ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಡೆಗೆ ಕೊಂಡೊಯ್ಯುವೆ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ನನ್ನ ಪಾಲಿಗೆ ಬಂದ ಕೆಲಸ ನಾನು ಪ್ರಾಮಾಣಿಕವಾಗಿ ಮಾಡುವೆ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

೧ ಕೋಟಿ ೨೦ ಲಕ್ಷ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ

ಚಿತ್ರದುರ್ಗ, ಜೂನ್ ೨೦ : ನನ್ನ ಮತ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇನೆ, ನನ್ನ ಪಾಲಿಗೆ ಬಂದ ಕೆಲಸವನ್ನು ಪ್ರಾಮಾಣಿಕವಾಗಿ ಜನರಿಗೆ ಅನುಕೂಲ ವಾಗುವಂತಹ ಅಭಿವೃದ್ಧಿ ಕೆಲಸವನ್ನು ಕ್ಷೇತ್ರದ ವಿವಿಧಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
   ನಗರದ ಶ್ರೀ ಶನೇಶ್ವರ ದೇವಸ್ಥಾನ ಹಾಗೂ ಸಿದ್ದಾರ್ಥ ಬಡಾವಣೆಗಳಲ್ಲಿ ೧ ಕೋಟಿ ೨೦ ಲಕ್ಷ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳು ಕಾರ್ಯಾನ್ಮುಖವಾಗಿ ಸಾಗುತ್ತಿವೆ, ಇದರ ಜೊತೆಗೆ ವಿವಿಧ ಹಳ್ಳಿಗಳಲ್ಲಿ ಭೂಮಿ ಪೂಜೆಗಳನ್ನು ನೆರವೇರಿಸಲಾಗುತ್ತಿದೆ, ಒಟ್ಟಾರೆ ಕ್ಷೇತ್ರದ ಬಹುತೇಕ ಹಳ್ಳಿಗಳು ಕೆಸರು ಮುಕ್ತ ರಸ್ತೆಗಳನ್ನಾಗಿ ಮಾಡುವ ಗುರಿಯನ್ನು ಒಂದಿದ್ದೇವೆ ಹಾಗಾಗಿ ಹಳ್ಳಿಗಳ ಅಭಿವೃದ್ಧಿಗಾಗಿ ಸಿಸಿ ರಸ್ತೆ ವಿದ್ಯುತ್ ದೀಪ ಕುಡಿಯುವ ನೀರಿನ ವ್ಯವಸ್ಥೆಗೆ ಅನಾನುಕೂಲವಾದಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
   ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಮೃದ್ಧಿ ಕ್ಷೇತ್ರವನ್ನಾಗಿಸಲು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಪ್ಪರ್ ಭದ್ರ ಯೋಜನೆಯ ಮುಖಾಂತರ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಕೈಬಿಟ್ಟ ಕೆರೆಗಳನ್ನು ಸಹ ಏತ ನೀರಾವರಿ ಯೋಜನೆಗೆ ಸೇರಿಸಲಾಗಿದೆ, ರೈತರ ಅನುಕೂಲಕ್ಕಾಗಿ ಅವರ ಜೊತೆಗೆ ಸಾಗುತ್ತೇನೆ, ಸರ್ಕಾರದಿಂದ ಬರುವಂತಹ ಯೋಜನೆಗಳನ್ನು ಸರಿಯಾಗಿ ರೈತರಿಗೆ ತಲುಪುವಂತಹ ಕೆಲಸಗಳನ್ನು ಅಧಿಕಾರಿಗಳ ಜೊತೆ ಸೇರಿ ಮಾಡುತ್ತೇನೆ ಎಂದರು.
    ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಳ್ಳಿಗಳನ್ನ ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನ ನಾನು ಹೊತ್ತು ಕೊಂಡಿದ್ದೇನೆ, ಕೈಲಾದಷ್ಟು ಅಭಿವೃದ್ಧಿಯನ್ನು ಮಾಡುವ ಕಡೆಗೆ ನಾನು ಶ್ರಮವನ್ನ ಪ್ರಾಮಾಣಿಕವಾಗಿ ವಹಿಸುತ್ತೇನೆ, ಮುಖ್ಯಮಂತ್ರಿಗಳಬಳಿ ವಿಶೇಷ ಅನುದಾನಗಳನ್ನು ಕ್ಷೇತ್ರಕ್ಕೆ ತರುವುದರ ಮೂಲಕ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಗಾಗಿ ನಾನು ಕ್ರಮಬದ್ಧವಾಗಿ ನಿರ್ವಹಿಸುತ್ತೇನೆ, ಕ್ಷೇತ್ರದ ಜನರು ಸಮೃದ್ಧಿಯಾಗಿದ್ದರೆ ರಾಜಕಾರಣದಲ್ಲಿ ಇದ್ದದ್ದಕ್ಕೂ ನೆಮ್ಮದಿಯಾಗುತ್ತದೆ ಎಂದು ಭಾವನಾತ್ಮಕವಾದ ಮಾತುಗಳ ನಾಡಿದರು.
   ನಗರಾಭಿವೃದ್ಧಿ ಮಾಜಿ ಸದಸ್ಯೆ ತಾರಕೇಶ್ವರಿ ಮಾತನಾಡಿ ಯುವ ರಾಜಕಾರಣಿಯಾದಂತವರು ಜನ ಜನರ ಮೇಲೆ ಹಾಗೂ ಕ್ಷೇತ್ರದ ಮತದಾರರ ಮೇಲೆ ಅಭಿನಾಭಾವ ಸಂಬAಧವನ್ನು ಇಟ್ಟುಕೊಂಡಿರುತ್ತಾರೆ, ಅದೇ ರೀತಿಯಲ್ಲಿ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಸಹ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡುವುದರ ಮೂಲಕ ಎಲ್ಲರ ಮನಸ್ಸಿನಲ್ಲಿದ್ದಾರೆ ಉಳಿದಿದ್ದಾರೆ ಅವರ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗುತ್ತಿವೆ, ಯಾವುದೇ ರಾಜಕಾರಣಿಯಾಗಿರಲಿ ಮೊದಲು ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಸಾಗಬೇಕು ಅಂತಹ ಕೆಲಸವನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಮಾಡುತ್ತಿರುವುದು ಸ್ವಾಗತರ್ಹವಾಗಿದೆ, ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಕ್ಷೇತ್ರದ ಮತದಾರರು ಎಲ್ಲರೂ ಒಂದೇ ಎನ್ನುವ ಮನೋಭಾವನೆಯಿಂದ ಅಭಿವೃದ್ಧಿಗೆ ಮಾಡಿದಾಗ ಮಾತ್ರ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವೆಂದು ಹೇಳಿದರು.
ಶನಿಮಹಾತ್ಮ ದೇವಸ್ಥಾನದಿಂದ ಡಾನ್ ಬಾಸ್ಕೋ ಶಾಲೆಯ ತಿರುವಿನ ವರೆಗೆ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿ ಅವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ೮೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣದ ಸಿಸಿ ರಸ್ತೆ ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಸುಮಾರು ೪೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
  ಈ ಒಂದು ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಕೆಡಿಪಿ ಸದಸ್ಯರಾದ ಸಂತೋಷ್ ನಾಗರಾಜ್, ಕೆ.ಆರ್.ಐ.ಡಿ.ಎಲ್ ಎಇಇ ಇಂಜಿನಿಯರ್ ಉಮೇಶ್ ಕೆ.ಆರ್, ಸಹಾಯಕ ಇಂಜಿನಿಯರ್ ಶರತ್, ಮುಖಂಡರಾದ ಮಹೇಶ್, ಕುಮಾರಪ್ಪ, ವಿಜಯ್ ಕುಮಾರ್, ಸಂಪತ್, ಜಗದೀಶ್, ತಿಪ್ಪೇಸ್ವಾಮಿ, ಮುನ್ನ, ಭಾಷಾ, ಶರೀಫ್, ದೇವಮ್ಮ, ಶಾಂತಮ್ಮ, ಜಯಲಕ್ಷ್ಮಿ, ಆಫ್ರಿನ್, ಗಂಗಮ್ಮ, ಶಾಹಿನ ಇದ್ದರು ಉಪಸ್ಥಿತಿ ಇದ್ದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಕಡೆಗೆ ಕೊಂಡೊಯ್ಯುವೆ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ