ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿಯಲ್ಲಿ ಹೊಸ ಬೋರ್ವೆಲ್ನಲ್ಲಿ 3 ಇಂಚು ನೀರು ಲಭ್ಯ • ಬೋರ್ವೆಲ್ ವೆಚ್ಚವನ್ನು ಗ್ರಾಮಸ್ಥರಿಗೆ ವಿತರಣೆ • ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಹಿರಿಯೂರು, ಜು.20: ಹಿರಿಯೂರು ವಿಧಾನಸಭಾ ಕ್ಷೇತ್ರದ ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ಸಮಾಜಸೇವಕ **ಬೊಮ್ಮನಹಳ್ಳಿ ಬಾಬು **ಅವರು ಬುರುಜನರೊಪ್ಪ ಸಾಲಹುಣಸೆ ಗೊಲ್ಲರಹಟ್ಟಿ ಹೊಸ ಬೋರ್ವೆಲ್ ಕೊರೆಸಲಾಗಿದ್ದು, ಸುಮಾರು 3 ಇಂಚು ನೀರು ಲಭ್ಯವಾಗಿದೆ.
Thank you for reading this post, don't forget to subscribe!ಗ್ರಾಮದಲ್ಲಿ ನೀರಿನ ಕೊರತೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ಬಾಬು ಅವರು ತಕ್ಷಣ ಸ್ಪಂದಿಸಿ ಬೋರ್ವೆಲ್ ಕೊರೆಯುವ ವ್ಯವಸ್ಥೆ ಮಾಡಿಸಿದರು. ಬೋರ್ವೆಲ್ನಲ್ಲಿ ಸಮರ್ಪಕ ಪ್ರಮಾಣದ ನೀರು ದೊರೆತಿರುವುದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.
ಬೋರ್ವೆಲ್ ಕೊರೆಯಲು ಖರ್ಚಾಗಿರುವ ಸಂಪೂರ್ಣ ಹಣವನ್ನು ಬೊಮ್ಮನಹಳ್ಳಿ ಬಾಬು ಅವರು ಗ್ರಾಮಸ್ಥರಿಗೆ ವಿತರಿಸಿದರು. ಗ್ರಾಮಸ್ಥರು ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮನಹಳ್ಳಿ ಬಾಬು, “ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಹಕ್ಕು. ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಅದನ್ನು ಬಗೆಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಗ್ರಾಮಸ್ಥರು ಬೊಮ್ಮನಹಳ್ಳಿ ಬಾಬು ಅವರ ಸಮಯೋಚಿತ ಸಹಾಯವನ್ನು ಅಭಿನಂದಿಸಿ, ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.












