ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಸಚಿವ ಸ್ಥಾನ ಸಿಗಲಿ; ಅಯ್ಯಪ್ಪ ದೇವಸ್ಥಾನ–ಮಸೀದಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

ಸಚಿವರಾದರೆ ಚಿತ್ರದುರ್ಗದಿಂದ ಶಬರಿಮಲೆವರೆಗೆ ಬರಿಗಾಲಿನಲ್ಲಿ ಪಾದಯಾತ್ರೆ: ಕೆಸಿವಿ ಅಭಿಮಾನಿಗಳ ಸಂಕಲ್ಪ

ಚಿತ್ರದುರ್ಗ ಜುಲೈ 27: ಚಿತ್ರದುರ್ಗವು ಅಭಿವೃದ್ಧಿಯ ಪಥದಲ್ಲಿ ಸಾಗಿಸುತ್ತಿರುವಂತಹ ಜನ ಮೆಚ್ಚಿದ ನಾಯಕ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ದರ್ಜೆಯಲ್ಲಿ ಸಚಿವ ಸ್ಥಾನ ದೊರಕಲಿ ಎಂದು ಕೆಸಿವಿ ಅಭಿಮಾನಿಗಳು ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ.
ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಾಗೂ ಬಡಮಖಾನ್ ಮಸೀದಿಯಲ್ಲಿ ಸೋಮವಾರ ಕೆಸಿವಿ ಅಭಿಮಾನಿಗಳು ವತಿಯಿಂದ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಸಚಿವ ಸ್ಥಾನಸಿಗಲೆಂದು ದೇವರ ಮೊರೆ ಹೋಗಿದ್ದಾರೆ.

Thank you for reading this post, don't forget to subscribe!

ಚಿತ್ರದುರ್ಗ ನಗರವನ್ನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಾಸಕರು ಈಗಾಗಲೇ ಸಾಕಷ್ಟು ಸರ್ಕಾರದಿಂದ ಅನುದಾನವನ್ನು ಬಳಸುತ್ತಾ ಚಿತ್ರದುರ್ಗ ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಬಳಿ ನೇರವಾಗಿ ವಿಶೇಷ ಅನುದಾನವನ್ನು ತಂದು ಕೆಲಸ ಮಾಡುವ ಸಾಮರ್ಥ್ಯ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರಿಗೆ ಇದೆ, ಐತಿಹಾಸಿಕ ಹಿನ್ನೆಲೆ ಹೊಂದಿರುವAತಹ ಏಳು ಸುತ್ತಿನ ಕಲ್ಲಿನ ಕೋಟೆಯ ಪ್ರಸಿದ್ಧತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಕನಸನ್ನ ಹೊಂದಿದ್ದಾರೆ ಹಾಗಾಗಿ ಕೆಲಸ ಮಾಡುವ ವ್ಯಕ್ತಿಗೆ ಸಚಿವ ಸ್ಥಾನ ಸಿಕ್ಕಾಗ ಮಾತ್ರ ಯಾವುದೇ ಒಂದು ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ ಆ ಒಂದು ನ
ನಿಟ್ಟಿನಲ್ಲಿ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಮುಂಚೂಣಿಯಲ್ಲಿದ್ದಾರೆ ಹಾಗಾಗಿ ಶಾಸಕರಿಗೆ ಮಂತ್ರಿ ಸ್ಥಾನ ದೊರಕಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ನವೆಂಬರ್ ತಿಂಗಳಿನಲ್ಲಿ ಚಿತ್ರದುರ್ಗ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದವರೆಗೆ ಬರಿಗಾಲಿನಲ್ಲಿ ಪಾದಯಾತ್ರೆಯನ್ನು ಮಾಡಲಾಗುವುದು ಎಂದು ಕೊಕೊನಟ್ ಬಸವರಾಜ್ ತಿಳಿಸಿದ್ದಾರೆ.

ಕೆಸಿವಿ ಅಭಿಮಾನಿ ಮೊಹಮ್ಮದ್ ವಾಸಿಮ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯ ಹಲವು ತಾಲೂಕಿನ ಹಿರಿಯ ಶಾಸಕರು ಇದ್ದಾರೆ, ಆದರೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಯುವಕರಾಗಿದ್ದು ಕ್ಷೇತ್ರದ ವಿವಿಧಡೆ ಮಿಂಚಿನAತೆ ಓಡಾಡುತ್ತಿದ್ದಾರೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಲವು ಭಾಗಗಳಲ್ಲಿ ಈಗಾಗಲೇ ಅಭಿವೃದ್ಧಿಗಳ ಭೂಮಿ ಪೂಜೆಯನ್ನು ನೆರವೇರಿಸುತ್ತಿದ್ದಾರೆ ಇವುಗಳ ಜೊತೆಗೆ ಚಿತ್ರದುರ್ಗದ ಬದಲಾವಣೆಯ ಕನಸನ್ನ ಹೊತ್ತು ಸಾಗುತ್ತಿರುವ ಶಾಸಕರು ನಮ್ಮ ಜೊತೆಗಿರುವುದು ಹೆಮ್ಮೆಯಾದ ವಿಚಾರ ಹಾಗಾಗಿ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ರಾಜಕಾರಣಿಗಳು ಇದ್ದಾರೆ ಆದರೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರ ಯುವಕರಾಗಿದ್ದಾರೆ ಈ ಬಾರಿಯ ಸಚಿವ ಸಂಪುಟದಲ್ಲಿ ಯುವಕರಿಗೆ ಸಚಿವ ಸ್ಥಾನ ದೊರೆಯಬೇಕು, ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಯೋಜನೆಗಳಿಗೆ ಸಂಬAಧಿಸಿದAತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದಾರೆ ಹಾಗಾಗಿ ಶಾಸಕ ಕೆ.ಸಿ ವಿರೇಂದ್ರ ಪಪ್ಪಿ ಅವರಿಗೆ ಸಚಿವ ಸ್ಥಾನ ದೊರೆಯಲೆಂದು ದೇವರಲ್ಲಿ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಕ್ಷಯ್ ಕಠಾರೆ, ಕವಾಡಿಗರಹಟ್ಟಿ ಜಗದೀಶ್, ದೇವ ರತ್ನ ಮಂಜು, ಇಮ್ತಿಯಾಜ್, ವಿಜಯ್, ಅಕ್ಷಯ್, ಮದಕರಿಪುರ ನವೀನ್, ಸಂತು ,ವಿಜಯ್, ನಂದು ರಮೇಶ್,ಗೋವಿಂದಪ್ಪ ಇದ್ದರು.

ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಸಚಿವ ಸ್ಥಾನ ಸಿಗಲಿ; ಅಯ್ಯಪ್ಪ ದೇವಸ್ಥಾನ–ಮಸೀದಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ