ವರದಿ:- ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ)
ಚಳ್ಳಕೆರೆ: ಜೂ.15 :-
ಗ್ರಾಮದ ದೇವತಾ ಧಾರ್ಮಿಕ ಕಾರ್ಯದಲ್ಲಿ ಸರ್ವರ ಸಹಭಾಗಿತ್ವ ಇರಬೇಕು ಎಂದು ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ, ಮೂರ್ತಿ ಡೆವಲಪರ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬುದ್ದ,ಬಸವ,ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು. ಗ್ರಾಮದಲ್ಲಿ ಶಿಥಿಲವಾಗಿರುವ ಶ್ರೀ ದುರ್ಗಾಂಭಿಕ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಐದು ಲಕ್ಷ ಧನ ಸಹಾಯ ಮಾಡಲಾಗುವುದು. ಉಳಿದಂತೆ ಶಾಸಕರು ನೀಡಿರುವ ಅನುದಾನ ಬಳಸಿಕೊಂಡು ಸುಂದರ ದೇವಾಲಯ ನಿರ್ಮಾಣಕ್ಕೆ ಗ್ರಾಮದ ಸರ್ವರ ಹೊಂದಾಣಿಕೆ ಇರಬೇಕು ಎಂದು ಹೇಳಿದರು. ಒಂದು ಸಂಘಟನೆಯಿಂದ ಜನಪರ ಕೆಲಸ ಆಗಬೇಕು. ಈ ಹಿನ್ನೆಲೆಯಲ್ಲಿ ಹಿತರಕ್ಷಣಾ ವೇದಿಕೆಯಿಂದ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಕಾರು,ಬೈಕ್ ಸವಾರರಿಗೆ ಪರವಾನಗಿ ಲೈಸೆನ್ಸ್, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಧಾರ ಅನಿಸುವ ಸುಕನ್ಯಾ ಯೋಜನೆಗೆ,ಮೊದಲ ವಂತಿಕೆಯಾಗಿ ಪ್ರತಿ ಕುಟುಂಬದ ಹೆಣ್ಣು ಮಗುವಿಗೆ 1825 ರೂ ಸಹಕಾರ ಮಾಡಲಾಗುವುದು. 157 ವಾಹನ ಸವಾರರಿಗೆ ಚಾಲನ ಪರವಾನಗಿ ಕೊಡಿಸಲಾಗುವುದು. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕವಿ,ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಮನುಕುಲಕ್ಕೆ ತೊಂದರೆ ಮಾಡಿಕೊಂಡು ಯುದ್ದ ನಿಲ್ಲಿಸದೆ ಹಠಕ್ಕೆ ಬಿದ್ದಿರುವ ದೇಶಗಳಿಗೆ,’ ವೈರಿಯಿಂದ ವೈರಿ ನಾಶವಾಗುವುದಿಲ್ಲ. ಆ ವೈರಿಯಿಂದ ವೈರಿ ನಾಶವಾಗುತ್ತದೆ’ ಎನ್ನುವ ಬುದ್ದನ ಸತ್ಯ ಸಂದೇಶ ಮುಟ್ಟಬೇಕು. ಲೋಕ ಬದುಕಿನ ಧರ್ಮವನ್ನು ಸಾರುವ ಶಿವಶರಣರ ವಚನಗಳನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಬೇಕು. ಬಸವಣ್ಣನನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು. ವರ್ಣರಂಜಿತ ಮತ್ತು ಡಿಜೆ ಸಂಭ್ರಮದಲ್ಲಿ ಅಂಬೇಡ್ಕರ್ ಜಯಂತಿ ಮೌಲ್ಯತೆ ಕಳೆದುಕೊಳ್ಳುತ್ತಿದೆ. ಪ್ರತಿದಿನದ ವ್ಯಾವಹಾರಿಕ ಕ್ಷೇತ್ರ ಸೇರಿ ಆಡಳಿತ ಮತ್ತು ವಿದೇಶಾಂಗ ವ್ಯವಹಾರದಲ್ಲಿ ಉಲ್ಲೇಖಿರಾಗುವ ಬುದ್ದ,ಬಸವ,ಅಂಬೇಡ್ಕರ್ ಅವರಿಗೆ ನಿತ್ಯವೂ ಜಯಂತಿ ಇದ್ದಂತೆ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಯಲ್ಲಪ್ಪ, ನ್ಯಾಯ ಬೆಲೆ ಅಂಗಡಿ ಮಾಲೀಕ ಎಚ್. ಚನ್ನಿಗರಾಮಯ್ಯ, ಸಾಮಾಜಿಕ ಹೋರಾಟಗಾರ ಎಸ್.ಎಸ್. ಸೈಯದ್, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷೆ ಮಂಗಳಮ್ಮ ರಂಗಸ್ವಾಮಿ,ಬಿ.ಸಿ. ವೆಂಕಟೇಶ್ ಮೂರ್ತಿ,ಬಿ.ಸಿ.ಸತೀಶ್ ಕುಮಾರ್, ಕಾರ್ತೀಕ್, ಅಜ್ಮತ್ ವುಲ್ಲಾ, ಪಿ.ಚಿದಾನಂಯ್ಯ, ಎಂ.ಶೇಖರಪ್ಪ, ಕೆ. ರುದ್ರಮುನಿ, ಲಕ್ಷ್ಮಿಪುರ ರಾಜಶೇಖರಪ್ಪ, ದ್ಯಾಮಣ್ಣ, ನಾಗರಾಜ್, ಲೋಹಿತ್, ಎಂ.ಎನ್. ಮೃತ್ಯುಂಜಯ, ವಿಷ್ಣುಮೂರ್ತಿ ರಾವ್, ಗುತ್ತಿಗೆದಾರ ಜಗದೀಶ್ ಇತರರು ಇದ್ದರು.
ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸೋಮವಾರ ಜರುಗಿದ ಬುದ್ದ,ಬಸವ,ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಉದ್ಟಾಟಿಸಿದರು. ಎಸ್.ಎಚ್.ಸೈಯದ್, ಕೊರ್ಲಕುಂಟೆ ತಿಪ್ಪೇಸ್ವಾಮಿ, ಎಂ.ಶೇಖರಪ್ಪ, ಕಾರ್ತೀಕ್, ವೆಂಕಟೇಶ್ ಮೂರ್ತಿ, ಸತೀಶ್ ಕುಮಾರ್, ಯಲ್ಲಪ್ಪ, ಮಂಗಳಮ್ಮ,ಕಮಲಮ್ಮ ಇದ್ದರು.












