ಕತ್ತಲಲ್ಲಿ ಕೈಚಳಕ… ಬೆಳಗಾಗುವಷ್ಟರಲ್ಲಿ ಪೊಲೀಸರ ಬಲೆಗೆ!

ಕಳ್ಳತನ ಪ್ರಕರಣ ಭೇದಿಸಿದ ಹಿರಿಯೂರು ಪೊಲೀಸರು : ಇಬ್ಬರು ಆರೋಪಿಗಳು ಅರೆಸ್ಟ್* ವರದಿ: ಪೊಲೀಸ್ ಬೇಟೆ ಪ್ರಸನ್ನ, ಹಿರಿಯೂರು, ಜು.4: ರಾತ್ರಿ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹಿರಿಯೂರು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 138 ಗ್ರಾಂ ತೂಕದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್ 24ರ ರಾತ್ರಿ 10.45ರಿಂದ ಜೂನ್ 25ರ ಬೆಳಗಿನ ಜಾವ 5.45ರ ನಡುವಿನ ಅವಧಿಯಲ್ಲಿ, […]
ಮಳೆಗಾಗಿ ತಿಮ್ಮಪ್ಪನ ದೇವರ ಮೊರೆ ಹೋದ ಕೆ.ಕೆ.ಹಟ್ಟಿ ಗ್ರಾಮಸ್ಥರು

ಚಿತ್ರದುರ್ಗ: ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಕೆ.ಕೆ.ಹಟ್ಟಿ ಗ್ರಾಮಸ್ಥರು ಉತ್ತರೆ ಬೆಟ್ಟದಲ್ಲಿರುವ ತಿಮ್ಮಪ್ಪನ ದೇವರ ದರ್ಶನಕ್ಕೆ ಪಾದಯಾತ್ರೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಬೆಳಗ್ಗೆ 9 ಗಂಟೆಗೆ ಕೆ.ಕೆ.ಹಟ್ಟಿಯಿಂದ ಆರಂಭವಾದ ಪಾದಯಾತ್ರೆಯಲ್ಲಿ ಗ್ರಾಮಸ್ಥರು ಮೊದಲು ಐತಿಹಾಸಿಕ ಮಾದಿಗನ ದೊಣ್ಣೆ ತಲುಪಿ, ಅಲ್ಲಿ ಗಂಗಾಸ್ಥಾನ ಪೂಜೆ ನೆರವೇರಿಸಿದರು. ಬಳಿಕ ದೇವರಿಗೆ ಇಷ್ಟವಾದ ನೈವೇದ್ಯವನ್ನು ತಯಾರಿಸಿ ಅರ್ಪಿಸಿದರು. ನಂತರ ಸುಮಾರು ನಾಲ್ಕು ಕಿಲೋಮೀಟರ್‌ಗಳಷ್ಟು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಬೆಟ್ಟದ ಮಾರ್ಗದಲ್ಲಿ ಯುವಕರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ […]
ತಿಮ್ಮಪ್ಪನ ಬೆಟ್ಟದ ‘ಮಾದಿಗನ ದೊಣೆ’ – ಮೌಖಿಕ ಚರಿತ್ರೆಯ ಜೀವಂತ ಸಾಕ್ಷಿ

ತಿಮ್ಮಪ್ಪನ ಬೆಟ್ಟ. ಸದ್ಯ “ಮಾದಿಗನ ದೊಣೆ” ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕರೆ ಕೆಂಚಯ್ಯನ ಹಟ್ಟಿಯ ರೈತ ಮಹಾಂತೇಶ್ ಅವರು ಹೇಳಿದ ಕಥೆ ಮನಸ್ಸಿನಲ್ಲಿ ಅಚ್ಚೊತ್ತಿದಂತಾಗಿದೆ. “ನಮ್ಮ ತಾತ, ಅವರ ತಾತ, ಅವರ ತಾತನ ಮುತ್ತಾತ ಹೇಳುತ್ತಿದ್ದರು. ನಮಗೂ ಅಷ್ಟೇ ಗೊತ್ತು,” ಎಂದು ಅವರು ಆರಂಭಿಸಿದ ಆ ಕಥೆ, ಕೇವಲ ಒಂದು ಘಟನೆ ಅಲ್ಲ; ಅದು ಗ್ರಾಮೀಣ ಬದುಕಿನ ಮೌಖಿಕ ಇತಿಹಾಸದ ಜೀವಂತ ದಾಖಲೆಯಾಗಿದೆ. ಅವರು ಹೇಳುವಂತೆ, ಶತಮಾನಗಳ ಹಿಂದೆ ಈ ಭಾಗದಲ್ಲಿ ಭೀಕರ […]
ಅಜ್ಜಂಪುರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪರಿಶೀಲನೆ: ಶೀಘ್ರ ಪೂರ್ಣಗೊಳಿಸಲು ಸಚಿವರ ಸೂಚನೆ

ಅಜ್ಜಂಪುರ, ಜುಲೈ 5: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗೆ ವೇಗ ನೀಡುವ ಉದ್ದೇಶದಿಂದ ಜಲಸಂಪನ್ಮೂಲ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಇಂದು ಅಜ್ಜಂಪುರದಲ್ಲಿ ಯೋಜನೆಯ ಮುಖ್ಯ ಕಾಲುವೆಯ ವೈ-ಜಂಕ್ಷನ್ ಹಾಗೂ ಚಿತ್ರದುರ್ಗ ಶಾಖಾ ಕಾಲುವೆ ಪ್ಯಾಕೇಜ್-4ರ ಬಾಟಲ್ ನೆಕ್ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಖ್ಯಮಂತ್ರಿಗಳ ಸೂಚನೆಯಂತೆ ನಡೆದ ಈ ಪರಿಶೀಲನಾ ಸಭೆಯಲ್ಲಿ ಕಾಮಗಾರಿಗಳ ಪ್ರಗತಿ, ಉಳಿದಿರುವ ಕಾರ್ಯಗಳು ಹಾಗೂ ಎದುರಾಗಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ […]
ಭದ್ರಾ ಮೇಲ್ದಂಡೆ ಯೋಜನೆ : 2028 ವೇಳೆಗೆ ಸಿವಿಲ್ ಕಾಮಗಾರಿ ಪೂರ್ಣ

ಆಗಸ್ಟ್ ಅಂತ್ಯಕ್ಕೆ ಚಿತ್ರದುರ್ಗ ಶಾಖಾ ಕಾಲುವೆ ಪ್ರಾಯೋಗಿಕ ಚಾಲನೆ ‘ಭದ್ರಾ ಮೇಲ್ದಂಡೆ ಯೋಜನೆ’ ಕಾಮಗಾರಿಗಳಿಗೆ ವೇಗ ನೀಡಲಾಗಿದ್ದು, 2028ರ ಒಳಾಗಾಗಿ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಯೋಜನೆಯ ಪ್ರಮುಖ ಅಂಗವಾದ ಚಿತ್ರದುರ್ಗ ಶಾಖಾ ಕಾಲುವೆಗೆ, ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಆಧರಿಸಿ ಮುಂಬರುವ ಆಗಸ್ಟ್-2026 ವೇಳಗೆ ಪ್ರಾಯೋಗಿಕವಾಗಿ ನೀರನ್ನು ಹರಿಸಿ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಭಾನುವಾರ ಚಿತ್ರದುರ್ಗ ಶಾಖಾ ಕಾಲುವೆ ಗೋನೂರು ಅಕ್ವಾ ಡಕ್ಟ್ ಕಾಮಗಾರಿ ವೀಕ್ಷಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು […]