ಕಾಗಾಜ್ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ
ಚಿತ್ರದುರ್ಗ: ಯುವತಿಯರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ, ಭಾರತದ ಯುವಶಕ್ತಿ ನಾವೇ ಎಂದು ಪ್ರೇರೇಪಿತರಾಗಿ, ಗುರಿಗಳತ್ತ ಸಾಗಬೇಕೆಂದು ಕಾಗಜ್ ಫೌಂಡೇಶನ್ ಸಂಸ್ಥಾಪಕಿ ಕವಿತಾ ರೆಡ್ಡಿ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
Thank you for reading this post, don't forget to subscribe!ನಗರದ ಪತ್ರಿಕೆ ಭವನದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಬಾಪುಲೆ ಮತ್ತು ಫಾತಿಮಾ ಶೇಖ್ ಅವರ ಸ್ಮರಣಾರ್ಥಕವಾಗಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಯುವತಿಯರು ಓದಿನ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು, ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ಉತ್ತಮ ಕೊಡುಗೆಯನ್ನು ಕೊಡಬೇಕಿದೆ, ಹೆಣ್ಣು ಸಂಸಾರದ ಕಣ್ಣು ಎನ್ನುವ ಗಾದೆ ಮಾತಿನಂತೆ ಹೆಣ್ಣು ಈ ದೇಶಕ್ಕೆ ಒಂದು ಮಾದರಿಯಾಗಿ ನಿಲ್ಲಬೇಕು ಅಂತಹ ಸಾಧನೆಗಳತ್ತ ಮಹಿಳಾ ಯುವ ಸಮುದಾಯ ಮುಂದಾಗಬೇಕೆಂದು ತಿಳಿಸಿದರು.
ಭಾರತ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ ಒಂದೇ ಮೇಲು ಕೀಳು ಜಾತಿ ಭೇದ ಭಾವಗಳನ್ನೆಲ್ಲ ಮರೆತು ನಾವೆಲ್ಲರೂ ಭಾರತೀಯರು, ಎನ್ನುವ ಭ್ರಾತೃತ್ವದ ಅಡಿಯಲ್ಲಿ ನಾವು ಜೀವಿಸಬೇಕು, ಭಾರತ ಸಂವಿಧಾನಕ್ಕೆ ಗೌರವವನ್ನು ನೀಡುತ್ತಾ ಅದರ ಕಾನೂನುಗಳನ್ನು ಅನುಸರಿಸುತ್ತ ಬದುಕಿದಾಗ ಮಾತ್ರ ನಾವು ಭಾರತ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ತಿಳಿಸಿದರು.
ಮಹಿಳಾ ಕುಲಕ್ಕಾಗಿ ಸಾಕಷ್ಟು ಮಹಿಳಾ ಮಹನೀಯರು ಅವಮಾನಗಳನ್ನು ಸಹಿಸಿಕೊಂಡು ಉನ್ನತ ವ್ಯಾಸಂಗಗಳನ್ನು ಕಲಿತು ದೇಶಕ್ಕೆ ಮಾದರಿಯಾಗಿದ್ದಾರೆ, ಸಾವಿತ್ರಿ ಬಾಯಿ ಪುಲೆ ಮತ್ತು ಫಾತಿಮಾ ಶೇಖ್ ರವರು ಮಹಿಳಾ ಸಮಾಜಕ್ಕೆ ನೀಡಿರುವಂತಹ ಕೊಡುಗೆ ಅಪಾರವಾದದ್ದು ಅವರ ಆದರ್ಶ ದಡಿಯಲ್ಲಿ ಹಿಂದಿನ ಮಹಿಳಾ ಯುವ ಸಮುದಾಯ ನಡೆಯಬೇಕಿದೆ ಅವರ ತತ್ವ ಸಿದ್ಧಾಂತಗಳನ್ನ ವಿದ್ಯಾರ್ಥಿನಿಯರು ಜೀವನದಲ್ಲಿ ಅಳವಡಿಸಿಕೊಂಡಿದೆ ಆದಲ್ಲಿ ದೇಶದ ಬಹುದೊಡ್ಡ ಹುದ್ದೆಗಳನ್ನು ಅಲಂಕರಿಸಬಹುದು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಪುಷ್ಪಲತಾ ಮಾತನಾಡಿ ವಿದ್ಯಾರ್ಥಿಗಳ ದೆಸೆಯಲ್ಲಿ ಶ್ರದ್ಧೆ ಪೂರ್ವಕವಾಗಿ ಓದಿನ ಕಡೆಗೆ ಗಮನಹರಿಸಿದ್ದಲ್ಲಿ ಸರ್ಕಾರದ ಉನ್ನತ ಹುದ್ದೆಗಳನ್ನ ಅಲಂಕರಿಸಿಕೊಳ್ಳಬಹುದು ಹಾಗಾಗಿ ವಿದ್ಯಾರ್ಥಿನಿಯರು ಓದಿನ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ, ವಿದ್ಯಾರ್ಥಿನಿಯರ ವ್ಯಾಸಂಗಕ್ಕಾಗಿ ಸಾಕಷ್ಟು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸುವುದರ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾಗಜ್ ಫೌಂಡೇಶನ್ ವತಿಯಿಂದ 2025 ನೇ ಸಾಲಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದಂತ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು,
ಈ ಸಂದರ್ಭದಲ್ಲಿ ಕಾಗಜ್ ಫೌಂಡೇಶನ್ ಕಾರ್ಯಕರ್ತರಾದ ಜಿಗ್ನ ಮೋದ್, ಶೋಭಾ, ಸುದೀಪ್, ಸಲೀಂ, ನವೀನ್ ಹಾಗೂ ಇತರರು ಇದ್ದರು.











