ಸಮಾನತೆ ಸಾರಿದ ಇಬ್ಬರು ಮಹಾನ್ ಚೇತನಗಳಿಗೆ ಭವ್ಯ ನಮನ: ಅಂಬೇಡ್ಕರ್–ವಿಶ್ವಗುರು ಬಸವಣ್ಣ ಜಯಂತಿ ಆಚರಣೆ”.
ವರದಿ:- ಅರುಣ್ ಕುಮಾರ್. ಎಸ್ (ದೊಡ್ಡ ಉಳ್ಳಾರ್ತಿ)
ಚಳ್ಳಕೆರೆ :- ಸಂವಿಧಾನ ಶಿಲ್ಪಿ, ಜಗತ್ತು ಕಂಡ ಮಹಾನ್ ಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಹಾಗೂ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಹಾಗೂ ದಿವಂಗತ ಡಿ.ಸುಧಾಕರ್ ರವರ ನುಡಿನಮನ ಕಾರ್ಯಕ್ರಮವನ್ನು ಚಳ್ಳಕೆರೆ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ಹಿತರಕ್ಷಣಾ ವೇದಿಕೆ
ಮೂರ್ತಿ ಇಂಡಸ್ಟ್ರೀಸ್ ಅಂಡ್ ಡೆವೆಲಪ್ಪರ್ ಗ್ರೂಪ್ಸ್ ಸಂಯುಕ್ತಾಶ್ರಯದಲ್ಲಿ
ಶ್ರೀ ಡಾ. ವೈ. ರಾಜಾರಾಮ್ ಸ್ವಾಮಿಗಳು ಪೀಠಾಧ್ಯಕ್ಷರು. ನರಹರಿ ಸದ್ಗುರುಪೀಠ ನರಹರಿನಗರ ಚಳ್ಳಕೆರೆ.ಇವರ ದಿವ್ಯ ಸಾನಿಧ್ಯದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣ ಹಾಗೂ ದಿವಂಗತ ಸಚಿವರು ಡಿ.ಸುಧಾಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಪ್ರಾಸ್ತವಿಕವಾಗಿ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ ಬಿ.ಸಿ ಸಂಜೀವ ಮೂರ್ತಿ ಮಾತನಾಡಿ:-
ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವಣ್ಣನವರು ಯಾವುದೇ ಒಂದು ಜಾತಿ, ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರದೆ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣ ನವರು ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ಚೇತನಗಳಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು .
ಶಿಕ್ಷಣ,ಮಹಿಳಾ ಸಮಾನತೆಗೆ.ಸಮ ಸಮಾಜದ ಬದಲಾವಣೆಗೆ ತನ್ನೆಲ್ಲ ಜೀವನ ಮೂಡಿಪಾಗಿಟ್ಟ
ಮಹಾ ಚಿಂತಕರು ಎಂದರು. ಇಂದಿನ ಯುವಜನತೆ ಅಂಬೇಡ್ಕರ್ ಮತ್ತು ಬಸವಣ್ಣರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಶಿಕ್ಷಣ, ಶಿಸ್ತು, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು:- ನಗರಂಗೆರೆ ಗ್ರಾಮ ಪಂಚಾಯತಿ ಹಿತ ರಕ್ಷಣಾ ವೇದಿಕೆಯು ಒಂದು ಸಂಘಟನೆಯಾಗಿದ್ದು. ಶಿಕ್ಷಣ, ಗ್ರಾಮಗಳ ಮೂಲಸೌಕರ್ಯಗಳ ಅಭಿವೃದ್ಧಿ ,ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಂಘಟಿಸುವುದೇ ಇದರ ಮೊದಲ ಧ್ಯೇಯವಾಗಿದೆ.ನಗರಂಗೆರೆ, ಸಿದ್ದಾಪುರ, ಲಕ್ಷ್ಮೀಪುರ ಹಾಗೂ ಹೊಟ್ಟಪ್ಪನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಮಾಜ ಸೇವಾ ಕಾರ್ಯಕ್ರಮಗಳು, ಆರೋಗ್ಯ ತಪಾಸಣಾ ಶಿಬಿರಗಳು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕಾರ್ಯಕ್ರಮಗಳು, ಪರಿಸರ ಸಂರಕ್ಷಣಾ ಅಭಿಯಾನಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ವೇದಿಕೆ ಕಾರ್ಯನಿರ್ವಹಿಸುತ್ತದೆ.
ಮೂರ್ತಿ ಇಂಡಸ್ಟ್ರೀಸ್ ಅಂಡ್ ಗ್ರೂಪ್ಸ್ ಸಂಸ್ಥೆಯು ಸಹ ಗ್ರಾಮೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದು, ಉದ್ಯೋಗ ಸೃಷ್ಟಿ, ಯುವಕರಿಗೆ ಅವಕಾಶ ಕಲ್ಪಿಸುವುದು ಹಾಗೂ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಗಳನ್ನು ಕೈಗೊಳ್ಳುವುದು ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದ್ದು, ಇಂತಹ ಸನ್ಮಾನಗಳು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಬಡ ಹಾಗೂ ಮಧ್ಯಮ ವರ್ಗದ ಯುವಕರಿಗೆ ವರದಾನವಾಗಿದೆ.ಈ ಯೋಜನೆಯ ಮೂಲಕ ಚಾಲಕರು ಕಾನೂನುಬದ್ಧವಾಗಿ ವಾಹನ ಚಾಲನೆ ಕಲಿಯುವುದರ ಜೊತೆಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಪಡೆಯುತ್ತಾರೆ. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಲು ಸಹ ಸಹಕಾರಿಯಾಗುತ್ತದೆ. ಪರವಾನಗಿ ಪಡೆದ ಯುವಕರು ಖಾಸಗಿ ಸಂಸ್ಥೆಗಳು, ಸಾರಿಗೆ ಕ್ಷೇತ್ರ ಹಾಗೂ ವಿವಿಧ ಉದ್ಯೋಗಗಳಲ್ಲಿ ಅವಕಾಶಗಳನ್ನು ಪಡೆದು ಸ್ವಾವಲಂಬಿಗಳಾಗಬಹುದು.
ಪ್ರತಿದಿನ ಸಾವಿರಾರು ಜನರು ರಸ್ತೆ ಅಪಘಾತಗಳಲ್ಲಿ ಗಾಯಗೊಂಡು, ಕೆಲವರು ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅಜಾಗರೂಕ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ನಿಯಮಬದ್ಧವಾಗಿ ವಾಹನ ಪರವಾನಗಿ ಪಡೆದು, ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ ಎಂದರು.
ಸುಕನ್ಯಾ ಸಮೃದ್ಧಿ ಯೋಜನೆ:-
ಹೆಣ್ಣುಮಕ್ಕಳು ಕುಟುಂಬದ ಬೆಳಕು ಮಾತ್ರವಲ್ಲ, ಸಮಾಜ ಮತ್ತು ರಾಷ್ಟ್ರದ ಶಕ್ತಿಯಾಗಿದ್ದಾರೆ. ಅವರ ಶಿಕ್ಷಣ, ಆರೋಗ್ಯ,ಆರ್ಥಿಕ ಮತ್ತು ಭವಿಷ್ಯದ ಬೆಳಕಾಗಲಿದೆ ಈ ಯೋಜನೆ,
ಈ ಯೋಜನೆಯಡಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಒಂದು ದಿನಕ್ಕೆ 5 ರೂಪಾಯಿಗಳನ್ನು ಉಳಿತಾಯ ಮಾಡುವ ಮೂಲಕ 1 ವರ್ಷಕ್ಕೆ 1,825 ರೂಪಾಯಿಗಳಂತೆ ಆ ಮಗುವಿನ 24 ವರ್ಷಕ್ಕೆ 1,00000 (ಒಂದು ಲಕ್ಷ)ಹಣ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಸಿಗಲಿದೆ ಆ ಮಗುವಿನ ಭವಿಷ್ಯದ ಜೀವನಕ್ಕೆ ಉಳಿತಾಯವಾಗಲಿದೆ ಎಂದರು.
ಹೆಣ್ಣುಮಕ್ಕಳ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿ ಹಾಗೂ ವಿವಾಹದಂತಹ ಪ್ರಮುಖ ಅಗತ್ಯಗಳಿಗೆ ಈ ಯೋಜನೆ ಆರ್ಥಿಕ ನೆರವಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಿ ಉಳಿತಾಯದ ಮನೋಭಾವ ಬೆಳೆಸಲು ಸಹಕಾರಿಯಾಗಿದೆ. ಇಂದು ಅನೇಕ ಪೋಷಕರು ತಮ್ಮ ಮಗಳ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಅಂತಹ ಪೋಷಕರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಒಂದು ಭರವಸೆಯ ಆಶಾಕಿರಣವಾಗಿದೆ. ಪ್ರತಿಯೊಬ್ಬರೂ ಈ ಯೋಜನೆ ಮೂಲಕ ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕು. ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಆರ್ಥಿಕ ಭದ್ರತೆ ದೊರೆತಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ ಎಂದರು.
ದಿವಂಗತ ಡಿ. ಸುಧಾಕರ್ ರವರನ್ನು ನೆನೆದು:-
ಡಿ. ಸುಧಾಕರ್ ಅವರು ತಮ್ಮ ಜೀವನದುದ್ದಕ್ಕೂ ಸರಳತೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಬದುಕಿದ ವ್ಯಕ್ತಿಯಾಗಿದ್ದರು. ಶಿಕ್ಷಣಕ್ಕೆ, ಅಭಿವೃದ್ಧಿಗೆ, ಸಮಾಜದ ಒಳಿತಿಗಾಗಿ ಸಹ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಅವರ ನಡೆ-ನುಡಿ, ಸಹಾಯ ಹಸ್ತ ಹಾಗೂ ಎಲ್ಲರೊಂದಿಗೆ ಬೆರೆತು ಬದುಕುವ ಗುಣ ಇಂದು ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ ಎಂದರು.
ನರಹರಿ ಸದ್ಗುರು ಪೀಠದ ಪೀಠಾಧ್ಯಕ್ಷ
ಡಾ.ರಾಜಾರಾಮ್ ಸ್ವಾಮಿಗಳು ಮಾತನಾಡಿ:- ನಗರಂಗೆರೆ ಗ್ರಾಮ ಪಂಚಾಯಿತಿ ಹಿತಾರಕ್ಷಣಾ ವೇದಿಕೆ, ಮೂರ್ತಿ ಇಂಡಸ್ಟ್ರೀಸ್ ಮತ್ತು ಗ್ರೂಪ್ ನ ಅಧ್ಯಕ್ಷರು ಕಾರ್ಯಕ್ರಮದ ಪ್ರಮುಖ ರೂವಾರಿಯಾಗಿರುವ ಸಮಾಜಸೇವಕ ಹಾಗೂ ಉದ್ಯಮಿ ಬಿ.ಸಿ. ಸಂಜೀವಮೂರ್ತಿ ಅವರು ಗ್ರಾಮೀಣ ಭಾಗದ ಅಭಿವೃದ್ಧಿ, ಶಿಕ್ಷಣ ಪ್ರೋತ್ಸಾಹ, ದೇವಾಲಯಗಳ ಜೀರ್ಣೋದ್ಧಾರ ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಜನಮೆಚ್ಚುಗೆ ಗಳಿಸಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ, ಯುವಕರಿಗೆ ಉಚಿತ ವಾಹನ ಪರವಾನಗಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿ ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ.ನಗರಂಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿ, ಜನಸಾಮಾನ್ಯರ ಸಮಸ್ಯೆಗಳ ಪರಿಹಾರ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಿ.ಸಿ. ಸಂಜೀವ ಮೂರ್ತಿ ರವವರ ಕೊಡುಗೆ ಅಪಾರವೆಂದರು.
ಪತ್ರಕರ್ತ ಕೊರ್ಲುಕುಂಟೆ ತಿಪ್ಪೇಸ್ವಾಮಿ ಮಾತನಾಡಿ ಬುದ್ದ,ಬಸವ,ಅಂಬೇಡ್ಕರ್ ಅವರ ಆದರ್ಶಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ, ಅಸೂಯೆಗಳನ್ನು ತೊಡೆದು ಹಾಕಬೇಕಾಗಿದೆ.ನನಗೂ ನಾಳೆ ಸಾವಿದೆ ಎಂದು ತಿಳಿಯುವ ಮನುಷ್ಯ ಸಣ್ಣ ಇರಿವೆಗೂ ನೋಯಿಸಲಾರ ಎನ್ನುವ ಬುದ್ಧನ ವಿಚಾರ ಜಗತ್ತಿಗೆ ಅರ್ಥವಾಗಬೇಕು.ಅನುಭವ ಮಂಟಪದಲ್ಲಿ ನಾನೊಬ್ಬನೇ ಭಕ್ತ ಉಳಿದವರೆಲ್ಲ ಶಿವಶರಣರು ಎಂದೇಳಿ ವಿಶ್ವಗುರು ಅನಿಸಿಕೊಂಡ ಬಸವಣ್ಣನ ನಡೆ ಸಮಾಜ ಕಲಿಯಬೇಕು. ಶಿಕ್ಷಣದ ಬೆಳಕಲ್ಲಿ ಶೋಷಣೆಯಿಂದ ಬಿಡುಗಡೆಯ ದಾರಿ ಹೇಳಿಕೊಟ್ಟ ಅಂಬೇಡ್ಕರ್ ಆದರ್ಶವಾಗಬೇಕು ಎಂದುರು.
ಶಿಕ್ಷಣ, ಸಂಘಟನೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿ.ಸಿ. ಸಂಜೀವಮೂರ್ತಿ ಅವರು ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ ಗುಣ ಹೊಂದಿದ್ದಾರೆ. ಮಹನೀಯರ ಆದರ್ಶಗಳನ್ನು ಜನಸಾಮಾನ್ಯರ ಬದುಕಿಗೆ ತಲುಪಿಸುವ ಕಾರ್ಯದಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿರುವುದು ಸಂತಸದ ವಿಷಯವಾಗಿದೆ ಮುಂದಿನ ದಿನಗಳಲ್ಲಿಯೂ ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.














