ಬಾಯಾರಿದ ಗ್ರಾಮಕ್ಕೆ ಜೀವಜಲದ ಕಾಣಿಕೆ: ಬೊಮ್ಮನಹಳ್ಳಿ ಬಾಬು ಸಮಾಜಸೇವೆಗೆ ಜನರ ಮೆಚ್ಚುಗೆ

ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿಯಲ್ಲಿ ಹೊಸ ಬೋರ್‌ವೆಲ್‌ನಲ್ಲಿ 3 ಇಂಚು ನೀರು ಲಭ್ಯ • ಬೋರ್‌ವೆಲ್ ವೆಚ್ಚವನ್ನು ಗ್ರಾಮಸ್ಥರಿಗೆ ವಿತರಣೆ • ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಹಿರಿಯೂರು, ಜು.20: ಹಿರಿಯೂರು ವಿಧಾನಸಭಾ ಕ್ಷೇತ್ರದ ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ಸಮಾಜಸೇವಕ **ಬೊಮ್ಮನಹಳ್ಳಿ ಬಾಬು **ಅವರು ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿ ಹೊಸ ಬೋರ್‌ವೆಲ್ ಕೊರೆಸಲಾಗಿದ್ದು, ಸುಮಾರು 3 ಇಂಚು ನೀರು ಲಭ್ಯವಾಗಿದೆ. ಗ್ರಾಮದಲ್ಲಿ ನೀರಿನ ಕೊರತೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದ […]

ದಿ. ಡಿ. ಸುಧಾಕರ್ ನುಡಿನಮನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ: ಶಾಸಕ ಟಿ. ರಘುಮೂರ್ತಿ

ಹಿರಿಯೂರಿನಲ್ಲಿ ಪೂರ್ವಭಾವಿ ಸಭೆ; ಜುಲೈ 26ರ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ಹಿರಿಯೂರು, ಜು.20: ಮಾಜಿ ಸಚಿವ ದಿವಂಗತ ಡಿ. ಡಿ. ಸುಧಾಕರ್ ಅವರ ಸ್ಮರಣಾರ್ಥ ಜುಲೈ 26ರಂದು ನಡೆಯಲಿರುವ ನುಡಿನಮನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಹಿರಿಯೂರು ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಭಾಗವಹಿಸಿ ಅಗತ್ಯ ಮಾರ್ಗದರ್ಶನ ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ದಿವಂಗತ ಡಿ. ಡಿ. ಸುಧಾಕರ್ ಅವರು ಜನಪರ […]

ಭಾರತ–ಮೊಲ್ಡೊವಾ ಸಂಬಂಧಕ್ಕೆ ಹೊಸ ಅಧ್ಯಾಯ

ರಾಷ್ಟ್ರಪತಿ ದ್ರೌಪದಿ ಮುರ್ಮು–ಅಧ್ಯಕ್ಷೆ ಮಾಯಾ ಸಂದು ಮಹತ್ವದ ಮಾತುಕತೆ; ವ್ಯಾಪಾರ, ಕೃಷಿ, ಆರೋಗ್ಯ, AI ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಗೆ ಒಪ್ಪಿಗೆ ಚಿಸಿನೌ (ಮೊಲ್ಡೊವಾ): ಭಾರತ ಮತ್ತು ಮೊಲ್ಡೊವಾ ನಡುವಿನ ಬೆಳೆಯುತ್ತಿರುವ ಸ್ನೇಹ, ಪರಸ್ಪರ ನಂಬಿಕೆ ಹಾಗೂ ಸಹಕಾರಕ್ಕೆ ತಮ್ಮ ಮೊಲ್ಡೊವಾ ಪ್ರವಾಸವು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಚಿಸಿನೌನಲ್ಲಿ ಮೊಲ್ಡೊವಾ ಅಧ್ಯಕ್ಷೆ ಮಾಯಾ ಸಂದು ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದ ಬಳಿಕ ಜಂಟಿ ಮಾಧ್ಯಮ ಪ್ರಕಟಣೆ ಬಿಡುಗಡೆ […]

ಭಾರತದಲ್ಲಿ ಮೊದಲ ಡೆಂಗ್ಯೂ ಲಸಿಕೆ ‘QDENGA’ಗೆ ಅನುಮೋದನೆ

4 ರಿಂದ 60 ವರ್ಷದವರಿಗೆ ಲಭ್ಯ; ಮುಂಚಿತ ಡೆಂಗ್ಯೂ ಪರೀಕ್ಷೆ ಅಗತ್ಯವಿಲ್ಲ ನವದೆಹಲಿ: ಡೆಂಗ್ಯೂ ನಿಯಂತ್ರಣದ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ, ಭಾರತವು ಮೊದಲ ಡೆಂಗ್ಯೂ ಲಸಿಕೆ QDENGAಗೆ ಅನುಮೋದನೆ ನೀಡಿದೆ. ಈ ಲಸಿಕೆ 4 ರಿಂದ 60 ವರ್ಷದೊಳಗಿನ ಅರ್ಹ ವ್ಯಕ್ತಿಗಳಿಗೆ ನೀಡಬಹುದಾಗಿದ್ದು, ಈ ಹಿಂದೆ ಡೆಂಗ್ಯೂ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ, ಕೆಲವು ಇತರ ಡೆಂಗ್ಯೂ ಲಸಿಕೆಗಳಿಗಿಂತ ಭಿನ್ನವಾಗಿ QDENGA ಲಸಿಕೆ ಪಡೆಯುವ ಮೊದಲು ಡೆಂಗ್ಯೂ […]

ಗಾಣಿಗ ಸಮಾಜದ ಅಭಿವೃದ್ಧಿಗೆ ಸಹಕಾರ ಬ್ಯಾಂಕ್ ಅವಶ್ಯ: ಲಕ್ಷ್ಮಣ್ ಸವದಿ

ಸಮಾಜದ ಕಲ್ಯಾಣ ಮಂಟಪ ಅಥವಾ ಇತರೆ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಧನಸಹಾಯ ನೀಡುವುದಾಗಿ ಘೋಷಣೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ವೈದ್ಯರಿಗೆ ಸನ್ಮಾನ – ವಾರ್ಷಿಕ ಮಹಾಸಭೆಯಲ್ಲಿ ಸಮಾಜದ ಪ್ರಗತಿಗೆ ಕರೆ ಚಿತ್ರದುರ್ಗ, ಜು.19: ಚಿತ್ರದುರ್ಗ ಜಿಲ್ಲೆಯ ಗಾಣಿಗ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಸಹಕಾರ ಬ್ಯಾಂಕ್ ಹಾಗೂ ಸುಸಜ್ಜಿತ ಸಮುದಾಯ ಭವನವನ್ನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಲ್ಲಿ ನನ್ನ ಸ್ವಂತ ಖರ್ಚಿನಲ್ಲಿ 25 ಲಕ್ಷವನ್ನು ನೀಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. […]

*”ಹೋರಾಟನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಸರ್ಕಾರದ ಕ್ರಮ ಖಂಡಿಸಿ ಎಐಡಿಎಸ್ಓ ಪ್ರತಿಭಟನೆ”*

ನೀಟ್ ಅವಾಂತರಗಳನ್ನು ಖಂಡಿಸಿ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಂ ವಾಂಗ್‌ಚುಕ್ ಮತ್ತು ಪ್ರತಿಭಟನಾಕಾರರು ನಡೆಸುತ್ತಿರುವ ಪಾರ್ಲಿಮೆಂಟ್ ಚಲೋ ಬೆಂಬಲಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನೇತೃತ್ವದಲ್ಲಿ ಇಂದು ಚಿತ್ರದುರ್ಗ ವಿಜ್ಞಾನ ಕಾಲೇಜು ಮುಂದೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಎಐಡಿಎಸ್ಓ ರಾಜ್ಯ ಕಛೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಮಾತನಾಡುತ್ತಾ, “ನೀಟ್ ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳನ್ನು ಖಂಡಿಸಿ, ದೇಶದ ಪರಿಸರ ತಜ್ಞ ಹಾಗೂ ಶಿಕ್ಷಕ ಸೋನಂ ವಾಂಗ್‌ಚುಕ್ ಅವರು ಕಳೆದ 23 ದಿನಗಳಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ […]

ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ       -ಜಿಲ್ಲಾ ನ್ಯಾಯಾಧೀಶ ಜಿ.ಡಿ.ಮಹಾವರ್ಕರ್

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ20:ನ್ಯಾಯಾಂಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗದವರು, ವಕೀಲರು ನಿರಂತರ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಡಿ.ಮಹಾವರ್ಕರ್ ಅಭಿಪ್ರಾಯಪಟ್ಟರು.ನಗರದ ವಕೀಲರ ಭವನದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸ್ವಾಸ್ಥ್ಯ ಹೆಲ್ತ್ ಇವರ ಜಂಟಿ ಆಶ್ರಯದಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ […]

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಎಂ. ರವೀಂದ್ರಪ್ಪ ಸಂತಾಪ

ಹಿರಿಯೂರು, ಜು. 18: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ವಿಧಿವಶರಾಗಿರುವುದು ಅತ್ಯಂತ ದುಃಖದ ಸಂಗತಿ ಎಂದು ಜೆಡಿಎಸ್ ಹಿರಿಯ ಮುಖಂಡ ಎಂ. ರವೀಂದ್ರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, “ಚೆನ್ನಮ್ಮ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮಾರ್ಗದರ್ಶಕರಾಗಿ, ಕುಟುಂಬದ ಶಕ್ತಿ ಮತ್ತು ಆಧಾರಸ್ತಂಭವಾಗಿ ಬದುಕು ನಡೆಸಿದ್ದರು. ಸರಳತೆ, ಸೌಜನ್ಯ ಹಾಗೂ ಕುಟುಂಬದ ಮೌಲ್ಯಗಳನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಅವರು ಅನೇಕರಿಗೆ ಆದರ್ಶಪ್ರಾಯರಾಗಿದ್ದರು” […]

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ನಿಧನ; ರಾಜಕೀಯ ಗಣ್ಯರ ಸಂತಾಪ

ಬೆಂಗಳೂರು, ಜು. 18: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಇಂದು ನಿಧನರಾದರು. ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ತಜ್ಞ ವೈದ್ಯರ ತಂಡದ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಆಧಾರಸ್ತಂಭರಾಗಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲೇ ಇದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ […]

ಎಸ್‍ಐಆರ್ ಜಾಗೃತಿಗೆ “ಮೊಬೈಲ್ ಪೋನ್ ಟಾರ್ಚ್ ಲೈಟ್” ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ಬಿಎಲ್‍ಒಗಳಿಗೆ ಮಾಹಿತಿ ನೀಡಿ ಸಹಕರಿಸಿಜಿಲ್ಲೆಯಲ್ಲಿ ಶೇ.65ರಷ್ಟು ಗಣತಿ ನಮೂನೆಗಳ ಗಣಕೀಕರಣ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ18:ಜಿಲ್ಲೆಯಲ್ಲಿ ಮತದಾರರ ಪಟ್ಟಿಯ  ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಸಾರ್ವಜನಿಕರು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಒನಕೆ ಒಬವ್ವ ವೃತ್ತದಲ್ಲಿ ಶುಕ್ರವಾರ ಸಂಜೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ‘ಮೊಬೈಲ್ ಪೋನ್ ಟಾರ್ಚ್ ಲೈಟ್’ ಮೂಲಕ ಎಸ್‍ಐಆರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಎಸ್‍ಐಆರ್ […]