
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:
UKP-III ಯೋಜನೆಗೆ ಬಲ: ಅಲಮಟ್ಟಿ ಜಲಾಶಯದ ಎತ್ತರವನ್ನು 517 ಮೀಟರ್‌ನಿಂದ 524.2 ಮೀಟರ್‌ಗೆ ಹೆಚ್ಚಿಸುವ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಇದರಿಂದ ಕೃಷ್ಣ ನದಿಯಿಂದ ಹೆಚ್ಚಿನ ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.
173 TMC ನೀರಿನ ಹಕ್ಕು: 2010ರಲ್ಲಿ KWDT-II ನೀಡಿದ ತೀರ್ಪಿನಲ್ಲಿ ಕರ್ನಾಟಕಕ್ಕೆ 173 TMC ನೀರು ಹಂಚಿಕೆ ಮಾಡಲಾಗಿದೆ. ಇದನ್ನು ಕೇಂದ್ರ ಸರ್ಕಾರ ಗಜೇಟ್‌ನಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸಿದರು.
ಭೂಸ್ವಾಧೀನ ಮತ್ತು ಪರಿಹಾರ: ಯೋಜನೆಯ ಭಾಗವಾಗಿ ಸುಮಾರು 1.3 ಲಕ್ಷ ಎಕರೆ ಭೂಮಿ ಭೂಸ್ವಾಧೀನಗೊಳ್ಳಲಿದೆ. ರೈತರಿಗೆ ನ್ಯಾಯ ದೊರಕಿಸುವಂತೆ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
₹5,563 ಕೋಟಿ ಅನುದಾನ: ಈ ಯೋಜನೆಗಾಗಿ ಈಗಾಗಲೇ ಈ ವರ್ಷದ ಬಜೆಟ್‌ನಲ್ಲಿ ₹5,563 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.
ನ್ಯಾಯಮಂಡಳಿಗೆ ಸಿದ್ಧತೆ: ಸೆಪ್ಟೆಂಬರ್ 23–25 ರಂದು ನಡೆಯಲಿರುವ ನ್ಯಾಯಮಂಡಳಿ ವಿಚಾರಣೆಗೆ ಕರ್ನಾಟಕ ಸಂಪೂರ್ಣ ಸಿದ್ಧವಾಗಿದೆ. ಎಲ್ಲಾ ದಾಖಲೆಗಳು, ತಾಂತ್ರಿಕ ವರದಿಗಳು, ಮತ್ತು ನೀರಿನ ಬಳಕೆ ವಿವರಗಳನ್ನು ಮಂಡಿಸಲು ತಯಾರಿ ನಡೆದಿದೆ