ರಾಜ್ಯದ ಹಿತಕ್ಕಾಗಿ ಪಕ್ಷಾತೀತವಾಗಿ ಒಂದಾಗಿ ಕೆಲಸ ಮಾಡೋಣ: ಸಂಸದರ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ

ಬರ ಪರಿಸ್ಥಿತಿ, ಮೇಕೆದಾಟು, ಮಹದಾಯಿ, ಕೃಷ್ಣಾ ನೀರು ಹಂಚಿಕೆ, ನದಿ ಜೋಡಣೆ ಸೇರಿ ರಾಜ್ಯದ ಪ್ರಮುಖ ಯೋಜನೆಗಳಿಗೆ ಕೇಂದ್ರದ ಅನುಮತಿ ಪಡೆಯಲು ಎಲ್ಲ ಪಕ್ಷಗಳ ಸಹಕಾರ ಕೋರಿಕೆ ನವದೆಹಲಿ, ಜು. 27: ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಭೇದಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಸಂಸದರು ಮತ್ತು ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ನವದೆಹಲಿಯಲ್ಲಿ ನಡೆದ ಕರ್ನಾಟಕ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ […]
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಸಚಿವ ಸ್ಥಾನ ಸಿಗಲಿ; ಅಯ್ಯಪ್ಪ ದೇವಸ್ಥಾನ–ಮಸೀದಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಸಚಿವರಾದರೆ ಚಿತ್ರದುರ್ಗದಿಂದ ಶಬರಿಮಲೆವರೆಗೆ ಬರಿಗಾಲಿನಲ್ಲಿ ಪಾದಯಾತ್ರೆ: ಕೆಸಿವಿ ಅಭಿಮಾನಿಗಳ ಸಂಕಲ್ಪ ಚಿತ್ರದುರ್ಗ ಜುಲೈ 27: ಚಿತ್ರದುರ್ಗವು ಅಭಿವೃದ್ಧಿಯ ಪಥದಲ್ಲಿ ಸಾಗಿಸುತ್ತಿರುವಂತಹ ಜನ ಮೆಚ್ಚಿದ ನಾಯಕ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ದರ್ಜೆಯಲ್ಲಿ ಸಚಿವ ಸ್ಥಾನ ದೊರಕಲಿ ಎಂದು ಕೆಸಿವಿ ಅಭಿಮಾನಿಗಳು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ.ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ಬಡಮಖಾನ್ ಮಸೀದಿಯಲ್ಲಿ ಸೋಮವಾರ ಕೆಸಿವಿ ಅಭಿಮಾನಿಗಳು ವತಿಯಿಂದ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಸಚಿವ ಸ್ಥಾನಸಿಗಲೆಂದು ದೇವರ […]
“ಕಾಂಗ್ರೆಸ್‌ಗೆ ಕಾರ್ಯಕರ್ತರೇ ಶಕ್ತಿ; ಕಡೆಗಣನೆಗೆ ಅವಕಾಶವಿಲ್ಲ – ವಿ.ಎಸ್. ಉಗ್ರಪ್ಪ”

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ • ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ಪಾರದರ್ಶಕ ಆಯ್ಕೆ • ಶಿಸ್ತು ಮತ್ತು ಸಂಘಟನೆಗೆ ಕೆಪಿಸಿಸಿ ಒತ್ತು ಚಿತ್ರದುರ್ಗ, ಜು. 27:ಕಾಂಗ್ರೆಸ್ ಪಕ್ಷದ ನೈಜ ಶಕ್ತಿ ಕಾರ್ಯಕರ್ತರೇ ಆಗಿದ್ದು, ಪಕ್ಷದಲ್ಲಿ ಯಾವುದೇ ಕಾರ್ಯಕರ್ತರಿಗೂ ಕಡೆಗಣನೆ ಅಥವಾ ಅನ್ಯಾಯವಾಗುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಸಂಘಟನ್ ಶ್ರೀಜನ್ ಅಭಿಯಾನದ ಉಸ್ತುವಾರಿ ವಿ.ಎಸ್. ಉಗ್ರಪ್ಪ ಸ್ಪಷ್ಟಪಡಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆ ಬಲಪಡಿಸುವ […]
🔥 ಅಂಬೇಡ್ಕರ್ ಆದರ್ಶಗಳ ಬೆಳಕಿನಲ್ಲಿ ಪ್ರತಿಭೆಗೆ ರಾಜ್ಯಮಟ್ಟದ ಗೌರವ: ಶೇ.80ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಿರಿಯೂರಿನಲ್ಲಿ ಅದ್ದೂರಿ ಸನ್ಮಾನ

ಅಂಬೇಡ್ಕರ್ ಜಯಂತಿ, ಪ್ರೊ. ಬಿ. ಕೃಷ್ಣಪ್ಪ ಜಯಂತಿ ಹಾಗೂ ಸಮಿತಿಯ ವಾರ್ಷಿಕೋತ್ಸವ ಆಚರಣೆ ಹಿರಿಯೂರು, ಜು. 27: ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ (ರಿ) ರಾಜ್ಯ ಸಮಿತಿಯ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಪ್ರೊ. ಬಿ. ಕೃಷ್ಣಪ್ಪ ಅವರ 88ನೇ ಜಯಂತಿ ಹಾಗೂ ಸಮಿತಿಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು […]
ಮಕ್ಕಳ ಸೃಜನಶೀಲತೆ ಮತ್ತು ಏಕಾಗ್ರತೆಗೆ ಸಂಗೀತ ಸಹಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ, ಬಿ,ಎಂ, ಗುರುನಾಥ್ ಅಭಿಮತ,

ಹಿರಿಯೂರು: ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ ಹಾಗೂ ಏಕಾಗ್ರತೆ ಹೆಚ್ಚಿಸಲು ಸಾಹಿತ್ಯ ಸಂಗೀತ ರಂಗ ಕಲೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ, ಬಿ.ಎಂ, ಗುರುನಾಥ್, ಹೇಳಿದರು , ಪಟ್ಟಣದ ವೇದಾವತಿ ನಗರದಲ್ಲಿರುವ ಡಾ, ಬಿ,ಆರ್, ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಿರಿಯೂರು, ಇವರುಗಳ ಸಂಯುಕ್ತಶ್ರಯದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸುಗಮ […]