ದಾರಿ ತೋರಿ

ಪ್ರಕಾಶ್ ಆರ್
ತುಮಕೂರು ಡಿಸ್ಟ್ರಿಕ್ ದಿವ್ಯಂಗ ಸ್ಪೋರ್ಟ್ಸ್ ಅಕಾಡೆಮಿ
ಸಂಸ್ಥಾಪಕರು ಮತ್ತು ಅಧ್ಯಕ್ಷರು

ದಾರಿ ತೋರಿ

ಪ್ರಕೃತಿಯ ಸೊಬಗಿನಲಿ
ಕಂದಮ್ಮಗಳು ನಾವಾಗಿ
ಭೂತಾಯ ಮಡಿಲಿನಲಿ
ಹುಟ್ಟಿಹೆವು ನೋವ ನುಂಗಿ

ಅಂಧ ಶ್ರವನದಲಿ ಬುದ್ದಿ ಮಾಂದ್ಯದಲಿ
ದೇಹ ದುರ್ಬಲ ಮೂಕ ಗೂಕದಲಿ
ವಿಕಲಾಂಗ ನಾವಾಗಿ
ಜನಿಸಿಹೆವು ತಾಯ ಗರ್ಭದಲಿ

ಅಜ್ಞಾನ ಬದುಕಿನಲಿ
ಬಡತನದ ಹೊರೆಯಲ್ಲಿ
ಮೂಡ ನಂಬಿಕೆಯ ನಂಬಿ
ಹಡೆದಿಹರು ನಮ್ಮನಿಲ್ಲಿ

ದೈವ ಶಾಪದ ಫಲವೋ
ಯಾವ ಜನ್ಮದ ವಿಧಿಯೊ
ನ್ಯೂನತೆಗಳಾ ಹೊಂದಿ
ಬದುಕ ಬಯಸಿಹೆವು ನಾವಿಲ್ಲಿ

ಅನುಕಂಪ ತೋರದಿರಿ
ವ್ಯಂಗ್ಯ ನೀವ್ ಮಾಡದಿರಿ
ವಿಕಲ ಚೇತನರು ನಾವಿಲ್ಲಿ
ಪ್ರೀತಿ ಆಧಾರದಿ ನೀವು ದಾರಿ ತೋರಿ

ದಾರಿ ತೋರಿ