ಜನರ ನಡುವೆ ಹುಟ್ಟು ಹಬ್ಬ ಆಚರಣೆ ಇಂದಿನ ಯುವರಾಜಕಾರಣಿಗಳಿಗೆ ಡಾ.ಬೊಮ್ಮನಹಳ್ಳಿ ಬಾಬು ಮಾದರಿ: ಪರಮಪೂಜ್ಯಬಸವ ಮೂರ್ತಿಮಾದರ ಚೆನ್ನಯ್ಯ ಸ್ವಾಮೀಜಿ ಅಭಿಮತ.

ಹಿರಿಯೂರು: ಆಡಂಬರವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಶಕ್ತಿ ಅಂತಸ್ತು ಇದ್ದರೂ ಸಹ ಬಡ ಜನರ ನಡುವೆ ಬಂದು ತನ್ನ ಹುಟ್ಟುಹಬ್ಬ ಆಚರಣೆ ಮಾಡಿ ಕೊಂಡಿದ್ದು ಉತ್ತಮ ಮಾನವೀಯ ಗುಣವಾಗಿದೆ ಎಂದು ಚಿತ್ರದುರ್ಗದ ಮಾದರಚೆನ್ನಯ್ಯ ಗುರು ಪೀಠದ ಪರಮಪೂಜ್ಯಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.              ಪಟ್ಟಣದ ಅವಧಾನಿ ನಗರದಲ್ಲಿ ಡಾ, ಬೊಮ್ಮನಹಳ್ಳಿ ಬಾಬು ಅಭಿಮಾನಿಗಳ ಬಳಗ ಆಯೋಜಿಸಿದ್ದ ಡಾ. ಬೊಮ್ಮನಹಳ್ಳಿ ಬಾಬು ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, […]

ಅಧಿಕಾರ ಶಾಶ್ವತವಲ್ಲ, ಅಭಿವೃದ್ಧಿಯ ಕೆಲಸವೇ ಶಾಶ್ವತ: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

85 ಲಕ್ಷ ವೆಚ್ಚದ ಅಭಿವೃದ್ಧಿ ಭೂಮಿ ಪೂಜೆ ಕಳ್ಳಿಹಟ್ಟಿ ಗೊಲ್ಲರಹಟ್ಟಿ, ಬರಗೇರಮ್ಮ ದೇವಸ್ಥಾನ, ಚೋಳಗುಡ್ಡ ಬಳಿ ಅಭಿವೃದ್ಧಿ ಚಿತ್ರದುರ್ಗ, ಜು. 14: ಅಧಿಕಾರ ಇಂದು ಇರುತ್ತದೆ, ನಾಳೆ ಹೋಗಬಹುದು. ಆದರೆ ಜನರಿಗಾಗಿ ಮಾಡುವ ಅಭಿವೃದ್ಧಿ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಇದೇ ನನ್ನ ರಾಜಕೀಯ ಜೀವನದ ಮೂಲ ಸಿದ್ಧಾಂತವಾಗಿದೆ. ಅಧಿಕಾರವನ್ನು ಪ್ರತಿಷ್ಠೆಗಾಗಿ ಅಲ್ಲ, ಜನಸೇವೆಗೆ ಬಳಸಬೇಕೆಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.  ತಾಲೂಕಿನ ಕಳ್ಳಿಹಟ್ಟಿ ಗೊಲ್ಲರಹಟ್ಟಿ, ಬರಗೇರಮ್ಮ ದೇವಸ್ಥಾನ, ಚೋಳಗುಡ್ಡ ಗ್ರಾಮದ ವ್ಯಾಪ್ತಿಗಳಲ್ಲಿ ಮಂಗಳವಾರ 2024-25ನೇ […]

AI ಕ್ರಾಂತಿಗೆ ಕರ್ನಾಟಕ ಮುನ್ನುಡಿ: ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ ಘೋಷಣೆ

​​ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ಇಂದು ಬೆಂಗಳೂರಿನ ಬಿಐಇಸಿ (BIEC) ನಲ್ಲಿ ನಡೆದ ‘ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026’ (Google I/O Connect India 2026) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ಮಹತ್ವದ ಘೋಷಣೆ ಮಾಡಿದರು. ​ಇದರೊಂದಿಗೆ, ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಗಳ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ವಿಶೇಷ ‘AI ಹಬ್’ (AI Hub) ಅನ್ನು ಇನ್‌ಕ್ಯುಬೇಶನ್ ಕೇಂದ್ರವಾಗಿ ಸ್ಥಾಪಿಸಲಾಗುವುದು ಎಂದು ಅವರು […]

ಸಹಬಾಳ್ವೆ ಸಮಾನತೆ ಮತ್ತು ದಯೆಯ ತಳಹದಿಯಲ್ಲಿ ಸಮಾಜ ನಿರ್ಮಾಣ ಆಗಬೇಕು.- ಕೆ ನವೀನ್, ವಿಧಾನ ಪರಿಷತ್ ಸದಸ್ಯ

ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿರುವ ಕಮ್ಮರೆಡ್ಡಿ ಕಲ್ಯಾಣ ಮಂಟಪದ ಪಕ್ಕದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಇತ್ತಿಚೆಗೆ ಖರೀದಿಸಿದ್ದ 60*40 ನಿವೇಶನದಲ್ಲಿ ನೂತನ ವೀರಶೈವ ಲಿಂಗಾಯತ ಭವನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ. ನವೀನ್ ಮಾತನಾಡಿ, ಪಟ್ಟಣದ ವೀರಶೈವ ಲಿಂಗಾಯತ ಭವನವು ಕೇವಲ ಒಂದು ಸಿಮೆಂಟ್ ಕಾಂಕ್ರೀಟ್ ಕಟ್ಟಡವಾಗಿರದೇ ಅದು ಇಡೀ ಸಮಾಜದ ಒಗ್ಗಟ್ಟು ಮತ್ತು ಶ್ರಮದ ಸಜೀವ ಪ್ರತೀಕವಾಗಲಿದೆ. ಭವನ […]

ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಿಸಿದ ಸಂಸದ ಗೋವಿಂದ ಎಂ ಕಾರಜೋಳಹಿರಿಯ ನಾಗರಿಕರ ಬದುಕು ಸುಗಮಗೊಳಿಸುವುದು ಸರ್ಕಾರದ ಆದ್ಯತೆ

ದೇಶದ ಹಿರಿಯ ನಾಗರಿಕರನ್ನು ದೇವರಿಗೆ ಸಮಾನವಾಗಿ ಕಾಣುವುದು ನಮ್ಮ ಸಂಸ್ಕøತಿಯಾಗಿದೆ. ವಯೋಸಹಜ ದೌರ್ಬಲ್ಯಗಳಿಂದ ಬಳಲುತ್ತಿರುವ ಹಿರಿಯರ ಬದುಕು ಸುಗಮ ಹಾಗೂ ಸ್ವಾಭಿಮಾನದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ನೆರವಾಗುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.ನಗರದ ಎಸ್‍ಎಸ್‍ಕೆಎಸ್ ಸಮುದಾಯ ಭವನದಲ್ಲಿ ಭಾನುವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಅಲಿಮ್ಕೊ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯಡಿ ಹಿರಿಯ ನಾಗರಿಕರಿಗೆ […]

ಜನ್ಮದಿನಾಚರಣೆ ಬೇಡ, ಮಠದ ವಾರ್ಷಿಕೋತ್ಸವವನ್ನೇ ಆಚರಿಸೋಣ: ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ, ಜು. 12: ಇನ್ನು ಮುಂದೆ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸದೇ, ಅದರ ಬದಲಿಗೆ ಮಠದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು. ನಗರದ ಲಿಡ್ಕರ್ ಭವನದಲ್ಲಿ ಭಾನುವಾರ ಮಾದಿಗ ನೌಕರರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಈವರೆಗೆ ತಮ್ಮ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಇನ್ನುಮುಂದೆ ಜನ್ಮದಿನದ ಆಚರಣೆ […]

ರೋಟರಿ ಕ್ಲಬ್ ಚಿತ್ರದುರ್ಗ ನೂತನ ಅಧ್ಯಕ್ಷರಾಗಿ ರೊ. ಯೋಗೀಶ್ ಸಹ್ಯಾದ್ರಿ, ಪದಗ್ರಹಣ ಸಮಾರಂಭ

ಚಿತ್ರದುರ್ಗ ಜು. 11 ನಗರದ ಪ್ರತಿಷ್ಠಿತ ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ನೂತನ ಅಧ್ಯಕ್ಷರಾಗಿ ಇಂಗ್ಲಿಷ್ ಉಪನ್ಯಾಸಕರಾದ ರೊ. ಯೋಗೀಶ್ ಸಹ್ಯಾದ್ರಿ ಅವರು ಜು.12ರ ಭಾನುವಾರ ಬೆಳಗ್ಗೆ 11.00 ಗಂಟೆಗೆ ನಗರದ ಡಿ.ಸಿ. ಸರ್ಕಲ್ ನಲ್ಲಿ ಇರುವ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ರೋಟರಿ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ್ಲ ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಎಲೆಕ್ಟ್ ರೊ. ಪಿ.ಹೆಚ್.ಎಫ್. ಡಾ. ತ್ರಿವಿಕ್ರಮ್ ಜೋಷಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯೋಗೀಶ್ ಸಹ್ಯಾದ್ರಿ […]

ಮುಗಿಲ ಬೆಳಕಿಗೆ ತೆರೆದುಕೊಂಡ “ಕಾಲಡಿಯ ಕಣ್ಣು”

ದಲಿತ ಚಳವಳಿಯ ಕುದಿಕುಲುಮೆಯಲ್ಲಿ ಎದ್ದು ಬಂದ ಸಿ.ಎಂ.ಮುನಿಯಪ್ಪ ಆತ್ಮಚರಿತ್ರೆ* “ದಲಿತ ಚಳವಳಿ” ಎಂದರೆ ಮೈನವಿರೇಳುವ ಕಾಲವೊಂದಿತ್ತು. ಈ ಚಳವಳಿಯನ್ನು ರಕ್ತ ಕಣ್ಣೀರಿನಲ್ಲಿ ಕಟ್ಟಿದ್ದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಘನ ವಿವೇಕದ ಬೆಳಕಿನಲ್ಲಿ ಮುನ್ನಡೆಸಿದ್ದು, ಇದರ ಫಲವೇ ಇಂದು ದಲಿತ ಸಮುದಾಯ ತಲೆ ಎತ್ತಿ ಅನ್ಯಾಯ,ಅಸಮಾನತೆಯನ್ನು ಪ್ರಶ್ನಿಸುವಂತಾಗಿದೆ. ಮುಖ್ಯ ದಾರಿಯಲ್ಲಿ ಸ್ವಾಭಿಮಾನದಿಂದ ನಡೆಯುವಂತಾಗಿದೆ. ಈ ಹಾದಿಯಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿ ದುಡಿದು, ದಣಿದ ಜೀವಗಳು ಇಂದು ಹಣ್ಣಾಗಿವೆ. ದಲಿತ ಚಳವಳಿ ಎಂಬ ಕುದಿಕುಲುಮೆಯಲ್ಲಿ ಎದ್ದು ಬಂದವರಲ್ಲಿ “ಕೋಲಾರದ […]

ಎರಡ್ಮೂರು ತಿಂಗಳಲ್ಲಿ ಐಮಂಗಲ ಕೆರೆಗಳಿಗೆ ಪ್ರಯೋಗಿಕ ನೀರು

ಜೆಜಿ ಹಳ್ಳಿಯಲ್ಲಿ ವಿ.ಜೆ. ಎನ್.ಎಲ್ ಮಾಜಿ ಎಂಡಿ. ಸಣ್ಣ ಚಿತ್ತಯ್ಯ ಹೇಳಿಕೆ ಹಿರಿಯೂರು : ತಾಲೂಕಿನ ಐಮಂಗಲ ಹೋಬಳಿಯ ಕನಿಷ್ಠ 10 ಕೆರೆಗಳಿಗೆ ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಮುಖ್ಯಮಂತ್ರಿಗಳ ಪರವಾಗಿ ನಾನು ವಾಗ್ದಾನ ಮಾಡುತ್ತೇನೆಂದು ವಿಶ್ವೇಶ್ವರಯ್ಯ ಜಲ ನಿಗಮದ ಮಾಜಿ ವ್ಯವಸ್ಥಾಪಕು ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣ ಚಿತ್ತಯ್ಯ ಹೇಳಿದರು. ತಾಲೂಕಿನ ಜವನಗೊಂಡನಹಳ್ಳಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾನು ಕೃಷಿಕ ಕುಟುಂಬದಿಂದ […]