ಶಿಕ್ಷಣದ ಜೊತೆಗೆ ಸಂಸ್ಕಾರ, ಜ್ಞಾನ ಮತ್ತು ಮಾನವೀಯತೆ ಬೆಳೆಸಿಕೊಳ್ಳಿ- ಶಾಸಕ ಟಿ. ರಘುಮೂರ್ತಿ ಹೇಳಿಕೆ

ವರದಿ:- ಅರುಣ್ ಕುಮಾರ್.ಎಸ್ (ದೊಡ್ಡ ಉಳ್ಳಾರ್ತಿ)

ಚಳ್ಳಕೆರೆ:- ನಮ್ಮ ಮಕ್ಕಳು ಕೇವಲ ಉದ್ಯೋಗ ಪಡೆಯುವಷ್ಟು ಶಿಕ್ಷಣ ಪಡೆದರೆ ಸಾಲದು; ಸಮಾಜಕ್ಕೆ ಬೆಳಕು ನೀಡುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ, ಜ್ಞಾನ ಮತ್ತು ಮಾನವೀಯತೆ ಇರಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಶ್ರೀ.ಷ. ಬ್ರ.ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ
ನಗರದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಗೌರವ ಸಮರ್ಪಣೆ ಸಮಾರಂಭದ ಕಾರ್ಯಕ್ರಮವನ್ನು ಬೆಂಗಳೂರು ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗಣ್ಯತಿ ಗಣ್ಯರು ಸಮುದಾಯದ ಮುಖಂಡರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ.ಶಾಸಕ ಶ್ರೀ ಟಿ. ರಘುಮೂರ್ತಿ ರವರು ಮಾತನಾಡಿ :- ಪ್ರತಿಯೊಂದು ಸಮಾಜವು ಶಿಕ್ಷಣ, ಸಂಸ್ಕಾರ ಮತ್ತು ಸೇವೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಬಸವಣ್ಣನವರ ತತ್ವಗಳು ಇಂದಿಗೂ ನಮಗೆ ಮಾರ್ಗದರ್ಶಕವಾಗಿವೆ. ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಮಾತ್ರವಲ್ಲದೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು.
ಇಂದು ಗೌರವ ಸ್ವೀಕರಿಸುತ್ತಿರುವ ನಿವೃತ್ತ ನೌಕರರು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಮಾಜ ಮತ್ತು ರಾಷ್ಟ್ರದ ಸೇವೆಗೆ ಸಮರ್ಪಿಸಿದ್ದಾರೆ. ಅವರ ಶಿಸ್ತು, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಅವರ ಅನುಭವ ಮತ್ತು ಮಾರ್ಗದರ್ಶನ ಮುಂದಿನ ತಲೆಮಾರಿಗೆ ದಾರಿದೀಪವಾಗಲಿ.ನಿಮ್ಮ ಮುಂದಿನ ಜೀವನ ಮತ್ತಷ್ಟು ಯಶಸ್ಸು ಮತ್ತು ಸಂತೋಷದಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದರು.
ಮಾನ್ಯ ಲೋಕಸಭಾ ಸದಸ್ಯರು ಶ್ರೀ ಗೋವಿಂದ ಕಾರಜೋಳ ಮಾತನಾಡಿ :-
ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದು ಹಾಗೂ ನಿವೃತ್ತ ನೌಕರರನ್ನು ಗೌರವಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಸಾರ್ಥಕ ಕಾರ್ಯಕ್ರಮವಾಗಿದೆ,
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ, ಇಂತಹ ಗೌರವಗಳು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹವನ್ನು ಮೂಡಿಸುತ್ತವೆ. ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲಾ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಇದೆ ರೀತಿ ಮುಂದಿನ ದಿನಗಳಲ್ಲಿ ಸನ್ಮಾನಿಸಿ ಎಂದು ವಿನಂತಿಸಿದರು,ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ ಹಾಗೂ ಬಸವಣ್ಣನವರು ಸಮಾನತೆ, ಶ್ರಮ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಶರಣರು ಎಂದರು,ಅನೇಕ ಸಾಧು ಸಂತರು, ಶಿವ ಶರಣರು,ಸೂಪಿಗಳು ಜನಿಸಿದ ಜಿಲ್ಲೆ ನಮ್ಮ ಚಿತ್ರದುರ್ಗ, ತನ್ನದೇ ಆದ ಇತಿಹಾಸವನ್ನು ಈ ದುರ್ಗದ ಮಣ್ಣು ನೀಡಿದೆ. ಮಾದರ ಚನ್ನಯ್ಯ, ಡೋಹರ ಕಕ್ಕಯ್ಯರಂತಹ ಶರಣರನ್ನು ಗೌರವಿಸಿದ ಬಸವಣ್ಣನವರು, ಜಾತಿಗಿಂತ ಮಾನವೀಯತೆ ಮತ್ತು ಕಾಯಕವೇ ಶ್ರೇಷ್ಠ ಎಂಬ ಅಮೂಲ್ಯ ಸಂದೇಶವನ್ನು ಜಗತ್ತಿಗೆ ನೀಡಿದವರು ಎಂದರು.
ಕಾರ್ಯಕ್ರಮದಲ್ಲಿ ಕೆ.ಎಸ್. ನವೀನ್. ಕರ್ನಾಟಕ ವಿಧಾನಸಭಾ ಸದಸ್ಯರು, ಚಿತ್ರದುರ್ಗ. ಶ್ರೀ ಕೆ.ಸಿ ನಾಗರಾಜು.ಅಧ್ಯಕ್ಷರು. ವೀರಶೈವ ಸಮಾಜ ಸೇವಾ ಸಂಘ (ರಿ)ಚಳ್ಳಕೆರೆ. ಶ್ರೀ ಕೆ. ಎಂ. ಶಿವಸ್ವಾಮಿ, ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಿತ್ರದುರ್ಗ,ಶ್ರೀ ಹೆಚ್.ವಿ.ಪ್ರಸನ್ನಕುಮಾರ್. ಕಾರ್ಯದರ್ಶಿ,ಶ್ರೀ ಟಿ.ಪ್ರಭುದೇವ್ ಹಾಗೂ ವೀರಶೈವ ಲಿಂಗಾಯತ ಸಮಾಜದ ಸರ್ವ ಮುಖಂಡರು ಗಣ್ಯತಿ ಗಣ್ಯರು, ವಿದ್ಯಾರ್ಥಿಗಳು ಪೋಷಕರು ನೌಕರರು ಉಪಸ್ಥಿತರಿದ್ದರು.

ಶಿಕ್ಷಣದ ಜೊತೆಗೆ ಸಂಸ್ಕಾರ, ಜ್ಞಾನ ಮತ್ತು ಮಾನವೀಯತೆ ಬೆಳೆಸಿಕೊಳ್ಳಿ- ಶಾಸಕ ಟಿ. ರಘುಮೂರ್ತಿ ಹೇಳಿಕೆ