ವರದಿ:- ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ)
ಚಳ್ಳಕೆರೆ :- ಪ್ರತಿಯೊಂದು ವಚನದಲ್ಲೂ ಆಳವಾದ ಸಾಮಾಜಿಕ ಚಿಂತನೆ ಅಡಗಿದೆ. ‘ಎಲ್ಲರೂ ಸಮಾನರು’ ಎಂಬ ಸಾರ್ವಕಾಲಿಕ ಸತ್ಯವನ್ನು ವಚನ ಸಿದ್ಧಾಂತಗಳ ಮೂಲಕ ಜಗತ್ತಿಗೆ ಸಾರಿದ ಕೀರ್ತಿ ಕ್ರಾಂತಿಕಾರಿ ಬಸವಣ್ಣನವರಿಗೆ ಸಲ್ಲುತ್ತದೆ,” ಎಂದು ಸಿದ್ದಯ್ಯನಕೋಟೆಯ ಚಿತ್ತರಗಿಮಠದ ಬಸವಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆಯಲ್ಲಿ ಹಿತರಕ್ಷಣಾ ವೇದಿಕೆ ವತಿಯಿಂದ ಹಾಗೂ ಮೂರ್ತಿ ಡೆವಲಪರ್ಸ್ ಅಂಡ್ ಇಂಡಸ್ಟ್ರೀಸ್ ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಬಿ.ಸಿ. ಸಂಜೀವಮೂರ್ತಿ, ಶ್ರೀ ಬಿ.ಸಿ. ವೆಂಕಟೇಶ್ ಮೂರ್ತಿ ಹಾಗೂ ಶ್ರೀ ಬಿ.ಸಿ. ಸತೀಶ್ ಕುಮಾರ್ ಅವರ ಸಹಯೋಗದಲ್ಲಿ ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ಗಣ್ಯತಿ ಗಣ್ಯರು ಜ್ಯೋತಿ ಬೆಳಗಿಸಿ ಚಾಲನೆ ನೀಡಿ :- ಸಿದ್ದಯ್ಯನಕೋಟೆಯ ಚಿತ್ತರಗಿಮಠದ ಬಸವಲಿಂಗ ಮಹಾ ಸ್ವಾಮೀಜಿ ಮಾತನಾಡಿ :- “ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಶಿಕ್ಷಣ ಮತ್ತು ಸಂಸ್ಕಾರವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಶಿಕ್ಷಣವು ವ್ಯಕ್ತಿಗೆ ಜ್ಞಾನ, ವಿವೇಕ ಮತ್ತು ಆತ್ಮವಿಶ್ವಾಸವನ್ನು ನೀಡಿದರೆ, ಸಂಸ್ಕಾರವು ಉತ್ತಮ ವ್ಯಕ್ತಿತ್ವ ಹಾಗೂ ಸಮಾಜಮುಖಿ ಜೀವನವನ್ನು ರೂಪಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳಿಂದ ಯುವಜನತೆ ದೂರವಿದ್ದು, ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ನಡೆಸಬೇಕು. ಉತ್ತಮ ಸಂಸ್ಕಾರ ಮತ್ತು ಸದಾಚಾರವನ್ನು ಬೆಳೆಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.ವಿಶೇಷವಾಗಿ 12ನೇ ಶತಮಾನವು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಮತ್ತು ಸಾಮಾಜಿಕ ಪರಿವರ್ತನೆಯ ಯುಗವಾಗಿತ್ತು. ಈ ಮಹೋನ್ನತ ಬದಲಾವಣೆಗೆ ಜಗದ್ಗುರು ಬಸವಣ್ಣನವರ ಪ್ರಗತಿಪರ ಚಿಂತನೆಗಳೇ ಮೂಲ ಕಾರಣ. ಅವರ ಸಾಧನೆ ಹಾಗೂ ಸಿದ್ಧಾಂತಗಳು ಇಂದಿಗೂ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ” ಎಂದರು.
ಪ್ರತಿಭಾ ಪುರಸ್ಕಾರ: ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ, SSLC ಮತ್ತು PUC ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ‘ಸುಕನ್ಯಾ ಸಮೃದ್ಧಿ ಯೋಜನೆ’ಯ ದಾಖಲೆಗಳು ಹಾಗೂ ಚಾಲನಾ ಪರವಾನಗಿ ಪತ್ರಗಳನ್ನು ಅಧಿಕೃತವಾಗಿ ವಿತರಿಸಲಾಯಿತು.ಇತ್ತೀಚೆಗೆ ನಿಧನರಾದ ರಾಜ್ಯದ ಮಾಜಿ ಸಚಿವರಾದ ಡಿ. ಸುಧಾಕರ್ ಅವರಿಗೆ ಕಾರ್ಯಕ್ರಮದಲ್ಲಿ ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು, ಸಾಹಿತಿಗಳು, ಚಳ್ಳಕೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯವಾಣಿ ಚಳ್ಳಕೆರೆ ವರದಿಗಾರರಾದ ಕೋರ್ಲುಕುಂಟೆ ತಿಪ್ಪೇಸ್ವಾಮಿ ರವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸೈನ್ಸ್ ಸಿಟಿ ಖ್ಯಾತಿಯ ಸುರೇಶ್ ಬೆಳಗೆರೆ ಹಾಗೂ ಜ್ಞಾನಜ್ಯೋತಿ ನ್ಯೂಸ್ ಪ್ರಧಾನ ಸಂಪಾದಕರು, ಜಿಲ್ಲಾ ವರದಿಗಾರರಾದ ಅರುಣ್ ಕುಮಾರ್ ಎಸ್. (ದೊಡ್ಡ ಉಳ್ಳಾರ್ತಿ) ಅವರನ್ನೂ ಪತ್ರಿಕೋದ್ಯಮ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ಸಾಣಿಹಳ್ಳಿ ನಾಗರಾಜು ಮತ್ತು ಸಂಗಡಿಗರಿಂದ ಭಕ್ತಿಪೂರ್ವಕ ವಚನಗಾಯನ ಹಾಗೂ ಮುತ್ತುರಾಜ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ಪ್ರಮುಖ ಸಮಾರಂಭದಲ್ಲಿ ಬಿ.ಸಿ. ವೆಂಕಟೇಶ್ ಮೂರ್ತಿ,ಬಿ.ಸಿ. ಸತೀಶ್ ಕುಮಾರ್, ಕಾರ್ತಿಕ್ ಎಸ್. ಮೂರ್ತಿ, ಚಿದಾನಂದಮೂರ್ತಿ, ಲಕ್ಷ್ಮಣ್, ಯು.ಎಸ್. ವಿಷ್ಣುಮೂರ್ತಿರಾವ್, ಎಂ.ಎನ್. ಮೃತ್ಯುಂಜಯ, , ಬೋರಣ್ಣ, ಜಗದೀಶ್ ಸೇರಿದಂತೆ ಸ್ಥಳೀಯ ನಾಯಕರು, ಪ್ರಮುಖ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು












