2025 SIIMA ಪ್ರಶಸ್ತಿ ಸಮಾರಂಭದ ಕನ್ನಡ ವಿಭಾಗದ ಪ್ರಮುಖ ಸುದ್ದಿಗಳು:

ಈ ವರ್ಷದ South Indian International Movie Awards (SIIMA) ದುಬೈನಲ್ಲಿ ಅದ್ದೂರಿಯಾಗಿ ಜರುಗಿದ್ದು, ಕನ್ನಡ ಚಿತ್ರರಂಗದ ಅನೇಕ ಪ್ರತಿಭೆಗಳಿಗೆ ಗೌರವ ದೊರೆತಿದೆ. ಇಲ್ಲಿದೆ ಪ್ರಮುಖ ವಿಜೇತರ ಪಟ್ಟಿ: 🏆 ಅತ್ಯುತ್ತಮ ನಿರ್ದೇಶಕ – ಉಪೇಂದ್ರ (ಚಿತ್ರ: UI)🎭 ಅತ್ಯುತ್ತಮ ನಟ – ಕಿಚ್ಚ ಸುದೀಪ್ (ಚಿತ್ರ: Max)👑 ಅತ್ಯುತ್ತಮ ನಟ – ವಿಮರ್ಶಕರ ಆಯ್ಕೆ – ದುನಿಯಾ ವಿಜಯ್ (ಭೀಮ)🎬 ಅತ್ಯುತ್ತಮ ಚಿತ್ರ – ಕೃಷ್ಣಂ ಪ್ರಣಯ ಸಖಿ🎶 ಅತ್ಯುತ್ತಮ ಸಂಗೀತ ನಿರ್ದೇಶಕ – ಬಿ. […]
ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ನ್ಯಾಯಮೂರ್ತಿ ಬಿಲ್ಲಪ್ಪ ಅವರ ಭೇಟಿ

ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಸಲ್ಲಿಸುವ ಕುರಿತು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನಿಯೋಗ ಶನಿವಾರ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿಲ್ಲಪ್ಪ ಅವರನ್ನು ಹೊಸದುರ್ಗದಲ್ಲಿ ಭೇಟಿಯಾಗಿ ಚರ್ಚಿಸಿತು. ರಿಟ್ ಸಲ್ಲಿಸುವ ಸಂಬಂಧ ಕಾನೂನು ಸಲಹೆ ಕೋರಿದರು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರಾಜ್ಯದ ಇತರೆ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. […]
“ಗಣೇಶ ಹಬ್ಬದಲ್ಲಿ ಸಮಾನತೆ: ಹಿಂದೂ-ಮುಸ್ಲಿಂ ಹಬ್ಬದ ಸಂಭ್ರಮ”
79ನೇ ಸ್ವಾತಂತ್ರ್ಯೋತ್ಸವ ಮತ್ತು ವೀಲ್ ಚೇರ್ ಬ್ಯಾಸ್ಕೆಟ್ಬಾಲ್ ಆಯ್ಕೆ ತರಬೇತಿ ಶಿಬಿರ

ಆಗಸ್ಟ್ 15 ನಮ್ಮ ತುಮಕೂರು ಡಿಸ್ಟ್ರಿಕ್ಟ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಕರ್ನಾಟಕ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್ ಸಹಯೋಗದಿಂದ ತುಮಕೂರಿನ ಸಿದ್ದಗಂಗಾ ಹಾಸ್ಪಿಟಲ್ ಬಾಸ್ಕೆಟ್ ಬಾಲ್ ಆವರಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ವೀಲ್ ಚೇರ್ ಬ್ಯಾಸ್ಕೆಟ್ಬಾಲ್ ಆಯ್ಕೆ ತರಬೇತಿ ಶಿಬಿರವನ್ನು ನಡೆಸಲಾಯಿತು ಈ ಶಿಬಿರದಲ್ಲಿ 30 ಜನ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಗಂಗಾ ಹಾಸ್ಪಿಟಲ್ ಡಾ!! ಪರಮೇಶ್ವರ್ ಹೆಲೆನ್ ಕೆಲರ್ ಶಾಲೆಯ ಸಂಸ್ಥಾಪಕರಾದ ಗಾಯತ್ರಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷರಾದ ಮಂಜುಳಾ […]
ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ಜೀವನಕ್ಕೆ ಬುನಾದಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ದಲೈಲಾಮಾ ಅವರ 90ನೇ ಜನ್ಮ ದಿನದ ಲೋಗೋ ಬಿಡುಗಡೆ / ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿ ಚಿತ್ರದುರ್ಗ: ಬಸವಣ್ಣನವರ ಕ್ರಾಂತಿ, ಭಗವಾನ್ ಬುದ್ಧರ ಸಮಾನತೆಯ ಶಾಂತಿ, ಅಂಬೇಡ್ಕರ್ ಅವರ ಜ್ಞಾನ ಈ ಮೂರು ವಿಷಯಗಳು ಸಮ್ಮಿಲನ ಆದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೆಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು. ನಗರದ ಹೊರವಲಯದ ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್ ಹಾಗೂ […]
ಬೆಂಗಳೂರಿನ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ನಲ್ಲಿ ರಾಷ್ಟ್ರದ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ನಾಡಿಗೆ ಆತ್ಮೀಯವಾಗಿ ಬರಮಾಡಿಕೊಂಡು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು.

ಬೆಂಗಳೂರಿಗರ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಅವರ ಜೊತೆಗೂಡಿ ಇಂದು ಲೋಕಾರ್ಪಣೆಗೊಳಿಸಿದರು.7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್.ವಿ ರಸ್ತೆ – ಬೊಮ್ಮಸಂದ್ರ ನಡುವಿನ 19.15 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಕಾರ್ಯಾಚರಣೆ ಮಾಡಲಿವೆ.ಬೆಂಗಳೂರಿನ ಉದ್ದಗಲಕ್ಕೂ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡುವ ಮೂಲಕ ಸಂಚಾರ ದಟ್ಟಣೆ ತಗ್ಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಎಂದರು ಮುಖ್ಯ ಮಂತ್ರಿ ಸಿದ್ದರಾಮಯ್ಯ
ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರುಹರಿಸುವ ಸಲುವಾಗಿ ನೀರನ್ನು ಪಂಪ್ ಮಾಡಲಾಗುತ್ತಿದೆ.
ವಾಣಿವಿಲಾಸ ಸಾಗರಕ್ಕೆ ಕುಡಿಯುವ ನೀರಿಗೆ ಹೆಚ್ಚುವರಿ ಹಂಚಿಕೆ ಮಾಡಲು ಸಚಿವ ಸುಧಾಕರ್ ಗೆ ಮನವಿ: ಹೆಚ್ ಆರ್ ತಿಮ್ಮಯ್ಯ.

ದಿನಾಂಕ 09-08-2025 ರಂದು ಹಿರಿಯೂರು ಪ್ರವಾಸಿ ಮಂದಿರದಲ್ಲಿ ಸಚಿವ ಸುಧಾಕರ್ ಗೆ ಮನವಿ ಕೊಟ್ಟು ಮಾತನಾಡಿದ ಅಧ್ಯಕ್ಷ ಕಸವನಹಳ್ಳಿ ರಮೇಶ್ ” ಈಗ ವಿವಿ ಸಾಗರಕ್ಕೆ ಹಂಚಿಕೆ ಮಾಡಿರುವ ಎರಡು ಟಿ.ಎಂ.ಸಿ.ನೀರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕುಡಿಯುವ ನೀರಿಗೆ ಸಾಲುವುದಿಲ್ಲ. ಅಲ್ಲದೆ ಕೃಷಿ ಚಟುವಟಿಕೆಗೆ ನೀರಿಲ್ಲದೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ಹಾಗೂ ಶೀಘ್ರದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಂಸದರು ಜನಪ್ರತಿನಿಧಿಗಳು ರೈತರನ್ನು ಸಭೆ ಸೇರಿಸಿ ನಿರ್ಣಯ […]
ಸರ್ಕಾರ ಮಾಡದ ಕೆಲಸಗಳನ್ನ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ: ಶಾಸಕ ಕೆ ಸಿ ವೀರೇಂದ್ರ ಪಪ್ಪಿ

ಚಿತ್ರದುರ್ಗ: ಸರ್ಕಾರ ಮಾಡುವಂತಹ ಕೆಲಸಗಳನ್ನು ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಧರ್ಮಸ್ಥಳ ಸಂಸ್ಥೆಯು ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು. ತಾಲೂಕಿನ ಕೊಂಡಗವಳ್ಳಿ ಗ್ರಾಮದಲ್ಲಿ ಶನಿವಾರಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಡಿ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು ಧರ್ಮಸ್ಥಳ ಸಂಸ್ಥೆವತಿಯಿಂದ ರಾಜ್ಯದಲ್ಲೇಡೆ 872 ಕೆರೆಗಳಿಗೆ ಪುನರ್ ಜೀವನವನ್ನು ಕಲ್ಪಿಸಿದ್ದಾರೆ ಇಂತಹ ಮಹತ್ವದ ಕಾರ್ಯಕ್ಕೆ ಧರ್ಮಸ್ಥಳ ಸಂಸ್ಥೆಗೆ ಅಭಿನಂದನೆಗಳು ಎಂದು ತಿಳಿಸಿದರು. ಧರ್ಮಸ್ಥಳ ಸಂಸ್ಥೆಯು ಮಹಿಳೆಯರನ್ನ ಆರ್ಥಿಕವಾಗಿ […]