ಸಶಕ್ತಭಾರತ ನಿರ್ಮಾಣಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅವಶ್ಯಕ: _ಮುಖ್ಯ ಶಿಕ್ಷಕಿ ಎಂ.ವಿ.ಸವಿತ ಅಭಿಪ್ರಾಯ.

ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆಯಲ್ಲಿ ಅರ್ಥಪೂಣ 79ನೇ ಸ್ವಾತಂತ್ರ್ಯೋತ್ಸವದ ಆಚರಣೆ: ಹಿರಿಯೂರು/ಯರಬಳ್ಳಿ_ ಆಗಸ್ಟ್:16 “ಸ್ವಾತಂತ್ರ್ಯ ದಿನಾಚರಣೆ ಎಂದರೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಸ್ಮರಣೆಮಾಡುವುದರ ಮೂಲಕ ನಮ್ಮ ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನ ಮಾತ್ರವಲ್ಲದೆ, ವ್ಯಕ್ತಿತ್ವ ವಿಕಸನಗೊಳಿಸುವ ಕೌಶಲ್ಯಪೂರ್ಣ ಮತ್ತು ನೈತಿಕ ಶಿಕ್ಷಣ ನೀಡುವುದರಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮಾಡುವುದರಮೂಲಕ ಮಕ್ಕಳನ್ನು ದೇಶದ ಸಂಪತ್ತನ್ನಾಗಿ ರೂಪಿಸುವುದರ ಮೂಲಕ ಸಧೃಡ ಭಾರತ ನಿರ್ಮಾಣಕ್ಕೆ ನಾವು ಶ್ರಮಿಸಬೇಕಾಗಿದೆ […]
ನಗರಾಭಿವೃದ್ಧಿಯ ದಿಟ್ಟ ಹೆಜ್ಜೆ – ನಮ್ಮ ಚಿತ್ತದ ಭವಿಷ್ಯ!: ಡಿ. ಸುಧಾಕರ್

ನಗರಾಭಿವೃದ್ಧಿಯ ದಿಟ್ಟ ಹೆಜ್ಜೆ – ನಮ್ಮ ಚಿತ್ತದ ಭವಿಷ್ಯ! ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿ, ಮೂರು ದೊಡ್ಡ ಯೋಜನೆಗಳಿಗೆ ಚಾಲನೆ. ಚಿತ್ರದುರ್ಗ ಪ್ರಮುಖ ರಸ್ತೆ ಅಗಲೀಕರಣ – ಪ್ರವಾಸಿ ಮಂದಿರ ವೃತ್ತದಿಂದ ಕನಕ ವೃತ್ತದವರೆಗೆ 25 ಮೀ ಅಗಲದ ರಸ್ತೆ ನಿರ್ಮಾಣ. ಸಂಚಾರ ದಟ್ಟಣೆ, ಪಾರ್ಕಿಂಗ್, ಫುಟ್‌ಪಾತ್ ಹಾಗೂ ಒಳಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಮೆಡಿಕಲ್ ಕಾಲೇಜು ಸ್ಥಳಾಂತರ – ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಡಿಸಿ […]
ವಾರ್ತಾ ಇಲಾಖೆ: 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಚಿತ್ರದುರ್ಗಆಗಸ್ಟ್ 15:ಭಾರತದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಭವನದಲ್ಲಿ ಶುಕ್ರವಾರ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ರಾಷ್ಟ್ರ ಧ್ವಜರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿಗಳಾದ ಪಿ.ಎಂ.ವೇಣುಗೋಪಾಲ, ಜಿ.ವೆಂಕಟೇಶ್, ಆರ್.ತಿಮ್ಮಶೆಟ್ಟಿ, ಎಂ.ಜೆ. ಬೋರೇಶ, ಮಹಮ್ಮದ್ ಇಮ್ಮಾದ್ ಪಾಷಾ, ನಿವೃತ್ತ ನೌಕರ ಎಸ್.ಚಂದ್ರಶೇಖರ್, ಅಪ್ರೆಂಟಿಸ್ ತರಬೇತಾರ್ಥಿ ಆರ್.ಎನ್.ರಘು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಿ.ಪಿ. ಮಾರುತಿ ಇದ್ದರು.
79ನೇ ಸ್ವಾತಂತ್ರ್ಯೋತ್ಸವ ಮತ್ತು ವೀಲ್ ಚೇರ್ ಬ್ಯಾಸ್ಕೆಟ್ಬಾಲ್ ಆಯ್ಕೆ ತರಬೇತಿ ಶಿಬಿರ

ಆಗಸ್ಟ್ 15 ನಮ್ಮ ತುಮಕೂರು ಡಿಸ್ಟ್ರಿಕ್ಟ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಕರ್ನಾಟಕ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್ ಸಹಯೋಗದಿಂದ ತುಮಕೂರಿನ ಸಿದ್ದಗಂಗಾ ಹಾಸ್ಪಿಟಲ್ ಬಾಸ್ಕೆಟ್ ಬಾಲ್ ಆವರಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ವೀಲ್ ಚೇರ್ ಬ್ಯಾಸ್ಕೆಟ್ಬಾಲ್ ಆಯ್ಕೆ ತರಬೇತಿ ಶಿಬಿರವನ್ನು ನಡೆಸಲಾಯಿತು ಈ ಶಿಬಿರದಲ್ಲಿ 30 ಜನ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಗಂಗಾ ಹಾಸ್ಪಿಟಲ್ ಡಾ!! ಪರಮೇಶ್ವರ್ ಹೆಲೆನ್ ಕೆಲರ್ ಶಾಲೆಯ ಸಂಸ್ಥಾಪಕರಾದ ಗಾಯತ್ರಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷರಾದ ಮಂಜುಳಾ […]
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೇಡಿಕೆಗೆ ಸಿಎಂ ಮಾಧ್ಯಮ ಸಲಹೆಗಾರರ ಸಕರಾತ್ಮಕ ಸ್ಪಂದನೆ

ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೇಡಿಕೆಗೆ ಸಿಎಂ ಮಾಧ್ಯಮ ಸಲಹೆಗಾರರ ಸಕರಾತ್ಮಕ ಸ್ಪಂದನೆ ಕೆಕೆಆರ್ ಡಿಬಿ ವ್ಯಾಪ್ತಿಯ ಪತ್ರಿಕೆಗಳ ಪ್ರೋತ್ಸಾಹಕ್ಕೆ ಚರ್ಚಿಸುವೆ: ಕೆ.ವಿ.ಪ್ರಭಾಕರ್ ಕೊಪ್ಪಳ :ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮಪಟ್ಟಿಯಲ್ಲಿ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡುವ ಸಂಬಂಧ ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ಸಹಕಾರ ಕೊಡಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು. […]
ಬೆಂಗಳೂರಿನ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ನಲ್ಲಿ ರಾಷ್ಟ್ರದ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ನಾಡಿಗೆ ಆತ್ಮೀಯವಾಗಿ ಬರಮಾಡಿಕೊಂಡು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು.

ಬೆಂಗಳೂರಿಗರ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಅವರ ಜೊತೆಗೂಡಿ ಇಂದು ಲೋಕಾರ್ಪಣೆಗೊಳಿಸಿದರು.7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್.ವಿ ರಸ್ತೆ – ಬೊಮ್ಮಸಂದ್ರ ನಡುವಿನ 19.15 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಕಾರ್ಯಾಚರಣೆ ಮಾಡಲಿವೆ.ಬೆಂಗಳೂರಿನ ಉದ್ದಗಲಕ್ಕೂ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡುವ ಮೂಲಕ ಸಂಚಾರ ದಟ್ಟಣೆ ತಗ್ಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಎಂದರು ಮುಖ್ಯ ಮಂತ್ರಿ ಸಿದ್ದರಾಮಯ್ಯ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2025 ಆಗಸ್ಟ್ 10 ರಂದು ಬೆಂಗಳೂರು (ನಮ್ಮ ಮೆಟ್ರೊ) ಹಳದಿ ಮಾರ್ಗವನ್ನು ಉದ್ಘಾಟಿಸಿದರು.

ಕಾರ್ಯಾಚರಣೆ ಪ್ರಾರಂಭ: ಸಾರ್ವಜನಿಕ ಪ್ರಯಾಣಾಚರಣೆ ಆಗಸ್ಟ್ 11 (ಸೊಮವಾರ) ಬೆಳಿಗ್ಗೆ 5 ಗಂಟೆಗೆ ಮೂರು ಟ್ರೇನ್‌ಸೆಟ್‌ಗಳೊಂದಿಗೆ ಪ್ರತಿ 25 ನಿಮಿಷಗಳಲ್ಲಿ ಆರಂಭವಾಗಲಿದೆ ಮಾರ್ಗ ಮತ್ತು ಒಟ್ಟು ಅಂತರ: RV ರಸ್ತೆ (ರಾಗಿ ಗುಡ್ಡ) ನಿಂದ ಬೊಮ್ಮಸಂದ್ರದವರೆಗಿನ ಸುಮಾರು 19 ಕಿಲೋಮೀಟರ್ ಉದ್ದವಿರುವ ಈ ಮೆಟ್ರೊ ಮಾರ್ಗದಲ್ಲಿ 16 ಹೊಸ ಸ್ಟೇಶನ್‌ಗಳು ಸಂಯೋಜಿಸಲಾಗಿ, ಬೆಂಗಳೂರು ಮೆಟ್ರೊ ಜಾಲದ ಒಟ್ಟು ಅಗಲವನ್ನು 96-ಗಿಂತ ಹೆಚ್ಚು ಕಿಲೋಮೀಟರ್‌ಗೆ ವಿಸ್ತಾರಗೊಳಿಸಿದೆ ಪ್ರಾಮುಖ್ಯ ಸ್ತರದ ಲಾಭಗಳು: