ವರದಿ:- ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ)
ಚಿತ್ರದುರ್ಗ: ಕೇರಳ ರಾಜ್ಯದ ಪ್ರಸಿದ್ಧ ಕೊಟ್ಟಿಯೂರು ಶಿವನ ದೇವಸ್ಥಾನದಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಈ ಬಾರಿ ಚಿತ್ರದುರ್ಗ ಜಿಲ್ಲೆಯ ಪ್ರತಿನಿಧಿಯಾಗಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲೆಂದು ಟಿ. ರಘುಮೂರ್ತಿ ಯುವ ಸೇನೆಯ ರಾಜ್ಯಾಧ್ಯಕ್ಷ ಕೆ.ಟಿ.ಶಿವಕುಮಾರ್ ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ದೇವರ ಅನುಗ್ರಹಕ್ಕಾಗಿ ಕಾರ್ಯಕರ್ತರು ಸುಮಾರು ಮೂರು ಗಂಟೆ 45 ನಿಮಿಷಗಳ ಕಾಲ ನಿರಂತರ ಮಳೆಯ ನಡುವೆಯೂ ದೇವಸ್ಥಾನದ ಆವರಣದಲ್ಲಿ ನಿಂತು ಭಕ್ತಿಭಾವದಿಂದ ಶಿವನ ದರ್ಶನ ಪಡೆದರು. ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವ ಸೇನೆಯ ಸದಸ್ಯರು ಮಾತನಾಡಿ, ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಶಾಸಕ ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಚಿತ್ರದುರ್ಗ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ದೊರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸುರಿವ ಮಳೆಯಲ್ಲೂ ನಿಂತು ತಮ್ಮ ನೆಚ್ಚಿನ ಟಿ, ರಘುಮೂರ್ತಿ ಸಚಿವರಾಗಲೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ,
ಕಾರ್ಯಕ್ರಮದಲ್ಲಿ ಟಿ. ರಘುಮೂರ್ತಿ ಯುವ ಸೇನೆಯ ಹಲವು ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಭಾಗವಹಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು












