ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯ: ದಲಿತರಿಗೆ ಅತಿ ಹೆಚ್ಚು, ಲಿಂಗಾಯತ–ಹಿಂದುಳಿದ ವರ್ಗಕ್ಕೆ ಸಮಾನ ಸ್ಥಾನ

ಬೆಂಗಳೂರು, ಆ. 3: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ 34 ಸದಸ್ಯರ ಸಚಿವ ಸಂಪುಟದಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚಿಸಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು, ದಲಿತ ಸಮುದಾಯಕ್ಕೆ ಅತಿ ಹೆಚ್ಚು ಸ್ಥಾನಗಳು ದೊರೆತಿರುವುದು ವಿಶೇಷವಾಗಿದೆ. ಸಂಪುಟದಲ್ಲಿ 10 ಮಂದಿ ದಲಿತ ಸಮುದಾಯದ ಸಚಿವರು ಸ್ಥಾನ ಪಡೆದಿದ್ದು, ಇದು ಎಲ್ಲ ವರ್ಗಗಳಿಗಿಂತಲೂ ಹೆಚ್ಚಿನ ಪ್ರಾತಿನಿಧ್ಯವಾಗಿದೆ. ದಲಿತ ಸಮುದಾಯದೊಳಗಿನ ಬಲಗೈ, ಎಡಗೈ, ವಾಲ್ಮೀಕಿ, ಬೋವಿ ಹಾಗೂ ಲಂಬಾಣಿ ಉಪವರ್ಗಗಳಿಗೂ […]