ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು ಮಾತ್ರವಲ್ಲ, ಅನ್ನ ನೀಡುವ ಅನ್ನದಾತರು. ಅವರ ಶ್ರಮ ಮತ್ತು ಬೆವರಿನ ಫಲದಿಂದಲೇ ಸಮಾಜದ ಬದುಕು : ಕರವೇ (ಕನ್ನಡ ಸೇನೆ)ತಾಲ್ಲೂಕು ಅಧ್ಯಕ್ಷ ಪಿ.ಮುತ್ತಯ್ಯ ಕರೆ.

ವರದಿ:- ಅರುಣ್ ಕುಮಾರ್. ಎಸ್(ದೊಡ್ಡ ಉಳ್ಳಾರ್ತಿ)

ಚಿತ್ರದುರ್ಗ:- ಮದ್ಯ ಕರ್ನಾಟಕದ ಪ್ರಮುಖ ಪ್ರದೇಶವಾದ ಚಿತ್ರದುರ್ಗ ಜಿಲ್ಲೆ,ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯು ಅತಿ ಕಡಿಮೆ  ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದು,
ಆದರೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಕೃಪೆಯಿಂದ ಉತ್ತಮವಾದ ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಪ್ರಾರಂಭವಾಗಿದೆ,
ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಕಾಲದಲ್ಲಿ ಗುಣಮಟ್ಟದ ಬೀಜ ಹಾಗೂ ಗೊಬ್ಬರಗಳನ್ನು ಪೂರೈಸುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಸೇನೆ) ನಾಯಕನಹಟ್ಟಿ ಹೋಬಳಿ ಘಟಕದ ವತಿಯಿಂದ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರವೇ (ಕನ್ನಡಸೇನೆ)  ಚಳ್ಳಕೆರೆ ತಾಲ್ಲೂಕು ಘಟಕ ಅಧ್ಯಕ್ಷ ಪಿ. ಮುತ್ತಯ್ಯ ಮಾತನಾಡಿ:-  ರೈತ ದೇಶದ ಬೆನ್ನೆಲುಬು. ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಸರ್ಕಾರ ಹಾಗೂ ಕೃಷಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಂಗಾರು ಹಂಗಾಮಿನಲ್ಲಿ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು” ಎಂದು ಹೇಳಿದರು.
ನಗರ ಘಟಕ ಅಧ್ಯಕ್ಷರು,ಓ.ತಿಪ್ಪೇಸ್ವಾಮಿ ಮಾತನಾಡಿ :-ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬೀಜ ಮತ್ತು ಗೊಬ್ಬರಗಳ ಕೊರತೆ ಉಂಟಾಗದಂತೆ ಕೃಷಿ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.ರೈತರಿಗೆ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಗುಣಮಟ್ಟದ ಬೀಜ ಹಾಗೂ ಗೊಬ್ಬರಗಳು ದೊರೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು” ಎಂದರು.ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಸೇನೆ) ನಾಯಕನಹಟ್ಟಿ ಹೋಬಳಿ ಘಟಕ ಅಧ್ಯಕ್ಷರು ಕೆ.ಜೆ ಮಂಜಣ್ಣ ಮಾತನಾಡಿ:-
ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು ಮಾತ್ರವಲ್ಲ, ಅನ್ನ ನೀಡುವ ಅನ್ನದಾತರು. ಅವರ ಶ್ರಮ ಮತ್ತು ಬೆವರಿನ ಫಲದಿಂದಲೇ ಸಮಾಜದ ಬದುಕು ಸಾಗುತ್ತಿದೆ. ಇಂತಹ ರೈತರಿಗೆ ಬಿತ್ತನೆ ಸಮಯದಲ್ಲಿ ಬೀಜ ಮತ್ತು ಗೊಬ್ಬರಗಳ ಕೊರತೆಯಂತಹ ಮೂಲಭೂತ ಸಮಸ್ಯೆಗಳು ಎದುರಾಗುವುದು ಅತ್ಯಂತ ಬೇಸರದ ಸಂಗತಿ. ಹೀಗಾಗಿ ಸರ್ಕಾರ ಮತ್ತು ಕೃಷಿ ಇಲಾಖೆ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂಗಾರು ಹಂಗಾಮಿಗೆ ಅಗತ್ಯವಿರುವ ಎಲ್ಲಾ ಕೃಷಿ ಪರಿಕಾರಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದರು.ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಸೇನೆ) ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷರಾದ ಕೆ.ಜೆ ಮಂಜಣ್ಣ(ಜೋಗಿಹಟ್ಟಿ) ಮಹಿಳಾ ಅಧ್ಯಕ್ಷರಾದ ಬಿ.ತಿಪ್ಪಕ್ಕ ಚಿನ್ನಮಲ್ಲಯ್ಯ.
ಉಪಾಧ್ಯಕ್ಷರು,ಕೆ.ಪಿ.ನಾಗರಾಜ್.ನಗರಘಟಕ ಅಧ್ಯಕ್ಷರ,ಓ.ತಿಪ್ಪೇಸ್ವಾಮಿ,
ಸರ್ವ ಪದಾಧಿಕಾರಿಗಳು ಇದ್ದರು,

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು ಮಾತ್ರವಲ್ಲ, ಅನ್ನ ನೀಡುವ ಅನ್ನದಾತರು. ಅವರ ಶ್ರಮ ಮತ್ತು ಬೆವರಿನ ಫಲದಿಂದಲೇ ಸಮಾಜದ ಬದುಕು : ಕರವೇ (ಕನ್ನಡ ಸೇನೆ)ತಾಲ್ಲೂಕು ಅಧ್ಯಕ್ಷ ಪಿ.ಮುತ್ತಯ್ಯ ಕರೆ.