ಹಿರಿಯ ಸಾಹಿತಿ, ಪತ್ರಕರ್ತ ಶ್ರೀ ಜಿ.ಎಸ್. ಉಜ್ಜಿನಪ್ಪ ಇನ್ನಿಲ್ಲ…

(ಜನನ : 30-10-1939, ಮರಣ : 20-06-2026.)

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಗೌನಹಳ್ಳಿಯ ತಂದೆ ಗೊಂಚಿಗಾರ ಸಿದ್ದಯ್ಯ, ತಾಯಿ ಲಿಂಗಮ್ಮ ದಂಪತಿಗಳ ಹಿರಿಯ ಮಗನಾಗಿ ದಿ: 30.10.1939 ರಲ್ಲಿ ಜನಿಸಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ (1962), ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ನಿಂದ ಡಿಎಸ್‌ಎಸ್‌ಎ ಸ್ನಾತಕೋತ್ತರ ಡಿಪ್ಲೋಮಾ (1965), ಅಲ್ಪಕಾಲ ಮಧುಗಿರಿ ತಾಲ್ಲೂಕಿನ ದಂಡಿನದಿಬ್ಬ ಗ್ರಾಮದಲ್ಲಿ ಶಿಕ್ಷಕರಾಗಿದ್ದರು (1962), ಬೆಂಗಳೂರಿನ ಗಾಂಧೀನಗರದಲ್ಲಿರುವ ಆರ್ಯ ವಿದ್ಯಾಶಾಲಾ ಪ್ರೌಢಶಾಲೆಯಲ್ಲಿ (1965), ಅಧ್ಯಾಪಕರಾಗಿ ಕೆಲಸ, ದೂರದ ಗುಲ್ಬರ್ಗಾದ ಎಂ.ಎಸ್.ಕೆ ಹತ್ತಿಗಿರಣಿಯಲ್ಲಿ ಸಹಾಯಕ ಸಿಬ್ಬಂದಿ ಅಧಿಕಾರಿಯಾಗಿ (1966-67) ಕೆಲಸ, ನವಕಲ್ಯಾಣ ವಾರಪತ್ರಿಕೆಯಲ್ಲಿ ಕಾರ್ಯಾರಂಭ (1966), ಚಿತ್ರದುರ್ಗದ ಎಸ್.ಜೆ.ಎಂ ಬೃಹನ್ಮಠ ಪ್ರೌಢಶಾಲೆಯಲ್ಲಿ ಮತ್ತೆ ಅಧ್ಯಾಪಕ ವೃತ್ತಿ (1968-70), ಬೃಹನ್ಮಠದ ಕನ್ನಡ ತ್ರೆöÊಮಾಸಿಕ ಗುರುಕುಲದ ಸಂಪಾದಕ (1969), ಶ್ರೀಮತಿ ಭೈರಮ್ಮ ಇವರೊಂದಿಗೆ ವಿವಾಹ (1969), ಅಧ್ಯಾಪಕ ವೃತ್ತಿ ತೊರೆದು ಚಿತ್ರದುರ್ಗದ ಜಯಲಕ್ಷಿö್ಮ ಹತ್ತಿಗಿರಣಿಯಲ್ಲಿ (1971-91) ಸುದೀರ್ಘ 20ವರ್ಷಗಳ ಕಾಲ ಸೇವೆ, ಈ ಅವಧಿಯಲ್ಲಿ ಲೋಕವಾಣಿ (1974) ಗೆ ಹವ್ಯಾಸವಾಗಿ ಪ್ರಾರಂಭವಾದ ಪತ್ರಿಕಾ ವರದಿಗಾರಿಕೆ, ಟೈಮ್ಸ್ ಆಫ್ ಇಂಡಿಯಾದ ಚಿತ್ರದುರ್ಗದ ಖಾಯಂ ವರದಿಗಾರರಾಗಿ (1984 ರಿಂದ2013) ಸತತವಾಗಿ 29ವರ್ಷಗಳ ಕಾಲನೆಲೆ ನಿಲ್ಲಿಸಿತು. ತಮ್ಮ 60ನೇ ವರ್ಷದ ನಂತರ ಸಾಹಿತ್ಯಲೋಕಕ್ಕೆ ಪ್ರವೇಶ, ಸಣ್ಣಕಥೆ, ಆತ್ಮಕಥೆ ಸೇರಿದಂತೆ 15 ಕ್ಕೂ ಕೃತಿಗಳು ಪ್ರಕಟಗೊಂಡಿವೆ. ರಂಗಸೌರಭ ಕಲಾ ಸಂಘ ಸೇರಿದಂತೆ ಹಲವು ಸಂಸ್ಥೆಗಳ ಕಾರ್ಯಕ್ರಮಗಳಿಗೆ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದರು.
ಪ್ರಕಟಿತ ಕೃತಿಗಳು:- ಗೌನಳ್ಳೇರು (ಗ್ರಾಮಭಾರತ ಕಥನ), ಬದುಕೆಂಬ ಮಹಾಪ್ರಬಂಧ (ಆತ್ಮಕಥೆ), ಹಿರಿಯೂರು ತಾಲ್ಲೂಕು ಗೆಜೆಟಿಯರ್ (ಕರ್ನಾಟಕ ಸರ್ಕಾರ 2017), ದಾರಿಗೆ ಜತೆಯಲ್ಲಿ (ಕಥಾ ಸಂಕಲನ), ಡಾ.ಮೀರಸಾಬಿಹಳ್ಳಿ ಶಿವಣ್ಣನವರ ಕನ್ನಡ ಎತ್ತಪ್ಪ ಕೃತಿಯು ಇಂಗ್ಲೀಷ್ ಅನುವಾದ, ದುರ್ಗಸಿರಿ, ಚಿನ್ಮೂಲಾದ್ರಿ, ಬೆಳಕಿನೆಡೆಗೆ ಮೊದಲಾದ ಸ್ಮರಣ ಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪತ್ರಕರ್ತರ ಸಮ್ಮೇಳನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶರಣ ಸಾಹಿತ್ಯ ಪರಿಷತ್ತು ಸಮ್ಮೇಳನ ಪ್ರಶಸ್ತಿ, ಡಾ.ಮೀರಸಾಬೀಹಳ್ಳಿ ಶಿವಣ್ಣ ಸಾಹಿತ್ಯಶ್ರೀ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಹಲವು ಗೌರವಾನ್ವಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಉದಯೋನ್ಮುಖ ಸಾಹಿತಿಗಳಿಗೆ, ಪತ್ರಕರ್ತರಿಗೆ ಹಾಗೂ ಕಲಾವಿದರಿಗೆ ಸ್ಪೂರ್ತಿಯಾಗಿದ್ದ ಜಿ.ಎಸ್.ಉಜ್ಜಿನಪ್ಪನವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

ಹಿರಿಯ ಸಾಹಿತಿ, ಪತ್ರಕರ್ತ ಶ್ರೀ ಜಿ.ಎಸ್. ಉಜ್ಜಿನಪ್ಪ ಇನ್ನಿಲ್ಲ…