ಚಳ್ಳಕೆರೆ: ನಗರದ ಎಲ್ಐಸಿ ಆಫೀಸ್ ರೋಡ್ನಲ್ಲಿ ಇರುವ ಮಣಪುರಂ ಫೈನಾನ್ಸ್ ಲಿಮಿಟೆಡ್ 0299 ಶಾಖೆಯಲ್ಲಿ 19ನೇ ವರ್ಷದ ಸಂಭ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಖಾ ಮ್ಯಾನೇಜರ್ ಶ್ರೀಮತಿ ಲೀಲಾ, ಕೆ ರವರು ಮಾತನಾಡಿ, “19 ವರ್ಷಗಳ ಯಶಸ್ವಿ ಪಯಣದಲ್ಲಿ ಗ್ರಾಹಕರ ವಿಶ್ವಾಸ, ಸಹಕಾರ ಮತ್ತು ಬಾಂದವ್ಯವೇ ನಮ್ಮ ಸಂಸ್ಥೆಯ ನಿಜವಾದ ಬಲ. ಪ್ರತಿಯೊಬ್ಬ ಗ್ರಾಹಕನಿಗೂ ಪಾರದರ್ಶಕ ಹಾಗೂ ನಿಷ್ಠಾವಂತ ಸೇವೆ ನೀಡುವುದು ನಮ್ಮ ಮುಖ್ಯ ಗುರಿ,” ಎಂದು ಹೇಳಿದರು.
ಸಂಸ್ಥೆಯ ವಿವಿಧ ಆರ್ಥಿಕ ಸೇವೆಗಳು, ಜನಪರ ಯೋಜನೆಗಳು ಮತ್ತು ತ್ವರಿತ ಸೇವಾ ವ್ಯವಸ್ಥೆಗಳ ಬಗ್ಗೆ ವಿವರಿಸಿದ ಅವರು, “ಗ್ರಾಹಕರೊಂದಿಗೆ ಕುಟುಂಬದಂತಹ ಸಂಬಂಧ ಬೆಳೆಸಿಕೊಂಡಿರುವುದು ನಮ್ಮ ವಿಶೇಷತೆ. ಸಂಕಷ್ಟದ ಸಂದರ್ಭಗಳಲ್ಲಿ ನೆರವು ನೀಡುವುದು ನಮ್ಮ ಸಾಮಾಜಿಕ ಜವಾಬ್ದಾರಿ,” ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕೇಕ್ ಕಟ್ ಮಾಡುವ ಮೂಲಕ 19 ನೇ ವಾರ್ಷಿಕೋತ್ಸವ,ಸಂಭ್ರಮಾಚರಣೆ ನಡೆಯಿತು. ವಿಶ್ವಾಸಾರ್ಹ ಗ್ರಾಹಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಂದಿನ ದಿನಗಳಲ್ಲೂ ಉತ್ತಮ ಸೇವೆ ನೀಡಿ ಗ್ರಾಹಕರ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ,”ಗ್ರಾಹಕರ ವಿಶ್ವಾಸವೇ ನಮ್ಮ ಶಕ್ತಿ ಎಂದು ಶ್ರೀಮತಿ ಲೀಲಾ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ
ಅರುಣ್ ಕುಮಾರ್,ಎಸ್
(ಉಳ್ಳಾರ್ತಿ)
ಕರುನಾಡು ಸುದ್ದಿ ಜಿಲ್ಲಾ ವರದಿಗಾರರು,
ಜಯಣ್ಣ (ಚಿಕ್ಕಮ್ಮನಹಳ್ಳಿ) ಸಿಬ್ಬಂದಿವರ್ಗ: ಅಂಕಿತ, ದೇವರಾಜ್ ಅನಿತಾ ಹನುಮಂತ ರೆಡ್ಡಿ ನಮಿಲ್ ಪ್ರಸಾದ್ ಗೋವಿಂದರಾಜು ಹಾಗೂ ಗ್ರಾಹಕರು ಭಾಗವಹಿಸಿದ್ದರು.










