ಜನರ ಧ್ವನಿಯಾಗಿ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳಲಿ:ಬಿ.ಕೆ. ಹರಿಪ್ರಸಾದ್ ನಾಯಕತ್ವದ ಮೇಲೆ ವಿಶ್ವಾಸ:- ಪವಿತ್ರ.ಪಿಕೆ

ರಾಹುಲ್ ಗಾಂಧಿಗೆ ಶುಭಾಶಯ, ಹರಿಪ್ರಸಾದ್‌ಗೆ ಬೆಂಬಲ: ಸಂಕಲ್ಪ ಸಮಾವೇಶಕ್ಕೆ ಚಿತ್ರದುರ್ಗದಿಂದ ಭಾರಿ ಸಿದ್ಧತೆ :-

ವರದಿ:-ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ)

ಚಿತ್ರದುರ್ಗ :-
ಭಾರತದ ಲೋಕಸಭೆಯ ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆದ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ಅವರ ನಾಯಕತ್ವದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಯುವ ಜನರ ಆಶೋತ್ತರಗಳು ಮತ್ತಷ್ಟು ಬಲಗೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಪವಿತ್ರ ಪಿಕೆ ಚಿತ್ರದುರ್ಗ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರು ಹೇಳಿದರು:-

ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಪರವಾಗಿ ಹಾಗೂ ನನ್ನ ಈಡಿಗ ಸಮಾಜದ ವತಿಯಿಂದ ವೈಯಕ್ತಿಕವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸುದೀರ್ಘ ರಾಜಕೀಯ ಅನುಭವ, ಪಕ್ಷದ ಸಂಘಟನೆಗೆ ನೀಡಿರುವ ಅಪಾರ ಕೊಡುಗೆ ಹಾಗೂ ಕಾರ್ಯಕರ್ತರೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯದ ಮೂಲಕ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಲಿದ್ದಾರೆ ಎಂಬ ವಿಶ್ವಾಸ ನಮ್ಮೆಲ್ಲರಲ್ಲಿದೆ. ಅವರ ನಾಯಕತ್ವದಲ್ಲಿ ಪಕ್ಷವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ, ಮಹಿಳೆಯರು, ಯುವಕರು ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶಗಳು ದೊರಕಲಿ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನರ ಧ್ವನಿಯಾಗಿ ಇನ್ನಷ್ಟು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ದಿನಾಂಕ 21.6.2026 ರಂದು ಭಾನುವಾರ  ಬೆಳಗ್ಗೆ ಸಂಕಲ್ಪ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನ ತ್ರಿಪುರ ವಾಸಿನಿ ಆವರಣದಲ್ಲಿ ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದಾರೆ, ನಾವು ಕೂಡ ನಮ್ಮ ಸ್ವಂತ ಖರ್ಚಿನಿಂದ ಚಿತ್ರದುರ್ಗದಿಂದ ಪ್ರತ್ಯೇಕ ಬಸ್ ನಲ್ಲಿ ಕಾರ್ಯಕರ್ತರನ್ನ ಹಾಗೂ ನನ್ನ ಈಡಿಗ ಸಮಾಜದ ಬಂದುಗಳನ್ನ ಕರೆದುಕೊಂಡು ಹೋಗುತ್ತಿದ್ದೇನೆ .ಈ ಮಹತ್ವದ ಸಂದರ್ಭದಲ್ಲಿ ಪಕ್ಷದ ಎಲ್ಲಾ ಹಿರಿಯ ಮುಖಂಡರು,ಹಿರಿಯ ಕಾರ್ಯಕರ್ತರು  
ಪದಾಧಿಕಾರಿಗಳು ಜನ ಪ್ರತಿನಿಧಿಗಳು ಹಾಗೂ ನನ್ನ ಈಡಿಗ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತೇನೆ,
ನೂತನ ಜವಾಬ್ದಾರಿಯಲ್ಲಿ ಅವರಿಗೆ ಯಶಸ್ಸು, ಉತ್ತಮ ಆರೋಗ್ಯ ಹಾಗೂ ಶಕ್ತಿ ದೊರೆಯಲಿ ಎಂದು ನನ್ನ ಈಡಿಗ ಸಮಾಜ ಮತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ಶುಭ ಹಾರೈಸುತ್ತೇನೆ ಎಂದರು.

ಜನರ ಧ್ವನಿಯಾಗಿ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳಲಿ:ಬಿ.ಕೆ. ಹರಿಪ್ರಸಾದ್ ನಾಯಕತ್ವದ ಮೇಲೆ ವಿಶ್ವಾಸ:- ಪವಿತ್ರ.ಪಿಕೆ