ರೈತರ ಅಭಿವೃದ್ಧಿಗಾಗಿ ಸಹಕಾರ ಸಂಘಗಳಿವೆ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ
ಚಿತ್ರದುರ್ಗ, ಜೂನ್ ೧೨ : ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ತಳಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ತಳಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ sಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ತಳಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ನಿರ್ದೇಶಕನನ್ನಾಗಿ ಮಾಡಿರುವುದಕ್ಕೆ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆಯನ್ನು ಸಮರ್ಪಿಸುವೆ, ಸಹಕಾರಿ ಸಂಘಗಳು ರೈತರ ಅಭಿವೃದ್ಧಿಗಾಗಿಯೇ ಇವೆ, ತಳಕು ಸಹಕಾರಿ ಬ್ಯಾಂಕು ಈಗಾಗಲೇ ಪ್ರಗತಿಯಲ್ಲಿದ್ದು ಲಾಭಾಂಶದಿAದ ಕೂಡಿದ್ದು ರೈತರಿಗೆ ಸಾಕಷ್ಟು ಸಾಲ ಸೌಲಭ್ಯಗಳು ನೀಡುತ್ತಿದೆ ಈ ಸಹಕಾರಿ ಸಂಘವನ್ನ ಮತ್ತಷ್ಟು ಅಭಿವೃದ್ಧಿ ಪಡಿಸುವ ಕನಸನ್ನು ಇಟ್ಟುಕೊಂಡಿದ್ದೇನೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿದರು.
ಸಹಕಾರ ಸಂಘದ ನಿರ್ದೇಶಕರ ಜೊತೆಗೆ ನಾನೊಬ್ಬ ನಿರ್ದೇಶಕನಾಗಿ ಕೆಲಸ ಮಾಡಲು ಯಾವಾಗಲೂ ಮುಂದೆ ಇರುತ್ತೇನೆ ಸಹಕಾರಿ ಸಂಘದ ನೂತನ ಕಟ್ಟಡ ಅವಶ್ಯಕತೆವಾಗಿದ್ದು ಇದರ ಕಾರ್ಯವನ್ನು ಅತಿ ಶೀಘ್ರದಲ್ಲೇ ಸ್ಥಾಪಿಸುವಂತಹ ಕೆಲಸವನ್ನು ಮಾಡುತ್ತೇನೆ ಯಾವಾಗಲೂ ಸಹಕಾರಿ ಸಂಘದ ಜೊತೆಯಾಗಿ ಇರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಳಕು ಸಹಕಾರಿ ಸಂಘದ ಅಧ್ಯಕ್ಷರಾದ ಕುಮಾರಪ್ಪ, ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಅಣ್ಣಪ್ಪಸ್ವಾಮಿ, ತಿಪ್ಪೇಸ್ವಾಮಿ, ಶಾರದಮ್ಮ, ರತ್ನಮ್ಮ, ಜಯಣ್ಣ, ಸುರೇಶ್, ಬೊಮ್ಮಯ್ಯ, ಮಹಾಲಿಂಗಪ್ಪ, ರಾಜಣ್ಣ ಕೋಡಿಹಳ್ಳಿ, ಕಾಂಗ್ರೆಸ್ ಮುಖಂಡರಾದ ಮಲ್ಲೇಶ್, ಗೋವಿಂದರಾಜ, ಸೂರಯ್ಯ, ಮಂಜುನಾಥ್, ವೀರೇಶ್, ರಾಮಾಂಜನೇಯ ಹಾಗೂ ಇತರರು ಇದ್ದರು.













