🏆 ಕರ್ನಾಟಕ ಪ್ಯಾರಾ ಥ್ರೋಬಾಲ್ ತಂಡ-ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ-ಬೆಳ್ಳಿ ಜಯ, ತುಮಕೂರಿನಲ್ಲಿ ಸನ್ಮಾನ

ಪತ್ರಿಕಾ ಪ್ರಕಟಣೆ ಗೆ

ಡಿಸೆಂಬರ್ 6 ರಿಂದ 10, 2025 ರಂದು ಶ್ರೀಲಂಕಾ ರತ್ನಾಪುರದಲ್ಲಿ ನಡೆದ ಮೊದಲ ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ಯಾರಾ ಥ್ರೋಬಾಲ್ ಆಟಗಾರರು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಮಹಿಳಾ ತಂಡವು ಚಿನ್ನದ 🥇 ಪದಕವನ್ನು ಗೆದ್ದಿತು. 1. ಮಂಜಮ್ಮ. 2. ಲಕ್ಷ್ಮಿ. 3. ಮಾಲತಿ ಇನಾಮಂತ್. ಪುರುಷರ ತಂಡವು ಬೆಳ್ಳಿ 🥈 ಪದಕವನ್ನು ಗೆದ್ದಿತು 1. ಪ್ರಕಾಶ್. 21.12.2025 ರಂದು ತುಮಕೂರು ಜಿಲ್ಲೆಯಲ್ಲಿ ಕನ್ನಡ ಸೇನೆಯಿಂದ ನಡೆದ ರಾಜೋತ್ಸವ ಹಾಗೂ ಬೆಳ್ಳಿ ಹಬ್ಬ ಸಮಾರಂಭದಲ್ಲಿ ನಮ್ಮ ದೇಶಕ್ಕೆ ಪದಕಗಳನ್ನು ಗೆದ್ದ ನಮ್ಮ ಕರ್ನಾಟಕದ ಆಟಗಾರರಿಗೆ ಸರ್ವಸ್ ಶ್ರೇಷ್ಠ ಸಾಧಕ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು ಮತ್ತು ಕರ್ನಾಟಕ ಪ್ಯಾರಾ ಥ್ರೋಬಾಲ್ ಅಸೋಸಿಯೇಷನ್‌ನ ಅಧಿಕೃತ ಆಟಗಾರರನ್ನು ಕೈಜೋಡಿಸಿ ಪ್ರೋತ್ಸಾಹಿಸಿದರು. ಶ್ರೀ ಡಿ. ಪಾರ್ಥಿಬನ್ ತರಬೇತುದಾರ. ಶ್ರೀಮತಿ ರೇಣುಕಾ ಜಿ.ಎಸ್. ಆನೇಕಲ್ ಶ್ರೀನಿವಾಸ್ ವ್ಯವಸ್ಥಾಪಕರು
ಥ್ರೋ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಆಲ್ಬರ್ಟ್ ಪ್ರೇಮ್‌ಕುಮಾರ್ ಅವರಿಗೆ ಕರ್ನಾಟಕ ದ ಆಟಗಾರರು ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ

🏆 ಕರ್ನಾಟಕ ಪ್ಯಾರಾ ಥ್ರೋಬಾಲ್ ತಂಡ-ದಕ್ಷಿಣ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ-ಬೆಳ್ಳಿ ಜಯ, ತುಮಕೂರಿನಲ್ಲಿ ಸನ್ಮಾನ