ಅಪಾರ್ಟ್ಮೆಂಟ್ ಮಾಲೀಕರಿಗೆ ಸಂಪೂರ್ಣ ಆಸ್ತಿ ಹಕ್ಕು; ಜನರ ಧ್ವನಿಯೇ ಸರ್ಕಾರದ ಧ್ವನಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ; ಇ-ಖಾತಾ ಕ್ರಾಂತಿ, ಭೂ ಗ್ಯಾರಂಟಿ, ಬೆಂಗಳೂರಿನ ಅಭಿವೃದ್ಧಿ ಕುರಿತು ಮಹತ್ವದ ಘೋಷಣೆಗಳು ಬೆಂಗಳೂರು, ಜು.15 (ಕರ್ನಾಟಕ ವಾರ್ತೆ): ಅಪಾರ್ಟ್ಮೆಂಟ್ ಮಾಲೀಕರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. “ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗೇ ಸೇರಬೇಕು. ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು” ಎಂದು ಅವರು ಸ್ಪಷ್ಟಪಡಿಸಿದರು. ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ)–2026 ಕರಡು ವಿಧೇಯಕ […]
ರೈತರ ಸಮ್ಮತಿ ಇಲ್ಲದೆ ಒಂದು ಗುಂಟೆ ಜಮೀನೂ ಸ್ವಾಧೀನವಿಲ್ಲ

ಬಿಡದಿ ಟೌನ್ಶಿಪ್ ಯೋಜನೆಗೆ ರೈತರ ಒಪ್ಪಿಗೆ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಯೋಜನೆಯ ಸಾಧಕ-ಬಾಧಕಗಳ ಪರಿಶೀಲನೆಗೆ ಸಮಿತಿ ರಚನೆ; ಹಿಂದಿನ ಸರ್ಕಾರಗಳ ಯೋಜನೆಯನ್ನೇ ಮುಂದುವರಿಸುತ್ತಿದ್ದೇವೆ ಎಂದ ಸಿಎಂ ಬೆಂಗಳೂರು, ಜು.15 (ಕರ್ನಾಟಕ ವಾರ್ತೆ): ಪ್ರಸ್ತಾವಿತ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದು, ರೈತರ ಸಮ್ಮತಿ ಇಲ್ಲದೆ ಒಂದು ಗುಂಟೆ ಜಮೀನನ್ನೂ ಸರ್ಕಾರ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಖಚಿತ ಭರವಸೆ ನೀಡಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ನಡೆದ […]
ಚಿತ್ರದುರ್ಗ ಅಭಿವೃದ್ಧಿಗೆ ಸಿಎಂ ಬಳಿ ಅನುದಾನ ಕೇಳಿದ ಶಾಸಕ ಕೆ.ಸಿ ವಿರೇಂದ್ರ ಪಪ್ಪಿ

ಚಿತ್ರದುರ್ಗದ ಅಭಿವೃದ್ಧಿಗೆ ನಾಲ್ಕು ಮಹತ್ವಾಕಾಂಕ್ಷಿ ಯೋಜನೆಗಳಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಚಿತ್ರದುರ್ಗ: ಚಿತ್ರದುರ್ಗ ನಗರದ ಸಮಗ್ರ ಅಭಿವೃದ್ಧಿ ಹಾಗೂ ಐತಿಹಾಸಿಕ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ನಾಲ್ಕು ಮಹತ್ವಾಕಾಂಕ್ಷಿ ಯೋಜನೆಗಳಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಮಂಜೂರು ಮಾಡಿ ಶೀಘ್ರ ಅನುಷ್ಠಾನಗೊಳಿಸಬೇಕೆಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಜುಲೈ 13 ರಂದು ಮುಖ್ಯಮಂತ್ರಿಗಳು ಚಿತ್ರದುರ್ಗಕ್ಕೆ ಆಗಮಿಸಿದ ವೇಳೆ ಚಿತ್ರದುರ್ಗ ಅಭಿವೃದ್ಧಿ ಹೇಗೆ […]
ಜನರ ನಡುವೆ ಹುಟ್ಟು ಹಬ್ಬ ಆಚರಣೆ ಇಂದಿನ ಯುವರಾಜಕಾರಣಿಗಳಿಗೆ ಡಾ.ಬೊಮ್ಮನಹಳ್ಳಿ ಬಾಬು ಮಾದರಿ: ಪರಮಪೂಜ್ಯಬಸವ ಮೂರ್ತಿಮಾದರ ಚೆನ್ನಯ್ಯ ಸ್ವಾಮೀಜಿ ಅಭಿಮತ.

ಹಿರಿಯೂರು: ಆಡಂಬರವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಶಕ್ತಿ ಅಂತಸ್ತು ಇದ್ದರೂ ಸಹ ಬಡ ಜನರ ನಡುವೆ ಬಂದು ತನ್ನ ಹುಟ್ಟುಹಬ್ಬ ಆಚರಣೆ ಮಾಡಿ ಕೊಂಡಿದ್ದು ಉತ್ತಮ ಮಾನವೀಯ ಗುಣವಾಗಿದೆ ಎಂದು ಚಿತ್ರದುರ್ಗದ ಮಾದರಚೆನ್ನಯ್ಯ ಗುರು ಪೀಠದ ಪರಮಪೂಜ್ಯಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಪಟ್ಟಣದ ಅವಧಾನಿ ನಗರದಲ್ಲಿ ಡಾ, ಬೊಮ್ಮನಹಳ್ಳಿ ಬಾಬು ಅಭಿಮಾನಿಗಳ ಬಳಗ ಆಯೋಜಿಸಿದ್ದ ಡಾ. ಬೊಮ್ಮನಹಳ್ಳಿ ಬಾಬು ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, […]
ಅಧಿಕಾರ ಶಾಶ್ವತವಲ್ಲ, ಅಭಿವೃದ್ಧಿಯ ಕೆಲಸವೇ ಶಾಶ್ವತ: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

85 ಲಕ್ಷ ವೆಚ್ಚದ ಅಭಿವೃದ್ಧಿ ಭೂಮಿ ಪೂಜೆ ಕಳ್ಳಿಹಟ್ಟಿ ಗೊಲ್ಲರಹಟ್ಟಿ, ಬರಗೇರಮ್ಮ ದೇವಸ್ಥಾನ, ಚೋಳಗುಡ್ಡ ಬಳಿ ಅಭಿವೃದ್ಧಿ ಚಿತ್ರದುರ್ಗ, ಜು. 14: ಅಧಿಕಾರ ಇಂದು ಇರುತ್ತದೆ, ನಾಳೆ ಹೋಗಬಹುದು. ಆದರೆ ಜನರಿಗಾಗಿ ಮಾಡುವ ಅಭಿವೃದ್ಧಿ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಇದೇ ನನ್ನ ರಾಜಕೀಯ ಜೀವನದ ಮೂಲ ಸಿದ್ಧಾಂತವಾಗಿದೆ. ಅಧಿಕಾರವನ್ನು ಪ್ರತಿಷ್ಠೆಗಾಗಿ ಅಲ್ಲ, ಜನಸೇವೆಗೆ ಬಳಸಬೇಕೆಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು. ತಾಲೂಕಿನ ಕಳ್ಳಿಹಟ್ಟಿ ಗೊಲ್ಲರಹಟ್ಟಿ, ಬರಗೇರಮ್ಮ ದೇವಸ್ಥಾನ, ಚೋಳಗುಡ್ಡ ಗ್ರಾಮದ ವ್ಯಾಪ್ತಿಗಳಲ್ಲಿ ಮಂಗಳವಾರ 2024-25ನೇ […]
AI ಕ್ರಾಂತಿಗೆ ಕರ್ನಾಟಕ ಮುನ್ನುಡಿ: ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ ಘೋಷಣೆ

ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ಇಂದು ಬೆಂಗಳೂರಿನ ಬಿಐಇಸಿ (BIEC) ನಲ್ಲಿ ನಡೆದ ‘ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026’ (Google I/O Connect India 2026) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಈ ಮಹತ್ವದ ಘೋಷಣೆ ಮಾಡಿದರು. ಇದರೊಂದಿಗೆ, ಸ್ಟಾರ್ಟ್ಅಪ್ಗಳು ಮತ್ತು ಉದ್ಯಮಗಳ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ವಿಶೇಷ ‘AI ಹಬ್’ (AI Hub) ಅನ್ನು ಇನ್ಕ್ಯುಬೇಶನ್ ಕೇಂದ್ರವಾಗಿ ಸ್ಥಾಪಿಸಲಾಗುವುದು ಎಂದು ಅವರು […]
ಸಹಬಾಳ್ವೆ ಸಮಾನತೆ ಮತ್ತು ದಯೆಯ ತಳಹದಿಯಲ್ಲಿ ಸಮಾಜ ನಿರ್ಮಾಣ ಆಗಬೇಕು.- ಕೆ ನವೀನ್, ವಿಧಾನ ಪರಿಷತ್ ಸದಸ್ಯ

ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿರುವ ಕಮ್ಮರೆಡ್ಡಿ ಕಲ್ಯಾಣ ಮಂಟಪದ ಪಕ್ಕದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಇತ್ತಿಚೆಗೆ ಖರೀದಿಸಿದ್ದ 60*40 ನಿವೇಶನದಲ್ಲಿ ನೂತನ ವೀರಶೈವ ಲಿಂಗಾಯತ ಭವನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ. ನವೀನ್ ಮಾತನಾಡಿ, ಪಟ್ಟಣದ ವೀರಶೈವ ಲಿಂಗಾಯತ ಭವನವು ಕೇವಲ ಒಂದು ಸಿಮೆಂಟ್ ಕಾಂಕ್ರೀಟ್ ಕಟ್ಟಡವಾಗಿರದೇ ಅದು ಇಡೀ ಸಮಾಜದ ಒಗ್ಗಟ್ಟು ಮತ್ತು ಶ್ರಮದ ಸಜೀವ ಪ್ರತೀಕವಾಗಲಿದೆ. ಭವನ […]
ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಿಸಿದ ಸಂಸದ ಗೋವಿಂದ ಎಂ ಕಾರಜೋಳಹಿರಿಯ ನಾಗರಿಕರ ಬದುಕು ಸುಗಮಗೊಳಿಸುವುದು ಸರ್ಕಾರದ ಆದ್ಯತೆ

ದೇಶದ ಹಿರಿಯ ನಾಗರಿಕರನ್ನು ದೇವರಿಗೆ ಸಮಾನವಾಗಿ ಕಾಣುವುದು ನಮ್ಮ ಸಂಸ್ಕøತಿಯಾಗಿದೆ. ವಯೋಸಹಜ ದೌರ್ಬಲ್ಯಗಳಿಂದ ಬಳಲುತ್ತಿರುವ ಹಿರಿಯರ ಬದುಕು ಸುಗಮ ಹಾಗೂ ಸ್ವಾಭಿಮಾನದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ನೆರವಾಗುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.ನಗರದ ಎಸ್ಎಸ್ಕೆಎಸ್ ಸಮುದಾಯ ಭವನದಲ್ಲಿ ಭಾನುವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಅಲಿಮ್ಕೊ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯಡಿ ಹಿರಿಯ ನಾಗರಿಕರಿಗೆ […]
ಜನ್ಮದಿನಾಚರಣೆ ಬೇಡ, ಮಠದ ವಾರ್ಷಿಕೋತ್ಸವವನ್ನೇ ಆಚರಿಸೋಣ: ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ, ಜು. 12: ಇನ್ನು ಮುಂದೆ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸದೇ, ಅದರ ಬದಲಿಗೆ ಮಠದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು. ನಗರದ ಲಿಡ್ಕರ್ ಭವನದಲ್ಲಿ ಭಾನುವಾರ ಮಾದಿಗ ನೌಕರರ ಸಂಘದ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಈವರೆಗೆ ತಮ್ಮ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಇನ್ನುಮುಂದೆ ಜನ್ಮದಿನದ ಆಚರಣೆ […]
ರೋಟರಿ ಕ್ಲಬ್ ಚಿತ್ರದುರ್ಗ ನೂತನ ಅಧ್ಯಕ್ಷರಾಗಿ ರೊ. ಯೋಗೀಶ್ ಸಹ್ಯಾದ್ರಿ, ಪದಗ್ರಹಣ ಸಮಾರಂಭ

ಚಿತ್ರದುರ್ಗ ಜು. 11 ನಗರದ ಪ್ರತಿಷ್ಠಿತ ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ನೂತನ ಅಧ್ಯಕ್ಷರಾಗಿ ಇಂಗ್ಲಿಷ್ ಉಪನ್ಯಾಸಕರಾದ ರೊ. ಯೋಗೀಶ್ ಸಹ್ಯಾದ್ರಿ ಅವರು ಜು.12ರ ಭಾನುವಾರ ಬೆಳಗ್ಗೆ 11.00 ಗಂಟೆಗೆ ನಗರದ ಡಿ.ಸಿ. ಸರ್ಕಲ್ ನಲ್ಲಿ ಇರುವ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ರೋಟರಿ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ್ಲ ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಎಲೆಕ್ಟ್ ರೊ. ಪಿ.ಹೆಚ್.ಎಫ್. ಡಾ. ತ್ರಿವಿಕ್ರಮ್ ಜೋಷಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯೋಗೀಶ್ ಸಹ್ಯಾದ್ರಿ […]