಪಿ.ಹೆಚ್.ಎಫ್. ಡಾ. ತ್ರಿವಿಕ್ರಮ್ ಜೋಷಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯೋಗೀಶ್ ಸಹ್ಯಾದ್ರಿ […]