ಮಾನವೀಯತೆಗೆಮಿಡಿದ ಹೃದಯಗಳು ವರದಿ:- ಅರುಣ್ ಕುಮಾರ್, ಎಸ್ (ಉಳ್ಳಾರ್ತಿ)

ಚಿತ್ರದುರ್ಗ:-
ಬಿಳಿ ರಕ್ತದ ಕಣ ಕಡಿಮೆ ಆಗಿದ್ದ ಕಾರಣ ಜೋಗಿಹಟ್ಟಿ ಮಂಜುನಾಥ್ ಎಂಬ ಯುವಕನಿಗೆ ತುರ್ತಾಗಿ ನಾಲ್ಕು ಬಾಟಲ್ ಬ್ಲಡ್ ಬೇಕಾಗಿರುತ್ತದೆ,
ಎಂದು ತಿಳಿಸಿದಾಗ
ನನ್ನ ಸಂದೇಶಕ್ಕೆ ಮತ್ತು ನನ್ನ ಕರೆಗೆ ಸ್ಪಂದಿಸಿ 65 ಕಿಲೋಮೀಟರ್ ದೂರದಿಂದ ಬಂದು ತಮ್ಮ ಅಮೂಲ್ಯವಾದ ಕ್ಷಣಗಳನ್ನು ನನ್ನ ಕರೆಗೆ ಮೂಡಿಪಾಗಿಟ್ಟು,
ಒಂದು ಜೀವದ ಸಹಾಯಕ್ಕೆ ಸ್ಪಂದಿಸಿ,
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿದ,
ಕರುಣಾಮಯಿ, ಕಷ್ಟಕ್ಕೆ ಮಿಡಿದ ಹೃದಯಗಳು,ಕೆ,ಜಿ ಮಂಜಣ್ಣ(ಜೋಗಿಹಟ್ಟಿ)
ಓ,ತಿಪ್ಪೇಸ್ವಾಮಿ,(ನಾಯಕನಹಟ್ಟಿ)
ಡಿ,ಎಸ್ ಬಾಲರಾಜ್ (ಜೋಗಿಹಟ್ಟಿ)ರವರಿಗೆ ಹೃದಯಪೂರ್ವಕ ಅನಂತ ಕೃತಜ್ಞತೆಗಳು 🙏
ಮಾನವೀಯತೆಯನ್ನೇ ಮರೆತು ಬದುಕುತ್ತಿರುವ ಈ ಪ್ರಪಂಚದಲ್ಲಿ ನಿಮ್ಮ ಸಹೃದಯಿ ಮಾನವೀಯತೆಗೆ ಮತ್ತು ನಿಮ್ಮ ಸ್ಪಂದನೆಗೆ, ನಿಮ್ಮ ದೊಡ್ಡ ಮನಸ್ಸಿಗೆ – ಒಂದು ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ.
ರಕ್ತದಾನ ಎಂದರೆ ಕೇವಲ ದಾನವಲ್ಲ,
ಅದು ಜೀವದಾನ.
ನಿಮ್ಮ ಕೈಯಿಂದ ಹರಿದ ರಕ್ತ…
ಒಂದು ತಾಯಿಯ ಕಣ್ಣೀರನ್ನು ನಿಲ್ಲಿಸಿದೆ…
ಒಂದು ಕುಟುಂಬದ ಆಶೆಯನ್ನು ಜೀವಂತಗೊಳಿಸಿದೆ…
ನಿಮ್ಮಂತಹ ಮಹನೀಯರು ಸಮಾಜಕ್ಕೆ ಮಾದರಿ.
ದೇವರು ನಿಮಗೆ ಇನ್ನಷ್ಟು ಆರೋಗ್ಯ, ಆಯುಷ್ಯ ಮತ್ತು ಯಶಸ್ಸು ನೀಡಲಿ ಎಂದು ಹಾರೈಸುತ್ತೇನೆ,
ಮತ್ತೊಮ್ಮೆ ಧನ್ಯವಾದಗಳು,
🙏ದಯವಿಟ್ಟು ಕಷ್ಟ ಎಂದಾಗ ಯಾರಾದರು ಎಲ್ಲಿಯಾದರೂ ಸ್ಪಂದಿಸಿ🙏
🙏ರಕ್ತದಾನ ಮಾಡಿ ಜೀವ ಉಳಿಸಿ 🙏
🙏🙏🙏🙏🙏🙏🙏🙏🙏🙏🙏🙏🙏

ಮಾನವೀಯತೆಗೆಮಿಡಿದ ಹೃದಯಗಳು ವರದಿ:- ಅರುಣ್ ಕುಮಾರ್, ಎಸ್ (ಉಳ್ಳಾರ್ತಿ)