ದಿನಾಂಕ 09-08-2025 ರಂದು ಹಿರಿಯೂರು ಪ್ರವಾಸಿ ಮಂದಿರದಲ್ಲಿ ಸಚಿವ ಸುಧಾಕರ್ ಗೆ ಮನವಿ ಕೊಟ್ಟು ಮಾತನಾಡಿದ ಅಧ್ಯಕ್ಷ ಕಸವನಹಳ್ಳಿ ರಮೇಶ್ ” ಈಗ ವಿವಿ ಸಾಗರಕ್ಕೆ ಹಂಚಿಕೆ ಮಾಡಿರುವ ಎರಡು ಟಿ.ಎಂ.ಸಿ.ನೀರು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕುಡಿಯುವ ನೀರಿಗೆ ಸಾಲುವುದಿಲ್ಲ. ಅಲ್ಲದೆ ಕೃಷಿ ಚಟುವಟಿಕೆಗೆ ನೀರಿಲ್ಲದೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ಹಾಗೂ ಶೀಘ್ರದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಂಸದರು ಜನಪ್ರತಿನಿಧಿಗಳು ರೈತರನ್ನು ಸಭೆ ಸೇರಿಸಿ ನಿರ್ಣಯ ಕೈಗೊಳ್ಳಬೇಕೆಂದು ಎಚ್ಆರ್ ತಿಮ್ಮಯ್ಯ ಸಲಹೆ ನೀಡಿದರು ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ, ಆಲೂರ್ ಸಿದ್ದರಾಮಣ್ಣ ಉಪಾಧ್ಯಕ್ಷ M. M. M .ಮಣಿ ನಿರ್ದೇಶಕರಾದ ಆರ್ ಕೆ ಗೌಡ, ನಾರಾಯಣ ಆಚಾರ್, ಖಜಾಂಚಿ ಬಬ್ಬೂರು ಸುರೇಶ್. ರಾಮಚಂದ್ರ ಕಸವನಹಳ್ಳಿ. ರೈತ ಸಂಘದ ಕೆ ಸಿ ಹೊರ್ಕೆರಪ್ಪ ಇತರರು ಉಪಸ್ಥಿತರಿದ್ದರು.
