ಚಿತ್ರದುರ್ಗ: ಸರ್ಕಾರ ಮಾಡುವಂತಹ ಕೆಲಸಗಳನ್ನು ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಧರ್ಮಸ್ಥಳ ಸಂಸ್ಥೆಯು ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ತಾಲೂಕಿನ ಕೊಂಡಗವಳ್ಳಿ ಗ್ರಾಮದಲ್ಲಿ ಶನಿವಾರ
ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಡಿ ನಮ್ಮೂರು-ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು ಧರ್ಮಸ್ಥಳ ಸಂಸ್ಥೆವತಿಯಿಂದ ರಾಜ್ಯದಲ್ಲೇಡೆ 872 ಕೆರೆಗಳಿಗೆ ಪುನರ್ ಜೀವನವನ್ನು ಕಲ್ಪಿಸಿದ್ದಾರೆ ಇಂತಹ ಮಹತ್ವದ ಕಾರ್ಯಕ್ಕೆ ಧರ್ಮಸ್ಥಳ ಸಂಸ್ಥೆಗೆ ಅಭಿನಂದನೆಗಳು ಎಂದು ತಿಳಿಸಿದರು.
ಧರ್ಮಸ್ಥಳ ಸಂಸ್ಥೆಯು ಮಹಿಳೆಯರನ್ನ ಆರ್ಥಿಕವಾಗಿ ಸದೃಢರನ್ನಾಗಿಸಿ, ಸ್ವಾವಲಂಬಿ ಮಾಡಲು ವಿವಿಧ ಯೋಜನೆಗಳ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ, ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗುವಂತೆ ಮಾಡಿ ಸಮಾಜಮುಖಿಯಲ್ಲಿ ಗುರುತಿಸುವಂತೆ ಸಂಸ್ಥೆಯು ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು.
ಕೆರೆ ಬಳಕೆಯ ಸಮಿತಿಯವರು ಕೆರೆಗಳ ಅಂದವನ್ನು ಕಾಪಾಡಿಕೊಳ್ಳಬೇಕು ಹಾಗೂ ಕೆರೆಗಳಿಗೆ ಘನ ತ್ಯಾಜ್ಯ ವಿಲೇವಾರಿ ಮಾಡದಂತೆ ನೋಡಿಕೊಳ್ಳಬೇಕು ಸಮಿತಿ ಅವರಿಗೆ ಮನವಿ ಮಾಡಿದರು ಹಾಗೂ ಕ್ಷೇತ್ರದ ಕೆಲಸ ಕಾರ್ಯಗಳ ಜೊತೆ ಜೊತೆಗೆ ನಾನು ಯಾವಾಗಲೂ ಇರುವೆ ಎಂದು ತಿಳಿಸಿದರು.
ಕೊಂಡಗವಳ್ಳಿ ಗ್ರಾಮದ ಮುಖ್ಯ ರಸ್ತೆ ಗೆ ಡಕ್ ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡಲು 40 ಲಕ್ಷ ಅನುದಾನವನ್ನ ಬಿಡುಗಡೆ ಮಾಡಲಾಗಿದೆ ಹಾಗೂ ಕೊಂಡಗವಳ್ಳಿ ಪಂಚಾಯಿತಿ ವ್ಯಾಪ್ತಿಗೆ 130 ವಸತಿ ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಧರ್ಮಸ್ಥಳ ಸಂಸ್ಥೆ ಯೋಜನಾ ನಿರ್ದೇಶಕ ಕಮಲಾಕ್ಷ ಮಾತನಾಡಿ ಮಹಿಳೆಯರನ್ನ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲರನ್ನಾಗಿಸಲು ಸಂಸ್ಥೆಯು ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ಸ್ವಸಹಾಯ ಸಂಘಗಳನ್ನು ನಿರ್ಮಿಸಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ, ಇದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಿಗೆ ಬೆಂಚ್, ಬೋಧಕಿಯ ವರ್ಗದವರ ನೇಮಕ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ, ಅಷ್ಟೇ ಅಲ್ಲದೆ ಶುದ್ಧಗಂಗಾ ಎಂಬ ಯೋಜನೆಯ ಜಾರಿಗೊಳಿಸಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಸಂಸ್ಥೆ ಮುಖಾಂತರ ಹಸ್ತಾಂತರಿಸಲಾಗುತ್ತಿದೆ, ನೀರನ್ನ ಸಂರಕ್ಷಿಸಬೇಕೆನ್ನುವ ಉದ್ದೇಶದಿಂದ ಗ್ರಾಮಗಳ ಕೆರೆಯಲ್ಲಿನ ಉಳನ್ನು ತೆಗೆದು ಸ್ವಚ್ಛತೆಗೊಳಿಸಲಾಗುತ್ತೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಇರುವುದರಿಂದ ಅಲ್ಲಿನ ಜನರಿಗೆ ನೀರಿನ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ, ಸರ್ಕಾರದ ಜೊತೆ ಜೊತೆಗೂ ಧರ್ಮಸ್ಥಳ ಸಂಸ್ಥೆಯು ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ರವಿಕುಮಾರ್, ಕಂದಾಯ ನಿರೀಕ್ಷಕರು ಮೋಹನ್ ಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವನಜಾಕ್ಷಿ, ಕೆಡಿಪಿ ಸದಸ್ಯರಾದ ನಾಗರಾಜ್,
ಹಿರೇಗುಂಟನೂರು ಗ್ರಾಮ್ ಪಂಚಾಯ್ತಿ ಅಧ್ಯಕ್ಷ ಮೋಹನ್ ಮೂರ್ತಿ, ಧರ್ಮಸ್ಥಳ ಯೋಜನಾಧಿಕಾರಿ ರವಿಚಂದ್ರ, ಮೌನೇಶ್, ಹಾಲೇಶ್, ಸಾಕಮ್ಮ ಗ್ರಾಮಸ್ಥರಾದ ಚಂದ್ರಶೇಖರ್ ನಿಂಗಪ್ಪ ಶರಣಪ್ಪ ಮಹಾಲಕ್ಷ್ಮಿ ನಿಂಗರಾಜ್ ನಾಯಕ್ ಮಲ್ಲೇಶ್ ನಾಗರಾಜ್, ಮಹಾಲಿಂಗಮ್ಮ, ನೇತ್ರಾವತಿ, ರೇಖಾ ಇತರರು ಇದ್ದರು.


