ಪ್ರಾಯೋಗಿಕ ಪರೀಕ್ಷೆಗೆ ತಲಾ 100 ಕೋಟಿ ನೋಟು ಮುದ್ರಣ ಪ್ರಸ್ತಾವನೆ • ಯಶಸ್ವಿಯಾದ ಬಳಿಕ ನಿಯಮಿತ ಚಲಾವಣೆ
ನವದೆಹಲಿ, ಜು. 28:
Thank you for reading this post, don't forget to subscribe!₹10 ಮತ್ತು ₹20 ಮುಖಬೆಲೆಯ ಪಾಲಿಮರ್ ಬ್ಯಾಂಕ್ನೋಟುಗಳನ್ನು ಪರಿಚಯಿಸುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ Pankaj Chaudhary, ಪ್ರಾಯೋಗಿಕ ಪರೀಕ್ಷೆಗಾಗಿ ₹10 ಮತ್ತು ₹20 ಮುಖಬೆಲೆಯ ತಲಾ 100 ಕೋಟಿ ಪಾಲಿಮರ್ ನೋಟುಗಳನ್ನು ಮುದ್ರಿಸಲು ಆರ್ಬಿಐ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ತಿಳಿಸಿದ್ದಾರೆ.
ಕ್ಷೇತ್ರಮಟ್ಟದ (Field Trial) ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ₹10 ಮತ್ತು ₹20 ಪಾಲಿಮರ್ ನೋಟುಗಳನ್ನು ದೇಶಾದ್ಯಂತ ನಿಯಮಿತ ಚಲಾವಣೆಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪಾಲಿಮರ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುವುದರ ಜೊತೆಗೆ ತೇವಾಂಶ ಮತ್ತು ಹಾನಿಗೆ ಹೆಚ್ಚು ನಿರೋಧಕವಾಗಿರುತ್ತವೆ. ನಕಲಿ ನೋಟುಗಳ ತಯಾರಿಕೆಯನ್ನು ತಡೆಯಲು ಸಹ ಇವುಗಳಲ್ಲಿ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಬಹುದಾಗಿದೆ.
ಆರ್ಬಿಐ ನಡೆಸಲಿರುವ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಪಾಲಿಮರ್ ನೋಟುಗಳ ದೇಶವ್ಯಾಪಿ ಬಳಕೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.









