ಜನರ ನಡುವೆ ಹುಟ್ಟು ಹಬ್ಬ ಆಚರಣೆ ಇಂದಿನ ಯುವರಾಜಕಾರಣಿಗಳಿಗೆ ಡಾ.ಬೊಮ್ಮನಹಳ್ಳಿ ಬಾಬು ಮಾದರಿ: ಪರಮಪೂಜ್ಯಬಸವ ಮೂರ್ತಿಮಾದರ ಚೆನ್ನಯ್ಯ ಸ್ವಾಮೀಜಿ ಅಭಿಮತ.

ಹಿರಿಯೂರು: ಆಡಂಬರವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಶಕ್ತಿ ಅಂತಸ್ತು ಇದ್ದರೂ ಸಹ ಬಡ ಜನರ ನಡುವೆ ಬಂದು ತನ್ನ ಹುಟ್ಟುಹಬ್ಬ ಆಚರಣೆ ಮಾಡಿ ಕೊಂಡಿದ್ದು ಉತ್ತಮ ಮಾನವೀಯ ಗುಣವಾಗಿದೆ ಎಂದು ಚಿತ್ರದುರ್ಗದ ಮಾದರಚೆನ್ನಯ್ಯ ಗುರು ಪೀಠದ ಪರಮಪೂಜ್ಯಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.              ಪಟ್ಟಣದ ಅವಧಾನಿ ನಗರದಲ್ಲಿ ಡಾ, ಬೊಮ್ಮನಹಳ್ಳಿ ಬಾಬು ಅಭಿಮಾನಿಗಳ ಬಳಗ ಆಯೋಜಿಸಿದ್ದ ಡಾ. ಬೊಮ್ಮನಹಳ್ಳಿ ಬಾಬು ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ರಾಜಕಾರಣದಲ್ಲಿ ಜನರ ನಡುವೆ ನಿಂತು ಹುಟ್ಟು ಹಬ್ಬ ಆಚರಣೆ ಮಾಡುವ ಪ್ರವೃತ್ತಿ ಕಡಿಮೆ, ಆದರೆ ಡಾ, ಬೊಮ್ಮನಹಳ್ಳಿ ಬಾಬು ಅವರು ಜಾತ್ಯತೀತ ಧರ್ಮತೀತ ವ್ಯಕ್ತಿತ್ವವನ್ನು ಹೊಂದಿರುವ ಕಾರಣ ಬಡ ಜನರ ನಡುವೆ ನಿಂತು ಹುಟ್ಟು ಹಬ್ಬ ಆಚರಣೆ ಮಾಡುತ್ತಿರುವುದು ಅನನ್ಯವಾಗಿದೆ, ದೇವರು ಕೊಟ್ಟಿರುವ ಸಾಕಷ್ಟು ಸೌಭಾಗ್ಯವನ್ನು ಇಲ್ಲಿನ ಜನರಿಗೆ ನೀಡಬೇಕೆಂಬುದು ಅವರ ಅಭಿಲಾಷೆ ಇದೆ ಅದರಂತೆ ತಾಲೂಕಿನ ಜನರ ಪ್ರೀತಿ ವಿಶ್ವಾಸ ಜನ ಆಶೀರ್ವಾದ ಅವರ ಮೇಲೆ ಬೇಕಾಗಿದೆ ಎಂದು ಹೇಳಿದರು. ಪರಮ ಪೂಜ್ಯ ಷಡಕ್ಷರಿ ಮುನಿ ದೇಶಕೇಂದ್ರ ಸ್ವಾಮೀಜಿ ಮಾತನಾಡಿ ಡಾ, ಬೊಮ್ಮನಹಳ್ಳಿ ಬಾಬು ಅವರು ತನ್ನ ಹುಟ್ಟು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ರಕ್ತದಾನ ಶಿಬಿರ ಗರ್ಭಿಣಿ ಸ್ತ್ರೀಯರಿಗೆ ಬಾಗಿನ ಅನಾರೋಗ್ಯ ಪೀಡಿತರಿಗೆ ಸಹಾಯ ಹೀಗೆ ಹಲವು ಜನೋಪಾಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವುದು ತಾಲೂಕಿನ ಜನತೆಯಲ್ಲಿ ಸಂತಸ ತಂದಿದೆ ಈಗ ತಾಲೂಕಿನ ಜನತೆ ಜನ ಆಶೀರ್ವಾದ ಮಾಡಿದರೆ ಇನ್ನೂ ಉತ್ತಮ ರೀತಿಯಲ್ಲಿ ಸತ್ಕಾರ್ಯಗಳನ್ನ ಇವರು ಮಾಡುತ್ತಾರೆ ಎಂದು ಹೇಳಿದರು, ಈ ವೇಳೆ ಪರಮಪೂಜ್ಯ ಶಿವಮುನಿ, ಪಕ್ಷೇತರ ಅಭ್ಯರ್ಥಿ ಡಾ, ಬೊಮ್ಮನಹಳ್ಳಿ ಬಾಬು, ಕೆ,ಟಿ, ಶ್ರೀನಿವಾಸ್, ಢಾಬಾ ಚಿಕ್ಕಣ್ಣ, ಐಮಂಗಳ ಶಿವಣ್ಣ, ವಿಕೆಗುಡ್ಡ ಮಹಾಲಿಂಗಪ್ಪ ತಾರಕೇಶ್, ಜಾವಿದ್ ಎನ್ ಬಸವರಾಜ್ ಮಹೇಶ್ , ದೇವರಾಜ್, ರಜಿಯ ಸುಲ್ತಾನ್, ಪ್ರಿನ್ಸ್ ಸಲ್ಮಾನ್, ಸುಶೀಲಮ್ಮ ಮಲಿಯಮ್ಮ ಗುರುದತ್ತು ಸರ್ಪರಾಜು ಹಾಗೂ ಇತರರು ಉಪಸ್ಥಿತರಿದ್ದರು

google.com, pub-6655686835548130, DIRECT, f08c47fec0942fa0

ಜನರ ನಡುವೆ ಹುಟ್ಟು ಹಬ್ಬ ಆಚರಣೆ ಇಂದಿನ ಯುವರಾಜಕಾರಣಿಗಳಿಗೆ ಡಾ.ಬೊಮ್ಮನಹಳ್ಳಿ ಬಾಬು ಮಾದರಿ: ಪರಮಪೂಜ್ಯಬಸವ ಮೂರ್ತಿಮಾದರ ಚೆನ್ನಯ್ಯ ಸ್ವಾಮೀಜಿ ಅಭಿಮತ.