ಶ್ರೀ ಸಿ.ಟಿ ಕೃಷ್ಣ ಮೂರ್ತಿ ರವರು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟ ವ್ಯಕ್ತಿ. ರಾಜಕೀಯ, ಸಾಮಾಜಿಕ ಹಾಗೂ ಮಾನವೀಯ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರ“ ಶ್ರೀ ಪೂಜ್ಯ ಶಿವಲಿಂಗಾನಂದ ಸ್ವಾಮೀಜಿ

ಉಚಿತ ಆರೋಗ್ಯ ಶಿಬಿರ ಮೂಲಕ. ಶ್ರೀ ಸಿ.ಟಿ ಕೃಷ್ಣಮೂರ್ತಿ ಹುಟ್ಟುಹಬ್ಬ ಆಚರಣೆ ವರದಿ :-ಅರುಣ್ ಕುಮಾರ್.ಎಸ್ (ದೊಡ್ಡಉಳ್ಳಾರ್ತಿ) ಚಿತ್ರದುರ್ಗ :- ನಗರದ ಕರುವಿನ ಕಟ್ಟೆ ಸರ್ಕಲ್ ಬಳಿ ಚಿತ್ರದುರ್ಗ ಮಾಜಿ ನಗರಸಭೆ ಅಧ್ಯಕ್ಷರಾದ ಶ್ರೀಯುತ ಸಿ.ಟಿ. ಕೃಷ್ಣಮೂರ್ತಿಯವರ 70ನೇ ವರ್ಷದ ಜನ್ಮದಿನಾಚರಣೆಯನ್ನು ದೊಡ್ಡ ಗರಡಿ ಅಭಿಮಾನಿಗಳ ಬಳಗ ಹಾಗೂ ಗೋಡೆಮನೆ ಆರೋಗ್ಯ ಮತ್ತು ರಸ್ತೆ ಜಾಗೃತಿ ಟ್ರಸ್ಟ್ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಹಾಗೂ […]