ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಅನ್ನ ಉಣಿಸಿದ ಅನ್ನದಾತ: ಡಾ|| ಬಾಬು ಜಗಜೀವನರಾಮ್

ಡಾ! ಬಾಬು ಜಗಜೀವನರಾಮ್ ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಅನ್ನ ಉಣಿಸಿದ ಅನ್ನದಾತ!
ಬಹುಶಃ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರ ಸಾಲಿನಲ್ಲಿ ನಿಲ್ಲುವಂತ ಮೇರು ವ್ಯಕ್ತಿತ್ವ
ಡಾ! ಬಾಬು ಜಗಜೀವನರಾಮ್
ಏಪ್ರಿಲ್ 5 ರ 1908 ರಂದು ಜನನ ಮೂಲತಃ ದಲಿತ ಕುಟುಂಬದಿಂದ ಹಿನ್ನೆಲೆಯಲ್ಲಿ ಬೆಳೆದು ನಿಂತ ಪರಿ ಬೆರಗು ಹುಟ್ಟಿಸುತ್ತದೆ.
ಹಸಿರು ಕ್ರಾಂತಿ ಹರಿಕಾರ ಸ್ವಾತಂತ್ರ್ಯ ಸೇನಾನಿ ಕಾರ್ಮಿಕ ವರ್ಗದ ನೇತಾರ ಬಾಂಗ್ಲಾದೇಶ ಉಗಮಕ್ಕೆ ಕಾರಣಿಕರ್ತ
ಈ ದೇಶದ ಮಾಜಿ ಉಪಪ್ರಧಾನಿ ರಾಜಕೀಯ ಮತ್ಸದಿ ಸ್ವಾಭಿಮಾನಿ

ಡಾ.ಬಾಬು ಜಗಜೀವನರಾಮ್ ದೇಶಕ್ಕೆ ನೀಡಿದ ಕೊಡುಗೆಗಳು.

ಸಂವಿಧಾನದ ಸಭೆಯಲ್ಲಿ
5 ಸಮಿತಿ- ಉಪಸಮಿತಿಯ ಸದಸ್ಯರಾಗಿ
ಕಾರ್ಯನಿರ್ವಾಸಿದ್ದಾರೆ
ಭಾರತದ ಸಂವಿಧಾನ ರಚನೆಯಲ್ಲಿ ಡಾ!ಬಾಬು ಜಗಜೀವನರಾಮ್ ಪಾತ್ರ ಹಾಗೂ ಸಂವಿಧಾನ ರಚನಾ ಐದು ಸಮಿತಿಯ ಸದಸ್ಯರಾಗಿದ್ದರು.

ಬಾಬೂಜಿ ಕೂಡ ಸಂವಿಧಾನ ರಚನಾ ಭಾಗವಾಗಿದ್ದಾರೆ ಹಾಗದರೆ ಅದು ಹೇಗೆ ಈ ಕೆಳಗೆ ಈ ವ್ಯಕ್ತಿ ಹೇಳಿದರು…

1) ವಿಧಾನ ನಿಯಮಗಳ ಸಮಿತಿ

2)ಮೂಲಭೂತ ಹಕ್ಕುಗಳ,ಅಲ್ಪಸಂಖ್ಯಾತರು,ಮತ್ತು ಬುಡಕಟ್ಟು ಹಾಗೂ ಸೇರಿಸಲಾಗದ ಪ್ರದೇಶಗಳ ಸಲಹಾ ಸಲಹಾ ಸಮಿತಿ

3)ಸಲಹಾ ಸಮಿತಿಯ ಉಪಸಮಿತಿಗಳು ಅಲ್ಪಸಂಖ್ಯಾತರ ಉಪಸಮಿತಿ

4)ಸೆರಿಸಲ್ಪಡದ ಮತ್ತು ಭಾಗಶ: ಸೇರ್ಪಡೆಯಾದ ಪ್ರದೇಶಗಳು (ಅಸ್ಸಾಂ ನಲ್ಲಿ ಇರುವುದನ್ನು ಹೊರತುಪಡಿಸಿ) ಉಪಸಮಿತಿ

5) ಕೇಂದ್ರ ಸಂವಿಧಾನ ಸಮಿತಿ

    ಕಾರ್ಮಿಕ ಖಾತೆಯ ಸಚಿವರಾದರು TRADE UNION ACT,MINIMUM WAGES ACT,PF ACT ರಾಜ್ಯ ಕಾರ್ಮಿಕ ವಿಮಾ ಕಾಯಿದೆ,ತೋಟದ ಕಾರ್ಮಿಕ ಸಂರಕ್ಷಣಾ ಕಾಯಿದೆ, ಬಂದರು ಕಾರ್ಮಿಕ ಕಾಯಿದೆ,ದುಡಿಯುವ ವರ್ಗದ ವಿಶ್ವಕರ್ಮಿ ಆಗಿದ್ದರು ಬಾಬೂಜಿ.

1952 ಸಂಪರ್ಕ ಸಾರಿಗೆ ಸಚಿವರಾದರು ವಾಯು ಸಾರಿಗೆ ರಾಷ್ಟ್ರೀಕರಣ ಮಾಡಿದರು,ಅಂಚೆ ತಂತಿ ಇಲಾಖೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬೆಂಗಳೂರು ITI development ಮಾಡಿದ ಮಹಾನ್ ಚತುರ ರಾಜಕಾರಣಿ, 1956 ರೈಲ್ವೆ ಖಾತೆ ಸಚಿವರಾಗಿದ್ದರು ಇದರಲ್ಲಿ ದುಡಿಯುವ ಬಡ ಕಾರ್ಮಿಕ ವರ್ಗಕ್ಕೆ ಕಾರ್ಮಿಕ ಪಿಂಚಣಿ ಪದ್ದತಿ ಅಳವಡಿಸಿದರು.
ದಲಿತರಿಗೆ ವೃಂದ ಬಡ್ತಿ ಮಿಸಲಾತಿ ಜಾರಿಗೊಳಿಸುವ ಮೂಲಕ ಮಿಸಲಾತಿ ಜಾರಿ ಮಾಡುವಲ್ಲಿ ಯಶಸ್ವಿಯಾದರು.
1967 ರಲ್ಲಿ ಕೃಷಿ ಸಚಿವರಾದರು ಹಸಿದಿದ್ದ ದೇಶದ ಒಡಲಿಗೆ ಹಸಿರನ್ನೆ ತಿನ್ನಿಸಿದರು
ದೇಶದ ತುಂಬಾ ಸಣ್ಣ ಅತಿ ಸಣ್ಣ ರೈತರು ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಈ ದೇಶದ ಆಹಾರ ಉತ್ಪಾದನೆ ಹೆಚ್ಚಿಸಲು ಸಹಾಯ ಸಹಕಾರ ಕೃಷಿ ಬೆಳೆಗಳಿಗೆ ಬೆಂಬಲ ನೀಡುವ ಮೂಲಕ ಹಸಿರು ಕ್ರಾಂತಿ ಹರಿಕಾರನಾದ
ಕ್ಷಿರೋತ್ಪನ್ನದಲ್ಲಿ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲು ಪಶುಸಂಗೋಪನೆ ಆರ್ಥಿಕ ಕಸಬನ್ನಾಗಿಸಲು ಕಾರ್ಯಪ್ರವೃತ್ತರಾದರೂ ಗುಜರಾತ್ ರಾಜಸ್ಥಾನ ಈಗಿನ ಕರ್ನಾಟಕದ KMF ಡೈರಿಯು ಅವರ ಪರಿಶ್ರಮದಿಂದ ಆದಂತವು ಶ್ವೇತ ಕ್ರಾಂತಿಗೆ ಸೋಪಾನವಿಟ್ಟ ಮಹಾನ್ ಚೇತನ.
ಬರಪ್ರದೇಶಗಳಲ್ಲಿ ಎಣ್ಣಿ ಬೀಜ ದ್ವಿದಳ ಧಾನ್ಯಗಳು ಬೆಳೆಯಲು ಪ್ರೊತ್ಸಾಹ ನೀಡಿದರು ಹಳದಿ ಕ್ರಾಂತಿ ಸಹ ಕಾಣಲು ಪ್ರೇರಪಕರು.
ನೀರಾವರಿ ಯೋಜನೆಯನ್ನು ಜಾರಿ ಮಾಡಿಸಿ ಈಗಿನ ಕರ್ನಾಟಕ ತಮಿಳುನಾಡಿನ ಕಾವೇರಿ ನದಿ ವಿವಾದ ಬಗೆಹರಿಸಲು ಪ್ರಯತ್ನ ಮಾಡಿದರು ಆದರೆ ತಮಿಳುನಾಡು ಮೊಂಡು ವಾದದಿಂದ ಹಾಗೆ ಉಳಿದಿದೆ.
ಪ್ರಮುಖವಾಗಿ ಭೂ ಸುಧಾರಣೆ ಕಾಯಿದೆ ಜಾರಿಗೊಳಿಸಿ ಭೂಮಿ ಅನುಭೋಗ ಹೊಂದಿರುವ ವ್ಯಕ್ತಿಗಳು ಅದರ ಹಕ್ಕನ್ನು ಸ್ಥಾಪಿಸಿಕೊಳ್ಳಲು ಅವಕಾಶ ನೀಡಿದರು
ಕೃಷಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಬೇರ್ಪಡಿಸಿ ಅವುಗಳ ಸ್ವಾತಂತ್ರ ಖಾತೆಯ ಮೂಲಕ ಅನುವು ಮಾಡಿಕೊಡುವ ಮೂಲಕ ತಮ್ಮದೇ ಸ್ವಂತ ದೂರದೃಷ್ಟಿ ಹೊಂದಿದ್ದ ಚೇತನ.

   1970 ಭಾರತದ ದೇಶದ ರಕ್ಷಣಾ ಇಲಾಖೆ ವಹಿಸಿಕೊಂಡರು ಆ ಸಂದರ್ಭದಲ್ಲಿ ಪಚ್ಚಿಮ  ಪಾಕಿಸ್ತಾನ ಬಂಗಾಳಿ ಸ್ವಾಯತ್ತ ಆಗ್ರಹಿಸಿದ ರಾಮರು ಬಾಂಗ್ಲಾದೇಶದ ನಿರಾಶ್ರಿತರ ಆಶ್ರಯ ನೀಡಿ ಪಾಕಿಸ್ತಾನದ ವಿರುದ್ಧ 1972 ರಲ್ಲಿ ಯುದ್ಧ ಮಾಡದೇ ಪಾಕಿಸ್ತಾನ ಭಾರತಕ್ಕೆ ಶರಣಾಗತಿಯ ಆಯಿತು ಆಗ ಹೊಸ ರಾಷ್ಟ್ರವಾದ ಬಾಂಗ್ಲಾದೇಶ ಉದಯಕ್ಕೆ ಕಾರಣವಾದ ಮಹಾನ್ ದಕ್ಷ ಆಡಳಿತಗಾರ ಈ ಬಾಬೂಜಿ ಅವರು

ಅಂಬೇಡ್ಕರ್ ಗಾಂಧಿ ನಡುವೆ ಉದ್ಭವವಾದ ಪೂನ್ ಪ್ಯಾಕ್ಟ ಗೆ ಸೇತುವೆ ಆಗಿ ಕಾರ್ಯ ಮಾಡಿದರು.
ದಲಿತರಿಗೆ ಬಾಬೂಜಿ ಕೊಡುಗೆಗಳು:-
ಕಾರ್ಮಿಕ ವರ್ಗದ ಜನರಲ್ಲಿ ದಲಿತರು ಹೆಚ್ಚು ಇರುತ್ತಾರೆ ಅವರಿಗೆ PF ESI ,ಕನಿಷ್ಠ ಕೂಲಿ ಕಾಯಿದೆ,ಕಾರ್ಮಿಕರಿಗೆ ಪಿಂಚಣಿ.
ಮೊಟ್ಟಮೊದಲ ಬಾರಿಗೆ ರೈಲ್ವೆ ಇಲಾಖೆಯ ಅಮೂಲ ಬದಲಾವಣೆ ಮಾಡಲಾಯಿತು ಅಲ್ಲಿ ದುಡಿಯುವ ವರ್ಗದ ಸಮಾನತೆಯ ಅರ್ಥ ಕಲ್ಲಿಸಿದವರ ಜೊತೆಗೆ ರೈಲು ಇಲಾಖೆಯ ಬಡ್ತಿ ಮಿಸಲಾತಿ ನೀಡುವ ಮೂಲಕ ಎಲ್ಲಾ ಇಲಾಖೆಗಳಲ್ಲಿ ಬಡ್ತಿ ಮಿಸಲಾತಿ ಜಾರಿ ಮಾಡಲಾಯಿತು ಮತ್ತೆ ಭೂ ಸುಧಾರಣೆ ತರಲು ಮೂಲಕ ಭೂಮಿ ಅನುಭೋಗ ಹೊಂದಿದ್ದವರೆ ಅದರ ಒಡೆಯ ಎಂದು ಹೇಳಿದರು
“ಗರಿಬಿ ಹಠವೊ” ವ್ಯಾಖ್ಯಾನ ನೀಡಿ ಅದನ್ನು ಬಡವರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನ ಮಾಡಿದರು
ಮಿಸಲಾತಿ ಬರಿ ಪ.ಜಾತಿ.ಪ.ಪಂಗಡದವರಿಗೆ ಮಾತ್ರ ಅಲ್ಲದೆ ಹಿಂದುಳಿದ ವರ್ಗಗಳಿಗೂ ವಿಸ್ತರಸುವಂತೆ ಮಾಡಿದರು.
ಕರ್ನಾಟಕದಲ್ಲಿ ಪ.ಜಾತಿ.ಪ.ಪಂಗಡದ ಅಭಿವೃದ್ಧಿ ನಿಗಮ ಸ್ಥಾಪಿಸಿದ ದಲಿತರೊದ್ದರಕ.
ದುಡಿಯುವ ವರ್ಗದ ಕಾಯಕಕ್ಕೆ ಮಹತ್ವ ನೀಡಿದ ಶೋಷಿತರ ಬದುಕಿನ ಆಶಾಕಿರಣ…

ಡಾ.ಬಾಬೂ ಜಗಜೀವನರಾಮ್ ರಾಜಕೀಯ ಜೀವನ ಚರಿತ್ರೆಯಲ್ಲಿ ದಾಖಲು ಮಾಡುವಂತದ್ದು.
ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನರಾಂ ಮುಟ್ಟದ ಖಾತೆಗಳೆ ಇಲ್ಲ
ಈ ದೇಶದ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚು ಖಾತೆಗಳನ್ನು ದಕ್ಷ ಪ್ರಾಮಾಣಿಕತೆ ಉತ್ತಮ ಗುಣಮಟ್ಟದ ಆಡಳಿತ ನೀಡಿದ ಕಿರ್ತಿಗೆ ಏಕೈಕ ವ್ಯಕ್ತಿತ್ವ ಬಾಬೂಜಿ ಅವರದು
ಮೋದಲಿಗೆ ಕಾರ್ಮಿಕ ಖಾತೆ
ಶೋಷಿತರ ಬದುಕಿನ ಆಶಾಕಿರಣರಾದರೂ
ಸಂಪರ್ಕ ಖಾತೆ ಅದನ್ನು ರಾಷ್ಟ್ರೀಕರಣ ಮಾಡಿ ಜನಸಾಮಾನ್ಯರಿಗೂ ಎಲ್ಲರಿಗೂ ಸಮಾನತೆಯ ಕಲ್ಪನೆಯನ್ನು ಕಟ್ಟಿಕೊಟ್ಟರು
ಕೃಷಿ ಸಚಿವರಾದರು ಈ ಖಾತೆಯ ಇತಿಹಾಸದಲ್ಲಿ ಅತ್ಯಂತ ದಾಖಲೆ ನಿರ್ಮಿಸಿದರು ಭೂ ಸುಧಾರಣೆ ತರಲು ಯತ್ನಿಸಿದ ವ್ಯಕ್ತಿ ಹಸಿದ ದೇಶಕ್ಕೆ ಹಸಿರು ಊಣಿಸಿದ ಮಹಾತ್ಮ ಈ ಜಗಜೀವನರಾಂ ಕ್ಷೀರ ಕ್ರಾಂತಿ ಹಳದಿ ಕ್ರಾಂತಿ ಮುನ್ನುಡಿ ಬರೆದಿದ್ದಾರೆ.
ರಕ್ಷಣೆ ಖಾತೆ ಇದು ಐತಿಹಾಸಿಕ ದಾಖಲೆ ಇತಿಹಾಸದ ಪುಟಗಳಲ್ಲಿ ಯಾವುದಾದರೂ ಒಂದು ದೇಶ ಉದಯಕ್ಕೆ ಕಾರಣವಾಯಿತು ಅದು ಬಾಂಗ್ಲಾದೇಶ ವಿಮೋಚನಾ ಸಂದರ್ಭದಲ್ಲಿ ರಕ್ಷಣಾ ಇಲಾಖೆ ಜವಾಬ್ದಾರಿ ಸ್ಥಾನ ಹೊಂದಿರುವ ಬಾಬೂಜಿ ಹೊಸ ರಾಷ್ಟ್ರದ ಉದಯಕ್ಕೆ ಕಾರಣಿಭೂತರಾದರು.
ಈ ಜನತಾ ರಂಗದ ಸರ್ಕಾರದಲ್ಲಿ ಜಾತಿಯ ಕಾರಣದಿಂದಾಗಿಯೇ ಜಗಜೀವನರಾಂ ಅವರಿಗೆ ದೊರೆಯಬೇಕಾದ ಪ್ರಧಾನಿ ಹುದ್ದೆ ತಪ್ಪಿತು ಇದು ಇತಿಹಾಸದಲ್ಲಿ ದಲಿತರಿಗೆ ಮಾಡಿದ ಮಹಾನ್ ದ್ರೋಹವೇ ಸರಿ ಆದರೂ ಈ ದೇಶದಲ್ಲಿ ಒಬ್ಬ ದಲಿತ ವ್ಯಕ್ತಿ ಉಪಪ್ರಧಾನಿಯಾಗಿದ್ದು ಇತಿಹಾಸವೇ ಸರಿ.
ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುವದರ ಹಿಂದೆ ಬಾಬೂಜಿ ಕೊಡುಗೆ ಅಪಾರ ಇದೆ ತುರ್ತುಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಸೆಟೆದು ನಿಂತು ವಿರೋಧ ಮಾಡಿದ ಮಹಾನ್ ಚೇತನ
ವಿ.ವಿ.ಗಿರಿ ರಾಷ್ಟ್ರಪತಿ ಆಗಲು ಪ್ರಮುಖ ನಾಯಕತ್ವವನ್ನು ಜಗಜೀವನರಾಂ ವಹಿಸಿಕೊಂಡು ಯಶಸ್ವಿಯಾದರು.
ಯಾವುದೇ ಆಶೆ ಆಮಿಷ ಬಲಿಯಾಗದೆ ಸ್ವಾಭಿಮಾನ ಮೂಲಕ ಈ ದೇಶದ ಐಕ್ಯತೆಯನ್ನು ಸಾಮರಸ್ಯ ಸ್ವಾತಂತ್ರ್ಯ ಹೊಂದಲು ತಮ್ಮನ್ನು ತೊಡಗಿಸಿಕೊಂಡರು ಬಾಬೂಜಿ……
ಮದನ ಮೋಹನ ಮಾಳವೀಯ ಅಪ್ಪಟ ಶಿಷ್ಯ ಜೊತೆಗೆ ಮಹಾತ್ಮ ಗಾಂಧಿ ಅವರ ಅಭಿಮಾನಿ ಈ ದೇಶದಲ್ಲಿ ಶಾಂತಿಯ ಮೂಲಕ ಕ್ರಾಂತಿ ಮಾಡಿದ ವ್ಯಕ್ತಿ ಸಂಘರ್ಷದ ಕಿಡಿಯನ್ನು ಒಳಗೆ ಇಟ್ಟುಕೊಂಡು ಈ ದೇಶದ ತಮ್ಮ ವರ್ಗದ ಜನರು ಬದುಕನ್ನು ಕಂಡುಕೊಳ್ಳಲು ಪ್ರಯತ್ನ ಮಾಡಿದರು ಬಾಬೂಜಿ ರಾಜಕೀಯ ಆಡಳಿತದ ಅವಧಿಯನ್ನು ದೊಡ್ಡ ಇತಿಹಾಸ ಇದೆ.

ಇಂದು ಜಾತಿವಾದವು ರಾಜಕೀಯ ಬದುಕಿನಲ್ಲಿ ಎಷ್ಟು ವ್ಯಾಪಕವಾಗಿ ಪಸರಿಸಿದೆ ಎಂದರೆ ನಮ್ಮ ಪ್ರಜಾಪ್ರಭುತ್ವ ಇಡಿ ರಚನೆಯನ್ನು ದ್ವಂಶಗೊಳಿಸುವ ಭೀತಿ ಹುಟ್ಟಿಸುತ್ತದೆ
ಡಾ.ಬಾಬೂ ಜಗಜೀವನರಾಂ

“ಜಾತಿಯ ಎಂಬುದು ಒಳಗೆ ಕೊರುದು ತಿನ್ನುವ ಕ್ಯಾನ್ಸರ್ ಬಗ್ಗೆ ಯಾರು ಅಷ್ಟಾಗಿ ಲಕ್ಷ್ಯ ಹರಿಸಿದಂತಿಲ್ಲ ಅಲ್ಲಲ್ಲಿ ಬಿಗುವಿನ ವಾತಾವರಣ ನಿರ್ಮಿಸಿದೆ”
ಡಾ.ಬಾಬು ಜಗಜೀವನರಾಂ

“ಅಗ್ನಿಯಲ್ಲಿ ಪುಡವಿಟ್ಟ ಅಪ್ಪಟ ಚಿನ್ನದಂತೆ ಹೊರ ಹೊಮ್ಮಿದ ಜಗಜೀವನರಾಮ್ ಬಗೆಗೆ ಗಾಂಧಿಜಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.

‘ಬಾಬೂಜಿ ಎಂದೆ ಪ್ರಸಿದ್ದರಾಗಿದ್ದ ಬಾಬು ಜಗಜೀವನರಾಮರ ರಾಜಕೀಯ ಜೀವನ ರಾಮರು ತಮ್ಮನ್ನು ತಾವು ಸಕ್ರಿಯವಾಗಿ ರಾಜ ತಂತ್ರಜ್ಞರಾಗಿ ಹೊರ ಹೊಮ್ಮಿದ್ದರು. 1937 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಉಮೇದುವಾರರಾಗಿ ರಾಮರು ಬಿಹಾರ್ ವಿಧಾನ ಸಭೆಗೆ ಆರಿಸಿ ಬಂದರು. ಅವರು ಬಿಹಾರ್ ರಾಜ್ಯದ ಪಾರ್ಲಿಮೆಂಟರಿ ಕಾರ್ಯದರ್ಶಿಯಾಗಿಯೂ ನೇಮಕವಾದರು. 1930 ರಲ್ಲಿ ಸ್ವಾತಂತ್ರ್ಯ ಚಳಿವಳಿಯ ಅಂಗವಾದ ವೈಯುಕ್ತಿಕ ಸತ್ಯಾಗ್ರಹದಲ್ಲಿ ಪಾಲುಗೊಳ್ಳಲು ಬಿಹಾರ್ ರಾಜ್ಯದ ಪಾರ್ಲಿಮೆಂಟರಿ ಸೆಕ್ರೆಟರಿಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಕಾರ್ಮಿಕ ಸಂಘಗಳಲ್ಲಿ ಮತ್ತು ರಾಷ್ಟ್ರೀಯ ಹರಿಜನರ ಕಾರ್ಯಕ್ರಮಗಳನ್ನು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದರು.

" ಭಾರತ ಬಿಟ್ಟು ತೊಲಗಿ " ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಜೈಲುವಾಸವನ್ನು ರಾಮರು ಅನುಭವಿಸಿದರು. ರಾಮರು ಕಡುಬಡತನವನ್ನು ಮತ್ತು ಇತರೆ ಅಸ್ಪೃಶ್ಯತೆಯ ಕಳಂಕದಿಂದುದ್ಭವಿಸುವ ಕಷ್ಟ ಪರಂಪರೆಗಳನ್ನು ಅನುಭವಿಸಿಕೊಂಡ ಹರಿಜನರಿಗಾಗಿ ಏನಾದರೂ ಸಾಧಿಸಬೇಕಾಗಿತ್ತು. ಈ ಜನರ ಯಾವ ಅಭಿವೃದ್ಧಿ ಕೆಲಸವೂ ಕಷ್ಟ ಸಾಧ್ಯವಾದದ್ದೇ, ಅಂದಿನ ಸರ್ಕಾರವಾಗಲೀ ಅಥವಾ ಸಾರ್ವಜನಿಕರಾಗಲೀ ಈ ಕೆಲಸದಲ್ಲಿ ಆಸಕ್ತಿವಹಿಸುತ್ತಿರಲಿಲ್ಲ. ಗಾಂಧೀಜಿಯವರೆ , ಸ್ಥಾಪಿಸಿದ ಹರಿಜನ ಸೇವಕ ಸಂಘಕ್ಕೂ ಅಂದು ಪಾಟ್ನಾ ನಗರದಲ್ಲಿ ಒಂದು ಬಾಡಿಗೆ ಮನೆ ಸುಲಭವಾಗಿ ಲಭ್ಯವಾಗಲಿಲ್ಲ. 

      ಆದರೆ ರಾಮರ್ ನಿಸ್ವಾರ್ಥ ಸೇವೆ , ದೃಢ, ನಿರ್ಧಾರ, ಸ್ವಾತಂತ್ರ್ಯ ಚಳುವಳಿಯಿಂದ ಬಂದಂಹ ಸ್ಫೂರ್ತಿ ಮತ್ತು ಸಮರ್ಪಣಾ ಮನೋಭಾವಗಳ ಸಮ್ಮೀಳನದಿಂದಾಗಿ ಅವರು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಜಯಶೀಲರಾದರು ಮತ್ತು ದೊಡ್ಡಸ್ತಿಕೆಯು ಅವರನ್ನು ತಾನಾಗಿ ಅರಸುತ್ತಾ ಬಂದು. ಬಾಬೂಜಿಯವರು ಪ್ರಾಮಾಣಿಕತೆ ಮತ್ತು ರಾಷ್ಟ್ರ ಪ್ರೇಮಗಳ ಪ್ರತೀಕವಾಗಿದ್ದು ದೇಶಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ದರಾದರು. 

   " ನಿಸ್ವಾರ್ಥ ದೇಶ ಸೇವೆಗೆ ಯಾರು ತಮ್ಮನ್ನು  ಸಮರ್ಪಿಸಿಕೊಳ್ಳುತ್ತಾರೊ ಅಂತಹವರನ್ನು ಯಶಸ್ಸು ಮತ್ತು ಕೀರ್ತಿ ಹುಡುಕಿಕೊಂಡು ಬರುತ್ತದೆ. ಆದರೆ ದೇಶ ಸೇವೆಯ ಹೆಸರಿನಲ್ಲಿ ಯಾರು ಸಂಪತ್ತು ಮತ್ತು ಪ್ರಾಚಾರದ ಬೆನ್ನು ಹತ್ತಾತ್ತಾರೊ ಅವರು ರಾಜಕೀಯ ಪತನವನ್ನು ತಕ್ಷಣವೇ ಅಪ್ಪುತ್ತಾರೆ." ಎಂಬ ಇತಿಹಾಸದ ಪಾಠವನ್ನು ಬಾಬೂಜಿ ಚೆನ್ನಾಗಿ ಬಲ್ಲವರಾಗಿದ್ದರು. ಒಬ್ಬನು ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾರದ ಕೀರ್ತಿಯನ್ನು ಸೇವೆ ಮತ್ತು ತ್ಯಾಗದಿಂದ ತನ್ನ ದಾಗಿಸಿಕೊಳ್ಳಬಹುದೆಂಬುದನ್ನು ಬಾಬೂಜಿಯವರ ಬದುಕು ಸಾದರ ಪಡಿಸುತ್ತದೆ. 

ಹರಿಜನ ಸೇವಕ ಸಂಘದ ಕಾರ್ಯದರ್ಶಿಯಾಗಿ ಬಾಬೂಜಿಯವರು ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟು ಹರಿಜನರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಪರಿಹಾರವನ್ನು ‌ ಸೂಚಿಸಿದರು. ಕಾಲ ಕ್ರಮೇಣ ಅವರು ತಮ್ಮ ಹರಿಜನ ಸೇವಕ ಸಂಘದ ಕಾರ್ಯ ಚಟುವಟಿಕೆಗಳನ್ನು ಬಿಹಾರನಿಂದ ಭಾರತದಾದ್ಯಂತ ವಿಸ್ತರಿಸಿಕೊಂಡರು. ಅಖಿಲ ಭಾರತ ಡಿಪ್ರೆಸ್ಡ್ ಕ್ಲಾಸ ಲೀಗಿನ ಚುನಾಯಿತ ಅಧ್ಯಕ್ಷರಾಗಿ ರಾಮರು ಆಯ್ಕೆಯಾದರು ಮತ್ತು ಆ ಮುಖೇನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರಗತಿಗಾಗಿ ಶ್ರಮಿಸಿದರು.

        ಕಾಂಗ್ರೆಸ್ ಸಂಸ್ಥೆಯಲ್ಲೂ ಅವರು ಕಾರ್ಯಕಾರಿ ಸಮಿತಿ ಸದಸ್ಯತ್ವ ಮುಂತಾದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. 1969-71 ವೇಳೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು . ಅಧ್ಯಕ್ಷ ಸ್ಥಾನದಿಂದ " ಗರೀಬಿ ಹಠಾವ್" ಘೋಷಣೆಯನ್ನು ಕೊಟ್ಟವರು ಅವರೇ ಬಾಬೂಜಿ  1946 ರಲ್ಲಿ ಮಧ್ಯಂತರ ಸರ್ಕಾರ ರಚನೆಯಾದಾಗ ಕಾರ್ಮಿಕ ಮಂತ್ರಿಯಾಗಿದ್ದರು.

   ಸತತ ಮೂರು ದಶಕಗಳವರೆಗೆ ಮಂತ್ರಿ ಮಂಡಲದ ಸದಸ್ಯರಾಗಿದ್ದುಕೊಂಡು ಅಪಾರ ಆಡಳಿತಾನುಭವ ಮತ್ತು ಯಶಸ್ಸು ಗಳಿಸಿದ ಕೀರ್ತಿ ಇವರದು. ಸಾರಿಗೆ, ಸಮಾಚಾರ, ಆಹಾರ, ರೈಲ್ವೆ, ಕೃಷಿ , ಮತ್ತು ಸಮುದಾಯ , ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ನಸತಿ ಮತ್ತು ರಕ್ಷಣಾ ಖಾತೆಗಳಲ್ಲಿ ಕೆಲಸವನ್ನು ಮಾಡಿದ ಹಿರಿಮೆಯುಳ್ಳವರು ಇವರ ಅವಧಿಯಲ್ಲಿ ಆಯಾಯಾ ಖಾತೆಗಳ ಕೆಲಸಗಳು ತ್ವರಿತ ಗತಿಯಲ್ಲಿ ನಡೆದು ರಾಷ್ಟ್ರ ಹೆಚ್ಚಿನ ಪ್ರಗತಿ ಹೊಂದಲು ಸಹಾಯವಾಯಿತು. ರಾಮರು 1977 ಮಾರ್ಚ ತಿಂಗಳಲ್ಲಿ ಕಾಂಗ್ರೆಸ್ಸನ್ನು ತ್ಯಜಿಸಿ ತಮ್ಮದೇ ಆದ ಪಕ್ಷವೊಂದನ್ನು ರಚಿಸಿಕೊಂಡರು. " ಪ್ರಜಾಪ್ರಭುತ್ವಕ್ಕಾಗಿ ಕಾಂಗ್ರೆಸ್ " ಎಂಬುದು ಆ ಪಕ್ಷದ ಹೆಸರು . ಆ ಪಕ್ಷ ಕ್ರಮೇಣ ಜನತಾ ಪಕ್ಷದೊಡನೆ ವಿಲೀನವಾಯಿತು ಮತ್ತೆ ಪ್ರತ್ಯಕ್ಷಗೊಂಡು ಕಾಂಗ್ರೆಸ್ (ಜೆ) ಎಂಬ ಹೆಸರಿನಿಂದ ಪುನಃ ಸ್ಥಾಪಿತವಾಯಿತು .  
 ಬಾಬೂಜಿಯವರು  1986ಜುಲೈ 6ನೇ ತಾರೀಖು ದೈವಾಧೀನರಾದರು. ಆ ದಿನದವರೆಗೂ ಅವರು ಲೋಕಸಭೆಯ ಸದಸ್ಯರಾಗಿದ್ದರು. ಮಹಾನ್ ಸ್ವಾತಂತ್ರ್ಯ ಹೋರಾಟಗಾರರೂ , ದಕ್ಷ ಆಡಳಿತಗಾರರೂ , ಮೇಧಾವಿ ರಾಜಕಾರಣಿಯೂ, ಹರಿಜನರ ನೆಚ್ಚಿನ್ಸ್ ಮುಖಂಡರೂ ಆಗಿದ್ದ ಇವರು ಎಲ್ಲರಿಂದ ಗೌರವಿಸಲ್ಪಡುತ್ತಿದ್ದರು.

-ಹನುಮೇಶ್ ಗುಂಡೂರು ವಕೀಲರು

ಹಸಿದ ಭಾರತಕ್ಕೆ ಹಸಿರು ಕ್ರಾಂತಿ ಮೂಲಕ ಅನ್ನ ಉಣಿಸಿದ ಅನ್ನದಾತ: ಡಾ|| ಬಾಬು ಜಗಜೀವನರಾಮ್